Home Breaking Entertainment News Kannada Rishab shetty-Vijay Deverakonda: ರಿಷಬ್ ಶೆಟ್ಟಿ ಜೊತೆಗೆ ಕೈ ಜೋಡಿಸಲಿದ್ದಾರಾ ವಿಜಯ್ ದೇವರಕೊಂಡ ?! ಬಿಗ್...

Rishab shetty-Vijay Deverakonda: ರಿಷಬ್ ಶೆಟ್ಟಿ ಜೊತೆಗೆ ಕೈ ಜೋಡಿಸಲಿದ್ದಾರಾ ವಿಜಯ್ ದೇವರಕೊಂಡ ?! ಬಿಗ್ ಬಜೆಟ್ ಸಿನಿಮಾಗೆ ಪ್ಲ್ಯಾನಿಂಗ್?!

Rishab shetty-Vijay Deverakonda
Image source: vaartha

Hindu neighbor gifts plot of land

Hindu neighbour gifts land to Muslim journalist

Rishab shetty-Vijay Deverakonda: ಕಾಂತಾರ (kantara), ಕೆಜಿಎಫ್ ನಂತಹ (KGF) ಬ್ಲಾಕ್ ಬಸ್ಟರ್ ಸಿನಿಮಾಗಳು ಬಾಲಿವುಡ್ (Bollywood), ಟಾಲಿವುಡ್ ಸೇರಿದಂತೆ ಹಲವು ಸಿನಿರಂಗಗಳನ್ನು ಸ್ಯಾಂಡಲ್ ವುಡ್’ನತ್ತ ತಿರುಗಿ ನೋಡುವಂತೆ ಮಾಡಿದೆ. ಬಾಲಿವುಡ್ ಸ್ಟಾರ್‌ಗಳು ಈಗ ಸೌತ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕನ್ನಡ ಫಿಲ್ಮ್ ಮೇಕರ್ಸ್ ಕೂಡ ಬಾಲಿವುಡ್‌, ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಂತೂ ಎಲ್ಲಾ ಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಸದ್ಯ ರಿಷಬ್ ಶೆಟ್ಟಿ ಜೊತೆಗೆ ತೆಲುಗು ನಟ ವಿಜಯ್ ದೇವರಕೊಂಡ (Rishab shetty-Vijay Deverakonda) ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇಬ್ಬರು ಸೆನ್ಸೇಷನ್ ಸ್ಟಾರ್‌ಗಳೇ. ಇಬ್ಬರು ಒಟ್ಟಿಗೆ ಸೇರಿದರೆ ಆ ಸಿನಿಮಾ ದೊಡ್ಡಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಗ್ಯಾರೆಂಟಿ. ಸದ್ಯ ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮುಂದೆ ಒಟ್ಟಿಗೆ ಕೆಲಸ ಮಾಡ್ತಾರೆ ಎನ್ನಲಾಗ್ತಿದೆ. ಇಬ್ಬರು ದೊಡ್ಡ ಬಜೆಟ್ ನ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಇನ್ನು ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಬ್ಲಾಕ್‌ಬಸ್ಟರ್‌ ಹಿಟ್ ಸಿನಿಮಾ (blockbuster hit movie) ಕಾಂತಾರ ಭರ್ಜರಿ ಯಶಸ್ಸು ಕಂಡಿದ್ದು, ದಾಖಲೆಯನ್ನು ಸೃಷ್ಟಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ತುಳುನಾಡ ಕಲೆಯನ್ನು ವಿಶ್ವದಾದ್ಯಂತ ಪಸರಿಸಿದೆ.

ಹಾಗೇ ವಿಜಯ್ ದೇವರಕೊಂಡ (Vijay Deverakonda) ಇತ್ತೀಚೆಗಿನ ಸಿನಿಮಾ ‘ಲೈಗರ್’ (liger) ಫ್ಲಾಪ್ ಆಗಿದೆ. ಅಷ್ಟೇನು ಗಳಿಕೆ ಕಂಡಿಲ್ಲ. ಈ ಸಿನಿಮಾದಲ್ಲಿ ವಿಜಯ್ ಗೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Panday) ಜೋಡಿಯಾಗಿದ್ದು, ಪುರಿ ಜಗನ್ನಾಥ ನಿರ್ದೇಶನದಲ್ಲಿ ಮೂಡಿ ಬಂದಂತಹ ಕ್ರೀಡೆ ಹಾಗೂ ಆ್ಯಕ್ಷನ್ ಪ್ರಧಾನ ಚಿತ್ರವಾಗಿತ್ತು ಲೈಗರ್‌. ಇದರಲ್ಲಿ ವಿಜಯ್ ಅವರು ಎಮ್‌ಎಮ್‌ಎ ಫೈಟರ್ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯ ಈ ಸಿನಿಮಾ ಸೋಲುಂಡಿತು. ಇದೀಗ ಶೆಟ್ರ ಜೊತೆಗೆ ವಿಜಯ್ ಹೆಸರು ಕೇಳಿಬರುತ್ತಿದೆ.

ಇದನ್ನೂ ಓದಿ:  ಜಮ್ಮು- ಕಾಶ್ಮೀರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ ; ಇಬ್ಬರಿಗೆ ಗಾಯ!