Home Breaking Entertainment News Kannada Rajamouli: ರಾಜಮೌಳಿ ನೀಡಿದ್ರು ಮಹಾಭಾರತ ಸಿನಿಮಾ ಮಾಡೋ ಸುದ್ದಿ! ಪ್ಲ್ಯಾನ್ ಕೇಳಿದ್ರೆ ಖಂಡಿತ ನೀವು ಬೆರಗಾಗ್ತೀರ!!!

Rajamouli: ರಾಜಮೌಳಿ ನೀಡಿದ್ರು ಮಹಾಭಾರತ ಸಿನಿಮಾ ಮಾಡೋ ಸುದ್ದಿ! ಪ್ಲ್ಯಾನ್ ಕೇಳಿದ್ರೆ ಖಂಡಿತ ನೀವು ಬೆರಗಾಗ್ತೀರ!!!

Rajamouli
Image source: Tribune India

Hindu neighbor gifts plot of land

Hindu neighbour gifts land to Muslim journalist

Rajamouli: ಬಾಹುಬಲಿ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿ ರಾಜಮೌಳಿ ಮಿಂಚುತ್ತಿದ್ದು, ಇದೀಗ ನಿರ್ದೇಶಕ ರಾಜಮೌಳಿ (Rajamouli) ದೊಡ್ಡ ರೇಂಜ್ ಸಿನಿಮಾ ಕನಸು ಕಂಡಿದ್ದಾರೆ. ಹೌದು, ಇತ್ತೀಚೆಗಷ್ಟೇ ಮಹಾಭಾರತ ಸಿನಿಮಾದ ಮಾಡುವ ಕನಸಿನ ಬಗ್ಗೆ ರಾಜಮೌಳಿ ಹೇಳಿರುವ ಕೆಲವು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಾಭಾರತ ಸಿನಿಮಾ ಮಾಡಬೇಕಾದರೆ ಅದು 10 ಭಾಗ ಅಥವಾ ಅದಕ್ಕಿಂತ ಹೆಚ್ಚು ಆದರೂ ಅದ್ಧೂರಿ ರೇಂಜ್​ನಲ್ಲಿ ಈ ಸಿನಿಮಾವನ್ನು ಪ್ಲಾನ್ ಮಾಡಲಿದ್ದೇವೆ ಎಂದಿದ್ದಾರೆ.

ಹಲವು ವರ್ಷಗಳ ಹಿಂದೆಯೇ ಮಹಾಭಾರತ ಕಥೆ ಧಾರಾವಾಹಿ ರೂಪದಲ್ಲಿ ದೂರದರ್ಶನದಲ್ಲಿ ಹಲವಾರು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿತು. ಆದರೆ ಈ ಮಹಾಭಾರತವನ್ನು ಸಿನಿಮಾ ಮಾಡೋದು ನನ್ನ ಕನಸಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜಮೌಳಿ, RRR ಸಿನಿಮಾದ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ ಆಸ್ಕರ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಇಂತಹ ಖ್ಯಾತ ನಿರ್ದೇಶಕ ಮಹಾಭಾರತದ ದೊಡ್ಡ ಸಿನಿಮಾ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ಮಹಾಭಾರತ ಬಹಳ ದೊಡ್ಡ ಕಥೆ ಎಂದು ರಾಜಮೌಳಿ ಹೇಳಿದ್ದಾರೆ. ಇದೊಂದು ಬೃಹತ್ ಯೋಜನೆ. ಭಾರತೀಯ ಕಥೆಗಳನ್ನು ಜಗತ್ತಿಗೆ ಹೇಳಬೇಕು ಎನ್ನುವ ಆಸೆಯಿದೆ ಎಂದು ರಾಜಮೌಳಿ ಹೇಳಿದರು. ಆದರೆ ಆ ಮಹಾಸಾಗರವನ್ನು ಪ್ರವೇಶಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೂ ಮೊದಲು ಇನ್ನೂ ನಾಲೈದು ಚಿತ್ರಗಳನ್ನು ಮಾಡುತ್ತೇವೆ ಎಂದು ಹೇಳಿದರು.

ವಿಜಯೇಂದ್ರ ಪ್ರಸಾದ್, ಭಾರತೀಯ ಚಿತ್ರರಂಗದ ಟಾಪ್ ಬರಹಗಾರರಲ್ಲಿ ಒಬ್ಬರು. ಅವರ ಮಗ ರಾಜಮೌಳಿ ಅವರ ಚಲನಚಿತ್ರಗಳಿಗೂ ಅವರೆ ಸ್ಕ್ರಿಪ್ಟ್ ಬರೆಯುತ್ತಾರೆ. ‘ಬಾಹುಬಲಿ’ ಯಂತಹ ಅದ್ದೂರಿ ಸಿನಿಮಾಗೆ ಕಥೆ ನೀಡಿರುವ ಅವರು ಸದ್ಯ ಮಹೇಶ್ ಬಾಬು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೌದು, ಮಹೇಶ್ ಬಾಬು ಅವರೊಟ್ಟಿಗೆ ಸಾಹಸಮಯ ಪ್ರಯಾಣದ ಕತೆಯುಳ್ಳ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದು, ಸಿನಿಮಾದಲ್ಲಿ ಅಡವಿಯಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ಸನ್ನಿವೇಶಗಳು ಸಾಕಷ್ಟಿದ್ದು, ಸಿನಿಮಾ ನೋಡಲು ಕುತೂಹಲಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮತ ಚಲಾಯಿಸಿ ಬೆರಳು ತೋರಿಸಿ, ನಿಮ್ಮಿಷ್ಟದ ತಿಂಡಿ ಸವಿಯಿರಿ, ಹಾಗೇ ಫ್ರೀ ಸಿನಿಮಾ ನೋಡ್ಕೊಂಡು ಬನ್ನಿ: ತುರ್ತು ವಿಚಾರಣೆ ನಡೆಸಿ ಕೋರ್ಟು ಅಸ್ತು !