Relationship After Marriage: ವೈವಾಹಿಕ ಜೀವನದ ಈ ಗುಟ್ಟನ್ನು ಗೆಳೆಯರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು!

Don't share the secret of your relationship after marriage

Relationship After Marriage: ಮದುವೆ ಬಳಿಕ ನೀವು ವೈವಾಹಿಕ (Relationship After Marriage) ಜೀವನದಲ್ಲಿ ಮುಳುಗುತ್ತೀರಿ, ಆಗ ಸ್ನೇಹಿತರಿಗೆ ಕಡಿಮೆ ಸಮಯ ನೀಡಬೇಕಾಗುತ್ತದೆ. ಆದರೂ, ಸ್ನೇಹದ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲ. ಆಗಾಗ ನೀವು ನಿಮ್ಮ ವೈಯಕ್ತಿಕ ವಿಷಯಗಳನ್ನು ನಿಮ್ಮ ಉತ್ತಮ ಸ್ನೇಹಿತನೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತೀರಿ.

ಆದರೆ ಐರ್ಲೆಂಡ್‌ನ ಖ್ಯಾತ ಕವಿ ಆಸ್ಕರ್ ವೈಲ್ಡ್ ಹೇಳುವ ಪ್ರಕಾರ, ಸ್ನೇಹ ಎನ್ನುವುದು ಪ್ರೀತಿ ಪ್ರೇಮಕ್ಕಿಂತ ಮಿಗಿಲಾದುದು ಆಗಿರುತ್ತದೆಯಂತೆ. ಸ್ನೇಹ ಎಷ್ಟೇ ಗಾಢವಾಗಿದ್ದರೂ ಮದುವೆಯ ನಂತರ ಸ್ನೇಹದ ಬಗೆಗಿನ ಧೋರಣೆ ಸ್ವಲ್ಪ ಮಟ್ಟಿಗೆ ಬದಲಾಗುತ್ತದೆ. ವೈವಾಹಿಕ ಜೀವನದಲ್ಲಿ ಮಗ್ನರಾಗಿರುವ ಕಾರಣ, ಸ್ನೇಹಕ್ಕೆ ಮೊದಲಿನ ಪ್ರಾಮುಖ್ಯತೆ ನೀಡುವುದು ಸಾಧ್ಯವಾಗುವುದಿಲ್ಲ. ಆದರೆ ಕೆಲವರು ಕೆಲವೊಮ್ಮೆ ವೈಯಕ್ತಿಕ ವಿಷಯಗಳನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಮದುವೆಯ ನಂತರ ಕೆಲವೊಂದು ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲೇಬಾರದಂತೆ.

ಮದುವೆಯ ನಂತರ ಈ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ :
ಮದುವೆಯ ನಂತರ, ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ತನ್ನವರೆಂದು ಪರಿಗಣಿಸಿ ನಿಮ್ಮ ಮೇಲಿನ ನಂಬಿಕೆಯಿಂದ ಅವರು ನಿಮ್ಮಲ್ಲಿ ಅವರ ಜೀವನದಲ್ಲಿ ನಡೆದು ಹೋದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಆ ನಂಬಿಕೆಯನ್ನು ಯಾವತ್ತೂ ಮುರಿಯಬೇಡಿ. ನಿಮ್ಮ ಹೆಂಡತಿ ಅಥವಾ ಗಂಡನ ಹಿಂದಿನ ಜೀವನದಲ್ಲಿ ಏನು ನಡೆದಿತ್ತು ಎನ್ನುವುದನ್ನು ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ಹಾಗೆ ಮಾಡಿದರೆ ನಿಮ್ಮ ಈ ನಡೆಯಿಂದ ನಿಮ್ಮ ಜೀವನ ಸಂಗಾತಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಗೋಪುರ ಒಂದೇ ಕ್ಷಣಕ್ಕೆ ಕುಸಿದು ಬೀಳಬಹುದು. ಇದು ದಾಂಪತ್ಯ ಮುರಿಯುವ ಹಂತಕ್ಕೂ ಕೊಂಡೊಯ್ಯಬಹುದು.

ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಂದಿಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಾರದು. ಕಷ್ಟಗಳು ಪ್ರತಿಯೊಬ್ಬರಿಗೂ ಇರುತ್ತವೆ. ನಿಮ್ಮ ಬಡತನದ ಜೀವನ, ಸಮಸ್ಯೆಗಳ ಬಗ್ಗೆ ಆಪ್ತ ಸ್ನೇಹಿತರ ಬಳಿ ಹಂಚಿಕೊಳ್ಳುವುದು ನಿಮಗೆ ಮುಳುವಾಗಬಹುದು. ಹೀಗಾಗಿ ಈ ವಿಷಯದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು.

ಇನ್ನು ಮದುವೆಯ ನಂತರ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ರಹಸ್ಯವಾಗಿಡಬೇಕು. ಕುಟುಂಬದಲ್ಲಿ ತುಂಬಾ ಖಾಸಗಿಯಾಗಿರುವ ಎಲ್ಲವನ್ನೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಸ್ನೇಹ – ಸ್ನೇಹಿತರು ಎಷ್ಟೇ ವಿಶೇಷವಾಗಿದ್ದರೂ, ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಿತಿಗಳಿರುತ್ತವೆ. ಸಂಗಾತಿಯೊಂದಿಗಿನ ವೈಯಕ್ತಿಕ ಫೋಟೋಗಳು, ವೀಡಿಯೊಗಳು, ಚಾಟ್‌ಗಳು ಅಥವಾ ಸಂದೇಶಗಳನ್ನು ಎಂದಿಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ವೈವಾಹಿಕ ಜೀವನದ ಕೆಲವೊಂದು ಅಂಶಗಳು ಖಾಸಗಿಯಾಗಿ ಉಳಿಯದಿದ್ದರೆ, ಆ ಸಂಬಂಧದ ಮಹತ್ವವು ಕೊನೆಗೊಳ್ಳುತ್ತದೆ.

ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ಮದುವೆಯ ನಂತರ ತನ್ನ ಅತ್ತೆಯ ಮಾತು, ನಡತೆ ಅಥವಾ ನಡವಳಿಕೆಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಅತ್ತೆ, ಅತ್ತೆ ಮನೆ ವಿಚಾರ ಮತ್ತು ನಿಮ್ಮ ಅಭಿಪ್ರಾಯಗಳು ಹೊಂದಿಕೆಯಾಗದಿದ್ದರೂ, ಆ ಬಗ್ಗೆ ನಿಮ್ಮ ಸ್ನೇಹಿತರೊಂದಿಗೆ ಕೆಟ್ಟದಾಗಿ ಮಾತನಾಡಲು ಹೋಗಬೇಡಿ. ಕೆಲವರು ತಮ್ಮ ಮನಸ್ಸನ್ನು ಹಗುರಗೊಳಿಸಲು ಈ ರೀತಿ ಮಾತನಾಡುತ್ತಾರೆ. ಆದರೆ ನೆನಪಿರಲಿ ನಿಮ್ಮ ಜೀವನ ಸಂಗಾತಿಯ ಕುಟುಂಬವನ್ನು ನೀವು ಗೌರವಿಸದಿದ್ದರೆ, ಜೀವನ ಸಂಗಾತಿ ಅದನ್ನು ಅವಮಾನವೆಂದು ಪರಿಗಣಿಸುತ್ತಾರೆ. ಇದು ಸಂಬಂಧದಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತದೆ.

 

ಇದನ್ನು ಓದಿ: Summer makeup: ಬೇಸಿಗೆಗೆ ಬೇಗನೆ ಮೇಕಪ್​ ಹಾಳಾಗ್ತಾ ಇದ್ಯಾ? ಈ ಟಿಪ್ಸ್​ ಫಾಲೋ ಮಾಡಿ 

Leave A Reply

Your email address will not be published.