Actress Pavitra Lokesh: ಪವಿತ್ರಾ ಲೋಕೇಶ್ ನಟನೆಯ ’ಮತ್ತೆ ಮದುವೆ’ ಟ್ರೇಲರ್ ರಿಲೀಸ್: ವಿಲನ್ ಆಗಿ ನರೇಶ್ ಪತ್ನಿ ರಮ್ಯ ಮತ್ತು ಪವಿತ್ರಾ ಪತಿ ಸುಚೇಂದ್ರ ಪ್ರಸಾದ್ ?!

Actress Pavitra Lokesh movie 'Mate Maduve' has been released

Actress Pavitra Lokesh: ತೆಲುಗು ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Actress Pavitra Lokesh) ನಟಿಸಿರುವ ‘ಮತ್ತೆ ಮದುವೆ’ (Matte Maduve) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ತಮ್ಮ ರಿಯಲ್ ಲೈಫ್’ನ ರಸಮಯ ಘಟನೆಯನ್ನು ಈ ಜೋಡಿ ಸಿನಿಮಾ ಮಾಡ ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಥೆಯಲ್ಲಿ ನರೇಶ್ ಪತ್ನಿ ರಮ್ಯಾ ಪಾತ್ರ ಇದೆ, ಆಕೆಯನ್ನು ಕಿಚಾಯಿಸಲೆಂದೆ, ‘ ಕೈ ತುಂಬಾ ಸಾಲ ಮೈತುಂಬ ರೋಗ ಇರುವ ನಿನ್ನ ಜೊತೆ ಯಾರು ಸಂಸಾರ ನಡೆಸುತ್ತಾರೆ ?’ ಎನ್ನುವ ಡೈಲಾಗು ಬರೆಯಲಾಗಿದೆ ಎನ್ನುವ ವಿಚಾರ ಈಗಾಗಲೇ ಜಗತ್ ಜಾಹಿರಾಗಿದೆ. ಇದೀಗ, ಪವಿತ್ರ ಲೋಕೇಶ್ ಅವರ ಹಿಂದಿನ ಪತಿ, ಸುಚೇಂದ್ರ ಪ್ರಸಾದ್ ಅವರ ಪಾತ್ರವೂ ಚಿತ್ರದಲ್ಲಿ ಇದೆ ಎನ್ನುವ ವಿಚಾರ ಕುತೂಹಲ ಮೂಡಿಸಿದೆ.

 

ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಮೊದಲ ನೋಟ ಸಂಚಲನ ಸೃಷ್ಟಿಸಿದೆ. ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ ಬಗೆ ಹೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿರುವುದು, ಈ ಮೂವರ ಜಗಳ ಜೋಡಿಗಳಿಬ್ಬರು ಹೊಟೇಲ್ ನಲ್ಲಿ ಸಿಕ್ಕಿ ಬಿದ್ದ ನಂತರ ಹಾದಿ-ಬೀದಿ ರಂಪವಾಗಿದ್ದು ಹೀಗೆ ಅವರ ನಿಜ ಜೀವನದಲ್ಲಿ ನಡೆದ ಘಟನೆಗಳಿಂದ ಹೆಕ್ಕಿ ತೆಗೆದ ಕಥೆಯನ್ನು ಚಿತ್ರಕ್ಕೆ ಚಿತ್ರಕಥೆಯನ್ನಾಗಿಸಲಾಗಿದೆ.

ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾದಿಂದ ಹಿಡಿದು, ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು, ಜನ ಮೀಡಿಯಾ ಹಿಂದೆ ಬಿದ್ದು ಹೀಯಾಳಿಸೋದು ಇವೆಲ್ಲವೂ ಮತ್ತೆ ಮದುವೆ ಬಳ್ಳಿ ಪೆಳ್ಳಿ ಚಿತ್ರದ ಪ್ರಚಾರದ ಸರಕು. ಈ ಥರ ಸೇಲೇಬಲ್ ವಿಷಯಗಳನ್ನು ಹೆಕ್ಕಿ ತೆಗೆದು ಟ್ರೇಲರ್ ನಲ್ಲಿ ತೋರಿಸಲಾಗಿದೆ.

ಹೀರೋ ಹೀರೋಯಿನ್ ಗೊತ್ತು, ವಿಲನ್ ಯಾರು ಗೊತ್ತೇ ?
ನರೇಶ್ ಗಾರು ಲೈಫ್ ಸ್ಟೋರಿಯಲ್ಲಿ ಮೂರನೇ ಪತ್ನಿ ರಮ್ಯಾನೇ ವಿಲನ್ ಆಗಿ ಕಾಣಿಸಿಕೊಂಡಿದ್ದಾಳೆ. ಪವಿತ್ರಾ ಲೋಕೇಶ್ ಸಹಜವಾಗಿ ನಾಯಕಿ ನಟಿ. ಈ ಕಥೆಯಲ್ಲಿ ನರೇಶ್ ಪವಿತ್ರಾ ಲೋಕೇಶ್ ಗೆ ಇನ್ನೊಂದು ವಿಲನ್ ಇದ್ದಾರೆ. ಅದು ಬೇರೆ ಯಾರೂ ಅಲ್ಲ, ಪವಿತ್ರಾ ಮಾಜಿ ಪತಿ ಸುಚೇಂದ್ರ ಪ್ರಸಾದ್ (Suchendra Prasad) ! ಹಾಗೆನ್ನುವಂತೆ ಚಿತ್ರದ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾದಲ್ಲಿ ಇಬ್ಬರು ಖಳನಾಯಕರು. ಒಬ್ಬರು ಗಂಡಿನ ಕಡೆಯ ಖಳನಾಯಕ ಇನ್ನೊಬ್ಬರು ಹೆಣ್ಣಿನ ಕಡೆಯ ಖಳನಾಯಕರು !!

ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ , ‘ ಮತ್ತೆ ಮದುವೆ ‘ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಜಯಸುಧ ಮತ್ತು ಶರತ್ ಬಾಬು ಅವರು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನುಳಿದ ತಾರಾಗಣದಲ್ಲಿ ವನಿತ ವಿಜಯಕುಮಾರ್, ರೋಶನ್, ರವಿವರ್ಮ, ಅನ್ನಪೂರ್ಣ, ಅನನ್ಯ ನಾಗೆಲ್ಲಾ, ಮಧು, ಪ್ರವೀಣ್ ಯಂಡಮುರಿ, ಭದ್ರಂ, ಯುಕ್ತ, ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದೆ.

 

ಇದನ್ನು ಓದಿ: Dakshina Kannada: ಮೇ.13 ರಂದು ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ!! 

Leave A Reply

Your email address will not be published.