CBSE 2023 10th, 12th Result: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ! ಈ ದಿನ ಹೊರ ಬೀಳುವುದು 10 ಮತ್ತು 12ನೇ ತರಗತಿ ಫಲಿತಾಂಶ
CBSE Class 10 – 12 Results is expected to be declared soon
CBSE Class 10-12 Results: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು 2023 ಫೆಬ್ರವರಿಯಿಂದ ಏಪ್ರಿಲ್ ವರೆಗೆ ನಡೆಸಲಾಗಿತ್ತು.
CBSE ಪರೀಕ್ಷೆಗಳು ಫೆಬ್ರವರಿ 15 ರಂದು ಎರಡೂ ತರಗತಿಗಳಿಗೆ ಪ್ರಾರಂಭವಾಗಿ, ಮಾರ್ಚ್ 21 ರಂದು 10 ನೇ ತರಗತಿ ಮತ್ತು ಏಪ್ರಿಲ್ 5 ರಂದು 12 ನೇ ತರಗತಿ ಪರೀಕ್ಷೆ ಕೊನೆಗೊಂಡಿತ್ತು. ಈ ವರ್ಷ 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು CBSE 10 ಮತ್ತು 12 ನೇ ಪರೀಕ್ಷೆಗೆ ಹಾಜರಾಗಿದ್ದರು. ಹತ್ತನೇ ತರಗತಿ ಪರೀಕ್ಷೆಯಲ್ಲಿ 21,86,940 ವಿದ್ಯಾರ್ಥಿಗಳು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗೆ 16,96,770 ವಿದ್ಯಾರ್ಥಿಗಳು ಹಾಜರಾಗಿದ್ದರು.
ಸದ್ಯ ವಿದ್ಯಾರ್ಥಿಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಪರೀಕ್ಷೆ (CBSE Class 10-12 Results) ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ವರದಿಗಳ ಪ್ರಕಾರ, CBSE 10 ಮತ್ತು 12 ನೇ ಫಲಿತಾಂಶಗಳು ಈ ವಾರ ಅಥವಾ ಮುಂದಿನ ವಾರ ಪ್ರಕಟಗೊಳ್ಳಬಹುದು. ಆದರೆ, CBSE 10 ನೇ ತರಗತಿ ಮತ್ತು 12 ನೇ ತರಗತಿಯ ಸಾಮಾನ್ಯ ಪರೀಕ್ಷೆಯ ಫಲಿತಾಂಶದ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ.
CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುತ್ತದೆ. CBSE 10ನೇ ಮತ್ತು 12ನೇ ತರಗತಿಯ ಫಲಿತಾಂಶ 2023 ಪ್ರಕಟವಾದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು.
ಇನ್ನು CBSE ವೆಬ್‌ಸೈಟ್‌ನ ಮುಖಪುಟದಲ್ಲಿ, Secondary School Examination Class X Results 2023 Announced’ ಅಥವಾ ‘School Certificate Examination Class XII Results 2023 Announced’ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿದ್ಯಾರ್ಥಿಗಳನ್ನು ಹೊಸ ಪುಟಕ್ಕೆ ಡೈರೆಕ್ಟ್ ಮಾಡಲಾಗುತ್ತದೆ. ಅಲ್ಲಿ ಅವರು ತಮ್ಮ CBSE 10 ನೇ ತರಗತಿ ಅಥವಾ 12 ನೇ ತರಗತಿಯ ರೋಲ್ ನಂಬರ್, ಶಾಲಾ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಪ್ರವೇಶ ಕಾರ್ಡ್ ID ಅನ್ನು ನಮೂದಿಸಬೇಕು. ನಂತರ ವಿದ್ಯಾರ್ಥಿಗಳು ‘ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಇಷ್ಟಾದರೆ CBSE ತರಗತಿ 10/12 ಫಲಿತಾಂಶವು ಅವರ ಮೊಬೈಲ್/ಡೆಸ್ಕ್‌ಟಾಪ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
CBSE 10 ನೇ ಮತ್ತು 12 ನೇ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು 2023 ಕೆಳಗಿನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು:
1. cbse.gov.in
2. results.cbse.nic.in
3. parikshasangam.cbse.gov.in
ಇದನ್ನು ಓದಿ: Two days bank holiday: ಇನ್ನು ವಾರದಲ್ಲಿ ಎರಡು ದಿನ ಬ್ಯಾಂಕ್ ರಜೆ! ಶೀಘ್ರದಲ್ಲೇ ಸರಕಾರದಿಂದ ಆದೇಶ!