Vote: ‘ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ’ ಅಂತ ಸ್ಟೇಟಸ್ ಹಾಕಿದ ಯುವಕ !

A young man posted the status regarding vote

Vote: ಇದೀಗ ರಾಜ್ಯ ವಿಧಾನಸಭಾ ಚುನಾವಣೆಯ‌ ಮತದಾನ ಮುಗಿದು ಹೋಗಿದೆ. ಎಕ್ಸಿಟ್ ಪೋಲ್ ಗಳ ಭರಾಟೆ ಆವುಗಳ ವಿಶ್ಲೇಷಣೆ ಜೋರಾಗಿದೆ. ಇನ್ನು ಫಲಿತಾಂಶಕ್ಕಾಗಿ ಕಾಯುವ ಸಮಯ. ಅಲ್ಲಲ್ಲಿ ಬೆಟ್ಟಿಂಗ್ ಕೂಡಾ ಜೋರಾಗಿ ನಡೆದಿದೆ ಎನ್ನುವ ಮಾಹಿತಿ ಇದೆ. ಈ ಸಮಯದಲ್ಲಿ ಮತದಾನದ (vote) ಹಿಂದಿನ  ದಿನ ನಡೆದ ರಾದ್ಧಾಂತ ಒಂದು ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್‌ ಒಂದು ಈಗ ವಿವಾದಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನ ತರೀಕೆರೆಯಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬ ಹಾಕಿದ ಪೋಸ್ಟ್‌ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಜನರನ್ನು ಇಕ್ಕಟ್ಟಿಗೆ ಸಿಲುಕಿಸುವ ಆ ವಾಟ್ಸ್ ಆ್ಯಪ್ ಸ್ಟೇಟಸ್ ನೋಡಿ ಜನರು ರಾತ್ರೋರಾತ್ರಿ ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತಿದ್ದರು
ಅಂತದ್ದೇನು ಯಡವಟ್ಟು ಪೋಸ್ಟ್ ಅದು ಅಂತೀರಾ ? ಇಲ್ನೋಡಿ.

ಚಿಕ್ಕಮಗಳೂರಿನ ತರೀಕೆರೆಯ ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್ ಎಂಬ ಬಜರಂಗದಳದ ಕಾರ್ಯಕರ್ತ ಸ್ಟೇಟಸ್ ಹಾಕಿ ಯಡವಟ್ಟು ಮಾಡಿಕೊಂಡಿದ್ದಾನೆ. ” ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ ” ಎನ್ನುವುದು ಕಾರ್ತಿಕ್‌ ಹಾಕಿದ ಸ್ಟೇಟಸ್‌. ಈ ಸ್ಟೇಟಸ್ ನೋಡಿ ರೊಚ್ಚಿಗೆದ್ದ ವಿಪಕ್ಷಗಳ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.

ಕಾರ್ತಿಕ್‌ ಹಾಕಿದ ವಾಟ್ಸ್‌ ಆಪ್‌ ಸ್ಟೇಟಸ್‌ ಕಾಂಗ್ರೆಸ್‌ ನಾಯಕರನ್ನು ಮತ್ತು ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಅವರುಗಳೆಲ್ಲ ಆಕ್ರೋಶ ತಡೆಯಲಾಗದೇ ಲಕ್ಕವಳ್ಳಿ ಪೊಲೀಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಆರೋಪಿ ಕಾರ್ತಿಕ್ ನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೊನ್ನೆ ಮತದಾನಕ್ಕೆ ಒಂದು ದಿನ ಮೊದಲೇ, ಅಂದ್ರೆ ಮೇ 10 ರಂದು ಕಾರ್ತಿಕ್‌ ಮಧ್ಯಾಹ್ನವೇ ಸ್ಟೇಟಸ್‌ ಹಾಕಿದ್ದ. ಆದರೆ ಚುನಾವಣಾ ಬ್ಯುಸಿಯಲ್ಲಿ ಎಲ್ಲರೂ ಇದ್ದ ಕಾರಣದಿಂದ ಯಾರೂ ಅದನ್ನು ಸರಿಯಾಗಿ ಗಮನಿಸಿಲ್ಲ. ಆದರೆ ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಮತದಾನ ಮಾಡಿ ಮನೆಗೆ ಬಂದು ವಿರಮಿಸುತ್ತಿದ್ದಾಗ ಆತನ ವಿಚಿತ್ರ ಸ್ಟೇಟಸ್ ಗಮನಿಸಿ ಕುಪಿತರಾಗಿದ್ದಾರೆ. ಆಗ ಅದು ವಿವಾದವಾಗಿ ಮಾರ್ಪಟ್ಟಿದೆ. ಆತನ ಸ್ಟೇಟಸ್‌ ಚರ್ಚೆಗೆ ಕಾರಣವಾಯಿತು. ಆಗಲೇ ಎಲ್ಲರೂ ರೊಚ್ಚಿಗೆದ್ದು ಠಾಣೆಗೆ ಧಾವಿಸಿ ಪ್ರತಿಭಟನೆಗೆಳಿದಿದ್ದಾರೆ.

ಇದನ್ನೂ ಓದಿ:ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ: ಪ್ರಚೋದನೆ ಆರೋಪಿ ನೇಣು ಬಿಗಿದು ಆತ್ಮಹತ್ಯೆ

 

Leave A Reply

Your email address will not be published.