Karnataka Election 2023: ಕರ್ನಾಟಕ ಚುನಾವಣೆ; ಎಲ್ಲೆಲ್ಲೂ ಕಾಂಚಾಣದ ಆಟ, ಮರದಲ್ಲಿ, ರಸ್ತೆಯಲ್ಲಿ ಬರೀ ನೋಟುಗಳೇ!!!
Bengaluru South Constituency Clash Between BJP and Congress workers
Karnataka Election 2023: ಚುನಾವಣೆಗೆ (Karnataka Election 2023) ಕೇವಲ ಒಂದು ದಿನ ಬಾಕಿ ಇರೋದು. ನಾಳೆ ಮೇ.10 ರಂದು ಮತದಾನ (vote) ನಡೆಯಲಿದೆ. ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕೆಲ ಬಿಜೆಪಿ (bjp), ಕಾಂಗ್ರೆಸ್ (congress) ಅಭ್ಯರ್ಥಿಗಳ ಮನೆಗೆ ಐಟಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದೆ. ಇದೀಗ ಬೆಂಗಳೂರು (Bengaluru) ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಕ್ಕಲಸಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಕೆ.ರಮೇಶ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೃಷ್ಣಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಮನೆ ಮನೆಗೆ ತೆರಳಿ ಹಣ ಹಂಚಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಹಾಗೆಯೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೂ ಆರೋಪಿಸಿದ್ದಾರೆ. ಕಾಂಗ್ರೆಸ್-ಬಿಜೆಪಿ ಕಿತ್ತಾಟದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ.
ಈ ವೇಳೆ ಫ್ಲೈಯಿಂದ ಸ್ಕ್ವಾಡ್, ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಲಾಯಿತು. ಆಗ ಮನೆಯ ಪಕ್ಕದಲ್ಲಿದ್ದ ಮರದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಮರದ ಬುಡದಲ್ಲಿ ಬ್ಯಾಗ್ನಲ್ಲಿ ಮೂರು ಲಕ್ಷ ರೂ.ನಷ್ಟು ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹಣ (money) ಪತ್ತೆ ಮತ್ತು ಕೈ, ಕಮಲದ ಕಿತ್ತಾಟದ ಹಿನ್ನೆಲೆಯಲ್ಲಿ ಕೆಲ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Vijay devarakonda: ವಿಜಯ್ ದೇವರಕೊಂಡ ಬರ್ತ್‌ಡೇಗೆ ಅಭಿಮಾನಿಗಳಿಗೆ ʼಖುಷಿʼಯ ಸುದ್ದಿ!