Maharastra: ಮಗಳ ಮದ್ವೆಯಲ್ಲಿ 10 ಸಾವಿರ ಜನರನ್ನು ಸೇರಿ, 5 ಸಾವಿರ ದನಕರಗಳಿಗೂ ಊಟ ಹಾಕಿಸಿದ ರೈತ!
Unique marriage in Maharashtra Farmer feed cows dogs and birds vacation of his daughter marriage
Unique marriage in Maharashtra: ಶ್ರೀಮಂತರು, ಬ್ಯುಜಿನೆಸ್ಮ್ಯಾನ್(Business man), ಸೆಲೆಬ್ರಿಟಿಗಳು(Celebrates) ನೂರಾರು ಕೋಟಿ ಖರ್ಚು ಮಾಡಿ ತಮ್ಮ ಮಕ್ಕಳ, ಮೊಮ್ಮಕ್ಕಳ ಮದುವೆ ಮಾಡೋದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಂದೆಡೆ ರೈತನೊಬ್ಬ 10 ಸಾವಿರಕ್ಕೂ ಹೆಚ್ಚು ಜನರಿಗೆ ಹಾಗೂ ಸಾವಿರಾರು ದನಕರುಗಳಿಗೂ ಆಹಾರ ನೀಡುವ ಮೂಲಕ ಶ್ರೀಮಂತನೆನಿಸಿ ಭಾರೀ ಸುದ್ದಿಯಾಗಿದ್ದಾರೆ (Unique marriage in Maharashtra).
ಹೌದು, ಮಹಾರಾಷ್ಟ್ರದ(Maharastra) ಬುಲ್ಡಾನ(Buldana) ಜಿಲ್ಲೆಯ ಕೊಥಾಲಿ(Kothi) ಎಂಬ ಸಣ್ಣ ಹಳ್ಳಿಯ ಸಾಮಾನ್ಯ ರೈತ ಪ್ರಕಾಶ್ ರಾಥೋಡ್(Prakash Rathod) ತನ್ನ ಮಗಳ ವಿವಾಹವನ್ನು ವಿಶೇಷವಾಗಿ ಆಚರಿಸಿದ್ದಾನೆ. ತನ್ನ ಒಬ್ಬಳೇ ಒಬ್ಬಳು ಮಗಳ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಿದ್ದಲ್ಲದೆ, ವಿವಾಹ ಮಹೋತ್ಸವಕ್ಕೆ ಹತ್ತಾರು ಹಳ್ಳಿಗಳ ಜನರನ್ನು ಆಹ್ವಾನಿಸಿ ಭರ್ಜರಿ ಔತಣ ನೀಡಿರುವ ಸುದ್ದಿ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಸಾಮಾನ್ಯವಾಗಿ ಆಡಂಬರದ ಮದುವೆ ಎಂದರೆ ವಿಶೇಷ ಸ್ನೇಹಿತರು ಅಥವಾ ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ಆದರೆ ಈ ರೈತ ಹತ್ತಿರದ ಐದು ಹಳ್ಳಿಗಳ ಜನರನ್ನು ಆಹ್ವಾನಿಸಿದ್ದಾರೆ. ಸುಮಾರು 10,000 ಜನರಿಗೆ ಊಟ ಹಾಕುವುದರ ಜೊತೆಗೆ ಪ್ರತಿಯೊಬ್ಬ ರೈತರ ಜಾನುವಾರುಗಳಿಗೂ ಮೇವಿನ ವ್ಯವಸ್ಥೆ ಮಾಡಿಸುವ ಮೂಲಕ ಮಾದರಿ ಮದುವೆ ಮಾಡಿದ್ದಾರೆ.
ಅಂದಹಾಗೆ ಹಳ್ಳಿಯ ಹತ್ತಿರದ 5 ಎಕರೆ ಜಾಗದಲ್ಲಿ ಮಂಟಪ ನಿರ್ಮಾಣ ಮಾಡಿ ಹಸುಗಳಿಗೆ 10 ಕ್ವಿಂಟಾಲ್ ಇಂಡಿ, 10 ಟ್ರಾಲಿ ಒಣ ಮೇವು, ನಾಯಿಗಳಿಗೆ ಪ್ರತ್ಯೇಖ ಊಟ, ಇರುವೆಗಳಿಗೆ 2 ಚೀಲ ಸಕ್ಕರೆ, ಪ್ರದೇಶದ ಪಕ್ಷಿಗಳು ಮತ್ತು ನಾಯಿಗಳಿಗೆ ಅಕ್ಕಿ ಕಾಳುಗಳನ್ನು ಸಹ ನೀಡಲಾಗಿದೆ. ‘ಯಾವ ಜೀವಿಯೂ ಹಸಿವಿನಿಂದ ಇರಬಾರದು ಎಂದು ರೈತ ಪ್ರಕಾಶ್ ಹೇಳಿದ್ದಾರೆ.