Counting of votes : ಮೇ. 13 ರಂದು ಮತದಾನ ಎಣಿಕೆ: ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ!
Counting of votes on May 13 prohibition order across state
Counting of votes : ಈಗಾಗಲೇ ಕರ್ನಾಟಕ ವಿಧಾನಸಭೆ ಮತದಾನ (Karnataka Election 2023) ಪ್ರಕ್ರಿಯೆ ಮುಕ್ತಾಯ ಆಗಿದ್ದು, ಈ ಮತಗಳನ್ನು ಮೇ.13ರಂದು ಏಣಿಕೆ ಮಾಡಲಾಗುತ್ತಿದೆ. ಮತದಾನ ಏಣಿಕೆ ( Counting of votes) ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತಎಣಿಕೆ ಕೇಂದ್ರದ ಸುತ್ತಾಮುತ್ತ ನಿಷೇಧವನ್ನು ಜಾರಿಗೊಳಿಸಲಾಗಿದೆ.
ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಆದೇಶ ಹೊರಡಿಸಿದ್ದು, ಅದರಲ್ಲಿ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ರ ಮತದಾನದ ಮತಎಣಿಕೆ ದಿನಾಂಕ 13-05-2023 ರಂದು ನಡೆಯಲಿದೆ. ಮಂಡ್ಯದಲ್ಲಿ ನಡೆಯಲಿರುವ ಮತಏಣಿಕೆ ದಿನದಂದು ಮತ್ತು ಮತಎಣಿಕೆ ಕಾರ್ಯವು ಮುಗಿಯುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ಅವರ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಮೆರವಣಿಗೆ ಮೂಲಕ
ವಿಜಯೋತ್ಸವವನ್ನು ಚುನಾವಣಾ ಮತಎಣಿಕೆ ಕಾರ್ಯ ಕೇಂದ್ರದ ಬಳಿ, ಕ್ಷೇತ್ರದ ವ್ಯಾಪ್ತಿಯ, ಪಟ್ಟಣಗಳಲ್ಲಿ ಮತ್ತು ಗ್ರಾಮಗಳಿಗೆ ತೆರಳಿ ಆಚರಿಸುವ ಸಂಭವವಿದೆ.
ಅಲ್ಲದೆ ಮೆರವಣಿಗೆ, ಸಂಭ್ರಮದ ವೇಳೆ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ನಡುವೆ ಘರ್ಷಣೆ, ಗ್ರಾಮಗಳಲ್ಲಿ ಹಲ್ಲೆಗಳು ನಡೆದು ಪ್ರತಿಯೊಬ್ಬರ ಮನೆಗೆ ಕಲ್ಲುಗಳನ್ನು ಹೊಡೆದು, ಬೆಂಕಿ ಹಚ್ಚಿ, ದುಷ್ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ. ಈ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುತ್ತದೆ.
ಈ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ
ದಿನಾಂಕ 13-05-2023 ರಂದು ಬೆಳಿಗ್ಗೆ
6 ಗಂಟೆಯಿಂದ ದಿನಾಂಕ 14-05- 2023 ರಂದು ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಮೆರವಣಿಗೆ ನಡೆಸುವುದನ್ನು, ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು, ಪಟಾಕಿ ಸಿಡಿಸುವುದನ್ನು, ಸ್ಫೋಟಕ ವಸ್ತುಗಳು ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸುವುದನ್ನು ತಡೆಗಟ್ಟಲು ಸಿಆರ್ ಪಿಸಿ ಕಲಾಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೇ.13 ರಂದು ಬೆಳಿಗ್ಗೆ 6 ರಿಂದ ದಿನಾಂಕ 14-05-2023 ರಂದು ಬೆಳಿಗ್ಗೆ 6 ಗಂಟೆಯವರೆಗೆ, ಮೆರವಣಿಗೆ, ಮಧ್ಯ ಮಾರಾಟ, ವಿಜಯೋತ್ಸವ ಸಂಭ್ರಮಾಚರಣೆ, ಪಟಾಕಿ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ: ಅತಂತ್ರ ಫಲಿತಾಂಶದ ಸಮೀಕ್ಷೆ : ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಸಂಪರ್ಕದಲ್ಲಿ -ಜೆಡಿಎಸ್