Home Breaking Entertainment News Kannada Vijay devarakonda: ವಿಜಯ್‌ ದೇವರಕೊಂಡ ಬರ್ತ್‌ಡೇಗೆ ಅಭಿಮಾನಿಗಳಿಗೆ ʼಖುಷಿʼಯ ಸುದ್ದಿ!

Vijay devarakonda: ವಿಜಯ್‌ ದೇವರಕೊಂಡ ಬರ್ತ್‌ಡೇಗೆ ಅಭಿಮಾನಿಗಳಿಗೆ ʼಖುಷಿʼಯ ಸುದ್ದಿ!

Vijay devarakonda
Soure: Wallpapers.com

Hindu neighbor gifts plot of land

Hindu neighbour gifts land to Muslim journalist

Vijay Devarakonda birthday: ಸಮಂತಾ ರುತ್ ಪ್ರಭು (Actress Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ‘ಖುಷಿ’ (Kushi) ಸಿನಿಮಾದ ತಂಡ ಇದೀಗ ಸಿನಿಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು, ‘ಖುಷಿ’ ಸಿನಿಮಾದ ಮೊದಲ ಹಾಡು ಇಂದು ರಿಲೀಸ್ ಆಗಲಿದೆ.

ಇಂದು (ಮೇ 9) ಟಾಲಿವುಡ್‌ನಲ್ಲಿ (Tollywood) `ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಟ ವಿಜಯ್ ದೇವರಕೊಂಡ ಅವರ ಬರ್ತ್​​ಡೇ (Vijay Devarakonda birthday). ಈ ಪ್ರಯುಕ್ತ ಅವರ ಸಿನಿಮಾದ (Vijay Deverakonda Movie) ಹಾಡು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇಂದು ‘ಖುಷಿ’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಲಿದೆ. ಸದ್ಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ರೊಮ್ಯಾಂಟಿಕ್ ಲವ್​ಸ್ಟೋರಿ ಒಳಗೊಂಡ ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಜಯರಾಮ್, ಸಚಿನ್ ಖಡೇಕರ್, ಅಲಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರ ಹೃದಯಂ ಖ್ಯಾತಿಯ ಹಿಶಾಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ವಿಜಯ್ ದೇವರಕೊಂಡ ಇತ್ತೀಚೆಗೆ ದೊಡ್ಡ ಮಟ್ಟದ ಗೆಲುವು ಕಂಡಿಲ್ಲ. ‘ಲೈಗರ್’ (liger) ಸೋಲು ಅವರಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ. ’ಲೈಗರ್‌’ ಸಿನಿಮಾದ ಮೂಲಕ ಭಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ನಟ ವಿಜಯ್ ದೇವರಕೊಂಡ, ಲೈಗರ್‌ನಿಂದ ದೊಡ್ಡ ಸೋಲುಂಡರು. ಇದೀಗ ‘ಜೆರ್ಸಿ’ (jersey) ಸಿನಿಮಾ ನಿರ್ದೇಶಕ ಗೌತಮ್‌ ತಿನ್ನನೂರಿ ಜೊತೆಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾಗೆ ನಾಯಕಿಯಾಗಿ ಕನ್ನಡದ ಶ್ರೀಲೀಲಾ (shreeleela) ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ನಡೆದಿದೆ.

ಇದನ್ನೂ ಓದಿ: Kantara Prequel: ʼಕಾಂತಾರ 2′ ಸ್ಕ್ರಿಪ್ಟ್‌ ಫಸ್ಟ್‌ ಡ್ರಾಫ್ಟ್‌ ರೆಡಿ?! ಶೂಟಿಂಗ್‌ ಶೀಘ್ರ ಆರಂಭ