Home Breaking Entertainment News Kannada Kiccha Sudeep – Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಬರೆದ ಕಿಚ್ಚ...

Kiccha Sudeep – Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಬರೆದ ಕಿಚ್ಚ ಸುದೀಪ್! ಬೆರಗಾದ ಫ್ಯಾನ್ಸ್!

Kiccha Sudeep - Darshan
Image source : Kannada Hindustan

Hindu neighbor gifts plot of land

Hindu neighbour gifts land to Muslim journalist

Kichcha Sudeep – Darshan: ಚುನಾವಣೆ ಪ್ರಚಾರದಲ್ಲಿ ಚಂದನವನದ ಹಲವಾರು ಸೆಲೆಬ್ರಿಟಿಗಳು ತೊಡಗಿಕೊಂಡಿರುವುದು ನಮಗೆ ತಿಳಿದಿರುವ ವಿಚಾರ. ಅದರಲ್ಲೂ ದರ್ಶನ್‌, ಸುದೀಪ್ (Kichcha Sudeep – Darshan) ಮತಬೇಟೆ ಜೋರಾಗಿಯೇ ನಡೆಯುತ್ತಿದೆ. ಆದರೆ ಪ್ರಚಾರದ ವೇಳೆ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಗಮನ ಸೆಳೆಯಿತು. ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ದರ್ಶನ್ ಫೋಟೊ ತೆಗೆದುಕೊಂಡು ಆಟೋಗ್ರಾಫ್ ನೀಡಿದ ಪ್ರಸಂಗ ಒಂದು ವೈರಲ್ ಆಗಿದೆ.

ಹೌದು, ದರ್ಶನ್‌ ಹಾಗೂ ಸುದೀಪ್‌ ಒಟ್ಟಿಗೆ ಇರುವ ಫೋಟೋವೊಂದನ್ನು ತಂದು ಅಭಿಮಾನಿಯೊಬ್ಬರು ಸುದೀಪ್‌ ಬಳಿ ಆಟೋಗ್ರಾಫ್‌ ನೀಡುವಂತೆ ಕೇಳಿದ್ದಾರೆ. ಕಿಚ್ಚ ಅಭಿಮಾನಿಗೆ ಬೇಸರ ಮಾಡದೆ ಅವರಿಂದ ಫೋಟೋ ಪಡೆದು ದರ್ಶನ್‌ ಫೋಟೋ ಮೇಲೆ ಆಟೋಗ್ರಾಫ್‌ ಬರೆದು ವಾಪಸ್‌ ನೀಡಿದ್ದಾರೆ.

ಸುದೀಪ್‌ ತಾವು ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಸಿನಿಮಾ ಚಿತ್ರೀಕರಣಕ್ಕೆ ಕೆಲವು ದಿನಗಳ ಕಾಲ ಬ್ರೇಕ್‌ ಕೊಟ್ಟು ರಾಜ್ಯದ ನಾನಾ ಕಡೆ ತೆರಳಿ ಬಿಜೆಪಿ ಪರ ಪ್ರಚಾರ ಮಾಡಿದರು. ಇತ್ತ ದರ್ಶನ್‌ ಕೂಡಾ ಮಂಡ್ಯ ಜಿಲ್ಲೆ ಹಾಗೂ ಇನ್ನಿತರ ಸ್ಥಳಗಳಿಗೆ ತೆರಳಿ ತಮ್ಮ ಆಪ್ತರ ಪರ ಮತ ಯಾಚನೆ ಮಾಡಿದರು.

ಇತ್ತ ಅಭಿಮಾನಿಗಳು ದರ್ಶನ್ – ಕಿಚ್ಚ ಇಬ್ಬರೂ ಒಂದೇ ಪಕ್ಷದ ಪರ ಪ್ರಚಾರ ಮಾಡುತ್ತಿದ್ದನ್ನು ನೋಡಿ ಇಬ್ಬರೂ ಒಂದೇ ವೇದಿಕೆಯಲ್ಲಿ ಜೊತೆಯಾದರೆ ಚೆಂದ ಎಂದು ಆಸೆ ವ್ಯಕ್ತಪಡಿಸಿದ್ದೂ ಇದೆ.

ಇದೀಗ ಅಭಿಮಾನಿಯೊಬ್ಬರು ನೀಡಿದ ದರ್ಶನ್‌ ಫೋಟೋ ಮೇಲೆ ಸುದೀಪ್‌ ಲವ್‌ ಸಿಂಬಲ್‌ ಹಾಕಿಕೊಟ್ಟ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನೋಡಿದ ಇಬ್ಬರ ಅಭಿಮಾನಿಗಳು ಇದು ನಿಜಕ್ಕೂ ನನಸೋ, ಕನಸೋ ಗೊತ್ತಾಗ್ತಿಲ್ಲ
ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Karnataka Election 2023: ಕರ್ನಾಟಕ ಚುನಾವಣೆ; ಎಲ್ಲೆಲ್ಲೂ ಕಾಂಚಾಣದ ಆಟ, ಮರದಲ್ಲಿ, ರಸ್ತೆಯಲ್ಲಿ ಬರೀ ನೋಟುಗಳೇ!!!