Wifi router : ರಾತ್ರಿ ಮಲಗುವಾಗ ವೈಫೈ ರೂಟರ್ ಆನ್ ಇರಿಸುತ್ತೀರಾ! ಈ ವಿಚಾರ ತಿಳಿದುಕೊಳ್ಳಿ!
Wifi Router Tips: ಇಂದು ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. ಅದರಲ್ಲಿಯೂ ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ ಎಂಬುದು ಕಾಮನ್ ಅದ ಮೇಲಂತೂ ವೈಫೈ ರೂಟರ್( Wifi Router)ಉಪಯೋಗಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ನೀವೂ ಕೂಡ ವೈಫೈ ರೂಟರ್ ಬಳಸುತ್ತಿದ್ದೀರಾ? ಹಾಗಾದ್ರೆ, ಮೊದಲು ಈ ವಿಚಾರ (Wifi Router Tips)ತಿಳಿದುಕೊಳ್ಳಿ! ರಾತ್ರೀ ಇಡೀ ವೈಫೈ ರೂಟರ್ ಆನ್ ಅಲ್ಲೇ ಇಡುತ್ತಿರಾ ಹಾಗಾದರೆ ಅಪಾಯ ಕಟ್ಟಿಟ್ಟ ಬುತ್ತಿ!
ಆನ್ಲೈನ್ ಕ್ಲಾಸ್, ಓದು, ಬರಹ ಜೊತೆಗೆ ವರ್ಕ್ ಫ್ರಮ್ ಹೋಮ್ ಹೀಗೆ ನಾನಾ ಕಾರಣಗಳಿಂದ ಮನೆ ಮನೆಯಲ್ಲಿಯೂ ಇಂಟರ್ನೆಟ್ ಬ್ರೌಡ್ ಬ್ಯಾಂಡ್ ಗಳದ್ದೇ ದರ್ಬಾರ್! ಮೊಬೈಲ್ ಬಳಸುವಾಗ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇಡೀ ದಿನ ವೈಫೈ ರೂಟರ್ ಆನ್ ಆಗೇ ಇರುತ್ತೆ! ಆದರೆ, ಹೀಗೆ ರಾತ್ರಿ ಕೂಡ ವೈಫೈ ರೂಟರ್ ಬಳಸುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಎಲ್ಲರಿಗೂ ಗೊತ್ತಿರುವ ಹಾಗೆ ಮೊಬೈಲ್ ಹೆಚ್ಚು ಬಳಸುವುದರಿಂದ ನಿದ್ರಾಭಂಗ ಆಗುವ ರೀತಿಯಲ್ಲೇ ವೈಫೈ ನೆಟ್ವರ್ಕ್ಗಳು ವಿದ್ಯುತ್ ವಿದ್ಯುತ್ಕಾಂತೀಯ ಆವರ್ತನಗಳನ್ನು ಉಪಯೋಗಿಸುತ್ತದೆ. ಇದರಿಂದಾಗಿಯೇ ತಜ್ಞರು ನೆಮ್ಮದಿಯ ನಿದ್ರೆಗೆ ತೊಡಕು ಉಂಟಾಗುವ ಸಾಧ್ಯತೆ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ ರಾತ್ರಿ ವೇಳೆ ವೈಫೈ ರೂಟರ್ ಆನ್ ಮಾಡಿದ್ದಲ್ಲಿ ಹ್ಯಾಕ್ ಆಗುವ ಸಾಧ್ಯತೆ ಕೂಡ ಹೆಚ್ಚು ಎನ್ನಲಾಗಿದೆ.
ನೀವು ವೈಫೈ ಆಫ್ ಮಾಡಿದ ಸಂದರ್ಭ ಬೇಗ ನಿದ್ರೆ ಮಾಡಲು(Sleep) ಸಾಧ್ಯವಾಗುತ್ತದೆ ಎಂಬ ವಿಚಾರ ಅಧ್ಯಯನದ ಮೂಲಕ ಬಹಿರಂಗವಾಗಿವೆ.
ಅದಲ್ಲದೆ ರಾತ್ರಿ ವೇಳೆ ವೈಫೈ ರೂಟರ್ ಬಳಕೆಯಿಂದ ಆಲ್ಝೈಮರ್ನ ಸಮಸ್ಯೆಯ ಅಪಾಯ ಹೆಚ್ಚಿದ್ದು, ರಾತ್ರಿ ವೈಫೈ ಆಫ್ ಮಾಡದಿದ್ದರೆ ನಿದ್ರಾಹೀನತೆ ಸಮಸ್ಯೆ ತಲೆದೋರುತ್ತದೆ. ಹೀಗಾಗಿ, ನೀವು ವೈಫೈ ರೂಟರ್ ಬಳಸುವಾಗ ಈ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಇದನ್ನೂ ಓದಿ:Indian Railway: ರೈಲಿನ ಇಂಜಿನ್ನಲ್ಲಿ ಹಲವಾರು ಬಣ್ಣದ ಹೆಡ್ಲೈಟ್ ಏಕಿದೆ? ಇವುಗಳ ಅರ್ಥವೇನು?