KPSC Key answer: KPSC ಇಂಜಿನಿಯರ್, ಡಾಟಾ ಎಂಟ್ರಿ ಅಪರೇಟರ್ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಕೀ ಉತ್ತರ ಪ್ರಕಟ!!!

Data Entry Operator Job Aspirants Attention, Key Answer Published

KPSC key answer: ಕರ್ನಾಟಕ ಲೋಕಸೇವಾ ಆರ್ಥಿಕ ಮತ್ತು ಸಾಂಖ್ಯಿಕ ಆಯೋಗವು ಏಪ್ರಿಲ್ 30 ರಂದು ನಡೆಸಿದ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ 13(ಹೈ.ಕ.) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು( KPSC key answer) ಮೇ 2 ರಂದು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ಅದೇ ರೀತಿ ಜಲ ಸಂಪನ್ಮೂಲ ಕಿರಿಯ
ಇಲಾಖೆಯಲ್ಲಿನ ಇಂಜಿನಿಯರ್(KPSC Engineer) -166(ಹೈ.ಕ.) ಮತ್ತು ಕಿರಿಯ ಇಂಜಿನಿಯರ್ ಮೆಕಾನಿಕಲ್ -3(ಹೈ.ಕ.) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಆಯೋಗದ ವೆಬ್ ಸೈಟ್ http://kpsc.kar.nic.in/key ಉತ್ತರಗಳನ್ನು ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಆಯೋಗದ ಅಂತರ್ಜಾಲ ತಾಣ http://kpsc.kar.nic.in/key answers ನಲ್ಲಿ 30.04.2023 ರಲ್ಲಿ ನಡೆದ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರಮುಖ ಉತ್ತರಗಳ ಬಗ್ಗೆ ಆಪೇಕ್ಷಣೆ ಇದ್ದಲ್ಲಿ ಆನ್‌ಲೈನ್ ಮುಖಾಂತರವೂ ಸಹ ನಿಗದಿತ ಶುಲ್ಕವನ್ನು ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು.

ಅಥವಾ ನಿಗದಿತ ಶುಲ್ಕದೊಂದಿಗೆ ಮೇ 9 ರ ಸಂಜೆ 5:30ರ ಒಳಗೆ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ ಬೆಂಗಳೂರು- 1 ಇವರಿಗೆ ಲಿಖಿತ ಮನವಿಯ ಮೂಲಕ ಕೂಡ ಸಲ್ಲಿಸಬಹುದಾಗಿದೆ.

ಆದರೆ ಈ ಮೇಲಿನ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಗೆ ಮಾಡಿ ಸೌತೆಕಾಯಿ ಚಟ್ನಿ, ನಿಮಗಾಗಿ ರೆಸಿಪಿ ಇಲ್ಲಿದೆ!

Leave A Reply

Your email address will not be published.