Dakshina Kannada: ಮೇ.13 ರಂದು ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ!!

Dakshina Kannada District Collector Order to Enforce Prohibition

Dakshina kannada: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election) ಮತದಾನ ನಿನ್ನೆ (ಮೆ.10) ಮುಕ್ತಾಯಗೊಂಡಿದೆ. ಈ ವೇಳೆ ಹಲವೆಡೆ ಬಿಜೆಪಿ-ಕಾಂಗ್ರೆಸ್ (bjp-congress) ತಂಡಗಳು ಮಧ್ಯೆ ಘರ್ಷಣೆಯೂ ಉಂಟಾಗಿದೆ. ಇನ್ನು ಮತ ಎಣಿಕೆಯು ಮೇ.13 ರಂದು ನಡೆಯಲಿದ್ದು, ಈ ಕಾರ್ಯವು ಎನ್ ಐ ಟಿ ಕ, ಸುರತ್ಕಲ್, ಮಂಗಳೂರಿನಲ್ಲಿ (mangaluru) ನಡೆಯಲಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina kannada) ಮೇ.13 ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ .ಅದೇಶ ಹೊರಡಿಸಿದ್ದಾರೆ.

 

ಚುನಾವಣೆಯ ಫಲಿತಾಂಶದ (election result) ನಂತರ ಅಹಿತಕರ ಘಟನೆ, ಗಲಾಟೆಗಳು ನಡೆಯಬಾರದು. ದಕ್ಷಿಣ ಕನ್ನಡ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ.13 ರಂದು ಬೆಳಗ್ಗೆ 5 ರಿಂದ ರಾತ್ರಿ 12 ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತದಾನದ ಸಂದರ್ಭದಲ್ಲಿ ಹಲವು ಭಾಗಗಳಲ್ಲಿ ಗಲಾಟೆಗಳು ನಡೆದಿದ್ದು, ಪೊಲೀಸ್ ಲಾಠಿ ಚಾರ್ಜ್ ಮೂಲಕ ವಾತಾವರಣವನ್ನು ಯಥಾಸ್ಥಿತಿಗೆ ತಂದಿದ್ದರು. ಈ ಹಿನ್ನೆಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳು ಕೋಮು ಸೂಕ್ಷ್ಮ ಪ್ರದೇಶಗಳು ಆಗಿರುವುದರಿಂದ ಸಮಾಜ ಘಾತುಕ ಶಕ್ತಿಗಳು ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಹಾಗಾಗಿ ಈ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ಮತ ಎಣಿಕೆಯ ಕಾರ್ಯವು ಯಾವುದೇ ತೊಂದರೆ ಇಲ್ಲದೆ ನಡೆಯಲು, ಈ ವೇಳೆ ಶಾಂತಿ ಕಾಪಾಡುವ ನಿಟ್ಟಿನಿಂದ ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144ರನ್ವಯ ಪಡೆತಿಬಂಧಕಾಜ್ಞೆ ವಿಧಿಸಿ ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಅವಶ್ಯಕ ಎಂದು ಮಂಗಳೂರು ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ತಿಳಿಸಿದ್ದಾರೆ.

 

ಇದನ್ನು ಓದಿ: Free Flight Tickets: ನಿಮಗಿದು ಗೊತ್ತೇ? ವಿಮಾನಯಾನಕ್ಕೆ ಉಚಿತ ಟಿಕೆಟ್‌ ಪಡೆಯುವುದು ಹೇಗೆ? 

Leave A Reply

Your email address will not be published.