Election Voting: ಚುನಾವಣೋತ್ತರ ಸಮೀಕ್ಷೆ ಪ್ರಕಟ: ಸರಳ ಬಹುಮತದ ಬಾಗಿಲಲ್ಲಿ ಕಾಂಗ್ರೆಸ್ !

Karnataka Assembly Election Voting

Karnataka Assembly Election Voting: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಇದೀಗ ತಾನೆ ಮುಕ್ತಾಯವಾಗಿದೆ. ಒಟ್ಟು 224 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಹುರುಪಿನಿಂದ ಶುರುವಾದ ಮತದಾನ ಇದೀಗ ಮುಕ್ತಾಯವಾಗಿದೆ. ಬಹುತೇಕ ಮತದಾನ ಶಾಂತಿಯುತವಾಗಿತ್ತು. ಅದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದೆ. ಕಾಂಗ್ರೆಸ್ ಸರಳ ಬಹುಮತದ ಹತ್ತಿರ ಸಾಗುತ್ತಿದೆ.

ಒಟ್ಟು 65.58 % ಮತದಾನವಾಗಿದೆ. ಇದೀಗ ಚುನಾವಣಾ ಉತ್ತರದ (Karnataka Assembly Election Voting) ಎಕ್ಸಿಟ್ ಪೋಲ್ ವಿವರಗಳು ಲಭ್ಯವಾಗುತ್ತಿದೆ. ಈ ಸಾರಿ ಕೂಡಾ ಅತಂತ್ರ ಫಲಿತಾಂಶವೇ ? ಏನಾಗಲಿದೆ 2023 ರ ಈ ಚುನಾವಣೆ ಎನ್ನುವ ಕುತೂಹಲ ಮೂಡಿದೆ.

ಕಳೆದ 2018 ರ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು 104 ಸ್ಥಾನಗಳನ್ನೂ, ಕಾಂಗ್ರೆಸ್ 80 ಸ್ಥಾನಗಳನ್ನೂ ಮತ್ತು ಕ್ರಮವಾಗಿ ಜೆಡಿಎಸ್ 37 ಮತ್ತು ಇತರ 3 ಸ್ಥಾನಗಳನ್ನೂ ಪಡೆದಿತ್ತು. ಬಿಜೆಪಿ ಬಹು ಸಂಖ್ಯಾತ ಸೀಟುಗಳನ್ನು ಗಳಿಸಿದ್ದರೂ, ಅರ್ಧದಷ್ಟು ಬಹುಮತ ಪಡೆಯಲು ಬಿಜೆಪಿ ವಿಫಲವಾಗಿತ್ತು. ಆ ಕಾರಣದಿಂದ ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮಿಶ್ರ ಸರ್ಕಾರವನ್ನು ರಚಿಸಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ ಆದ ಶುಪ್ರ ರಾಜಕೀಯ ಬೆಳವಣಿಗೆಗಳ ನಂತರ ಬಿಜೆಪಿ ಅಧಿಕಾರವನ್ನು ಪಡೆದಿತ್ತು.

ಇದೀಗ ಮತ್ತೊಮ್ಮೆ ಚುನಾವಣೆ ನಡೆದು ಇನ್ನೇನು ಎರಡೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈಗ ಒಂದೊಂದಾಗಿ ಬಹಿರಂಗವಾಗುತ್ತಿದ್ದು ಹಲವು ಸಂಸ್ಥೆಗಳು ಪ್ರಸ್ತುತಪಡಿಸಿದ ಚುನಾವಣ ನಂತರದ ಸಮೀಕ್ಷೆಗಳು ಬಹಿರಂಗವಾಗಿದೆ.

2018 ರ ಚುನಾವಣಾ ಫಲಿತಾಂಶ:
ಬಿಜೆಪಿ: 104
ಕಾಂಗ್ರೆಸ್: 80
ಜೆಡಿಎಸ್: 37
ಇತರ: 03

2023 ರ ಎಕ್ಸಿಟ್ ಪೋಲ್ (ಸಮೀಕ್ಷೆ) ಗಳನ್ನು ಹಲವು ಸಂಸ್ಥೆಗಳು ನಡೆಸಿದ್ದು ಆ ವಿವರ ಲಭ್ಯವಾಗಿದೆ. ಅವುಗಳ ವಿವರ ಇಲ್ಲಿದೆ ನೋಡಿ. ( ಸರಳ ಬಹುಮತಕ್ಕೆ 113 ಅಗತ್ಯ)
ಝೀ ನ್ಯೂಸ್:
ಬಿಜೆಪಿ: 103 -118
ಕಾಂಗ್ರೆಸ್: 79-94
ಜೆಡಿಎಸ್: 25-33
ಇತರ: 02-05

ರಿಪಬ್ಲಿಕ್:
ಬಿಜೆಪಿ: 85-100
ಕಾಂಗ್ರೆಸ್: 94-108
ಜೆಡಿಎಸ್:21-20
ಇತರ: 02-06

ಸಿ ವೋಟರ್ ಸಂಸ್ಥೆ:
ಬಿಜೆಪಿ: 83-95
ಕಾಂಗ್ರೆಸ್: 100-112
ಜೆಡಿಎಸ್:21-29
ಇತರ: 02-06

ಪೋಲ್ ಸ್ಟಾರ್:
ಬಿಜೆಪಿ: 88-98
ಕಾಂಗ್ರೆಸ್: 99-109
ಜೆಡಿಎಸ್:21-29
ಇತರ: 02-06

ನ್ಯೂಸ್ ನೇಶನ್:
ಬಿಜೆಪಿ: 114
ಕಾಂಗ್ರೆಸ್: 86
ಜೆಡಿಎಸ್: 21
ಇತರ: 03

ಟೈಮ್ಸ್ ನೌ

ಬಿಜೆಪಿ- 85

ಕಾಂಗ್ರೆಸ್- 113

ಜೆಡಿಎಸ್- 23

ಇತರೆ- 03

 

ಸುವರ್ಣ ನ್ಯೂಸ್ 

ಬಿಜೆಪಿ 94-117

ಕಾಂಗ್ರೆಸ್- 91-106

ಜೆಡಿಎಸ್- 14-24

ಇತರೆ 2-6

ಈ ಚುನಾವಣಾ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಸರಳ ಬಹುಮತದ ಹತ್ತಿರ ಹತ್ತಿರ ದಾಪುಗಾಲು ಹಾಕುತ್ತಾ ಇದೆ. ಒಂದೇ ಒಂದು ಸಮೀಕ್ಷೆಯ ಪ್ರಕಾರ ಬಿಜೆಪಿ ಸರಳ ಬಹುಮತ ಪಡೆಯುತ್ತದೆ ಎನ್ನಲಾಗಿದೆ. ಈ ಎಲ್ಲಾ ಸಮೀಕ್ಷೆಗಳು ಮಧ್ಯಾಹ್ನ 3 ಗಂಟೆಯ ತನಕ ನಡೆದ ಮತದಾನದ ಆಧಾರದ. ಮೇಲೆ ನಡೆದ ಚುನಾವಣಾ ಸಮೀಕ್ಷೆ. ಆದರೆ, ಸರಿಯಾದ ಮಾಹಿತಿಗಾಗಿ ಮೇ.13 ತನಕ ಕುತೂಹಲ ಇಟ್ಟುಕೊಂಡು ಕಾಯದೆ ವಿಧಿಯಿಲ್ಲ.

ಇದನ್ನು ಓದಿ: Palmistry: ನಿಮ್ಮ ಹಸ್ತದಲ್ಲಿರುವ ರೇಖೆ ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಈ ಜಾಬ್​ನ್ನೇ ಮಾಡ್ಬೇಕು ನೀವು 

Leave A Reply

Your email address will not be published.