Anil Lad: ಎಲೆಕ್ಷನ್ ಮೊದಲೇ ಸೋಲೊಪ್ಪಿಕೊಂಡ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್!! ಎನಂದ್ರು ಅನಿಲ್?

Vote before defeat conceded JDS candidate Anil Lad

Anil Lad: ಚುನಾವಣೆಗೆ (Karnataka Election 2023) ಕೇವಲ ಒಂದೇ ದಿನ ಬಾಕಿ ಇರೋದು. ನಾಳೆ ಮೇ.10 ರಂದು ಮತದಾನ (vote) ನಡೆಯಲಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಸತತ ಪ್ರಯತ್ನ ಪಡುತ್ತಿದ್ದಾರೆ. ಪ್ರಚಾರ, ಪ್ರಣಾಳಿಕೆಯ ಬಾಣಗಳನ್ನು ಹೂಡಿದ್ದಾರೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ (Anil Lad) ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡಿದ್ದಾರೆ.

 

ಸೋಮವಾರ ಬಳ್ಳಾರಿಯ (ballari) ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದ್ದು, ಈ ವೇಳೆ ಮಾತನಾಡಿದ ಅನಿಲ್ ಲಾಡ್, “ ವಿಧಾನ ಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಸುಮಾರು 30 ಸಾವಿರ ಮತ ಪಡೆಯುವ ನಿರೀಕ್ಷೆ ಇದೆ. ಅಷ್ಟು ಮತ ಪಡೆಯದಿದ್ದರೇ ನಾನು ರಾಜಕೀಯಕ್ಕೆ ಅನರ್ಹ ಎಂದು ತಿಳಿದುಕೊಳ್ಳುತ್ತೇನೆ” ಎಂದು ಹೇಳಿದ್ದು, ಈ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ.

“ಬಳ್ಳಾರಿ ನಗರದಲ್ಲಿ ಜೆಡಿಎಸ್ (jds) ಪ್ರಭಾವ ಕಡಿಮೆ ಇದೆ. ನಮ್ಮ ಪಕ್ಷದ ಪ್ರಣಾಳಿಕೆ, ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಇದೆ. ಕೆಆರ್‌ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ (Janardhan Reddy) ಈ ಜಿಲ್ಲೆಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಅವರ ಪಕ್ಷಕ್ಕೆ ಮತ ಯಾಕೆ ನೀಡಬೇಕು?. ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ (Bharath Reddy) ಪಕ್ಷಕ್ಕಾಗಿ ಎಷ್ಟು ವರ್ಷ ದುಡಿದಿದ್ದಾರೆಂದು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ?. ಕಾಂಗ್ರೆಸ್‌ನವರು ಡಿ.ಕೆ.ಶಿವಕುಮಾರ್ (D. K shivakumar) ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಿನಿಂದ ಇಲ್ಲಿನ ಜೀನ್ಸ್ ಉದ್ಯಮವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ” ಎಂದು ಹೇಳಿದರು.

ಈ ಮೂಲಕ ಉಳಿದ ಪಕ್ಷದವರು ಭರವಸೆ ನೀಡುತ್ತಾರೆ ಆದರೆ ಭರವಸೆಯನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಜನರಿಗೆ ಅಗತ್ಯವಾದ ಭರವಸೆಗಳೇ ಇವೆ. ಜನರು ಮತ ನೀಡುತ್ತಾರೆ ಎಂಬ ನಿರೀಕ್ಷೆಯೂ ಇದೆ ಎಂದು ಹೇಳಿದರು.

ಇದನ್ನೂ ಓದಿ:Election Rules: ವಿಧಾನಸಭಾ ಚುನಾವಣೆ 2023!ರಾಜ್ಯದಾದ್ಯಂತ ಊಹಿಸಲಾರದ ಬಿಗಿ ಭದ್ರತೆ!

Leave A Reply

Your email address will not be published.