Home Jobs KPSC SDA Result 2023: SDA ಹುದ್ದೆಗಳಿಗೆ ಹೆಚ್ಚುವರಿ ಪಟ್ಟಿ ಪ್ರಕಟ!

KPSC SDA Result 2023: SDA ಹುದ್ದೆಗಳಿಗೆ ಹೆಚ್ಚುವರಿ ಪಟ್ಟಿ ಪ್ರಕಟ!

KPSC SDA Result 2023
Image source: news18

Hindu neighbor gifts plot of land

Hindu neighbour gifts land to Muslim journalist

KPSC SDA Result 2023: ಕೆಪಿಎಸ್ ಸಿ 2019ನೇ ಸಾಲಿನ ಉಳಿಕೆ ಮೂಲ ವೃಂದ ಹಾಗೂ ಹೈದಾರಾಬಾದ್ ಕರ್ನಾಟಕ ವೃಂದದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನೂ ಬಿಡುಗಡೆ ಮಾಡಿದೆ (KPSC SDA Result 2023). ಈ ಸಾಲಿನ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಹತಾ ಪಟ್ಟಿಗಳನ್ನು ಪರಿಶೀಲಿಸಿ.

ಹೈದಾರಾಬಾದ್ ಕರ್ನಾಟಕ ವೃಂದದ ಎಸ್‌ಡಿಎ ಹುದ್ದೆಗಳಿಗೆ 78 ಅಭ್ಯರ್ಥಿಗಳ ಲಿಸ್ಟ್‌ ಅನ್ನು ಮತ್ತು ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 368 ಅಭ್ಯರ್ಥಿಗಳ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಎಲ್ಲಾ ಮಾಹಿತಿಗಳ ಸಹಿತ ಪಟ್ಟಿ ಚೆಕ್‌ ಮಾಡಿಕೊಳ್ಳಬಹುದು. 2019 SDA Additional List – HK
2019 SDA Additional List – RPC

ಎಸ್‌ಡಿಎ ಹೆಚ್ಚುವರಿ ಆಯ್ಕೆ ಪಟ್ಟಿ ಈ ರೀತಿ ಚೆಕ್ ಮಾಡಿ:-
ಕೆಪಿಎಸ್‌ಸಿ ವೆಬ್‌ಸೈಟ್‌ https://www.kpsc.kar.nic.in/ ಗೆ ಭೇಟಿ ನೀಡಿ. ಪಟ್ಟಿಗಳು >> ಆಯ್ಕೆಪಟ್ಟಿ >> ಹೆಚ್ಚುವರಿ ಪಟ್ಟಿ ಸೆಲೆಕ್ಟ್‌ ಮಾಡಿರಿ. ಎಸ್‌ಡಿಎ ಹೆಚ್ಚುವರಿ ಪಟ್ಟಿಗಳನ್ನು ಆರ್‌ಪಿಸಿ, ಹೆಚ್‌ಕೆ ವೃಂದಕ್ಕೆ ಪ್ರತ್ಯೇಕವಾಗಿ ಚೆಕ್‌ ಮಾಡಲು ಲಿಂಕ್ ನೀಡಲಾಗಿರುತ್ತದೆ.
ಕ್ಲಿಕ್ ಮಾಡಿ ಆಯ್ಕೆಪಟ್ಟಿ ಚೆಕ್‌ ಮಾಡಬಹುದು. ಪ್ರಸ್ತುತ ಬಿಡುಗಡೆ ಮಾಡಿರುವ ಹೆಚ್ಚುವರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ ಮುಂದಿನ ದಿನಗಳಲ್ಲಿ ನೀಡುತ್ತದೆ.

ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗವು (KPSC) 2020ನೇ ಸಾಲಿನ ತಾಂತ್ರಿಕೇತರ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತಹ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ 18 ಹುದ್ದೆಗಳಿಗೆ ಕೆಪಿಎಸ್‌ಸಿ ಪ್ರಸ್ತುತ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿದ್ದು, ಈ ಸಾಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು (KPSC SDA Result 2023) ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ತಾತ್ಕಾಲಿಕ ಆಯ್ಕೆಪಟ್ಟಿಗಳು (ಇಲಾಖೆ ಹಾಗೂ ಹುದ್ದೆ ಮಾಹಿತಿ) ಈ ಕೆಳಗಿದೆ.

ಸಮಾಜ ಕಲ್ಯಾಣ ಇಲಾಖೆ – ವಿದ್ಯಾರ್ಥಿ ನಿಲಯದ ವಾರ್ಡನ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ – ಸಾಂಖ್ಯಿಕ ನಿರೀಕ್ಷಕರು, ಕೃಷಿ ಮಾರಾಟ ಇಲಾಖೆ – ಮಾರುಕಟ್ಟೆ ಮೇಲ್ವಿಚಾರಕರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ – ಗ್ರಂಥಾಲಯ ಸಹಾಯಕರು, ಕಾರ್ಮಿಕ ಇಲಾಖೆ – ಕಾರ್ಮಿಕ ನಿರೀಕ್ಷಕರು, ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ – ಕಿರಿಯ ಲೆಕ್ಕ ಸಹಾಯಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹ ಪಾಲಕಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ – ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು (ವಾರ್ಡನ್), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಪುರುಷ ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – ನಿಲಯ ಮೇಲ್ವಿಚಾರಕರು (ಮಹಿಳೆ).

ಪೌರಾಡಳಿತ ನಿರ್ದೇಶನಾಲಯದ – ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ – ಗಣತಿದಾರರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ – ಗಣಿತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್, ಕರ್ನಾಟಕ ಸರ್ಕಾರದ ಸಚಿವಾಲಯ – ಪ್ರಾರೂಪಣಾ ಸಹಾಯಕರು, ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆ – ಕರವಸೂಲಿಗಾರರು, ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆ – ಲೆಕ್ಕ ಪರಿಶೋಧಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ – ಲೆಕ್ಕ ಸಹಾಯಕರು ಮತ್ತು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆ – ಅಕೌಂಟೆಂಟ್.

ಈ ಮೇಲಿನ ಸದರಿ ಆಯ್ಕೆಪಟ್ಟಿಗಳನ್ನು ಪರಿಶೀಲಿಸಲು
https://www.kpsc.kar.nic.in/provisional-list.html ಈ ಲಿಂಕ್ ಕ್ಲಿಕ್ ಮಾಡಿ.