Actor Manobala Death: ಖ್ಯಾತ ತಮಿಳು ಹಾಸ್ಯ ನಟ ಮನೋಬಾಲಾ ಇನ್ನಿಲ್ಲ!

Famous Tamil comedy actor Manobala Death

Actor Manobala Death: ತಮಿಳು ಚಲನಚಿತ್ರ ನಿರ್ದೇಶಕ ಹಾಗೂ ಜನಪ್ರಿಯ ಹಾಸ್ಯಗಾರ 69 ವರ್ಷ ದ ಮನೋಬಾಲಾ ಅವರು ಅನಾರೋಗ್ಯದಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ (Actor Manobala Death).

 

ಇತ್ತೀಚಿಗೆ ಮನೋಬಾಲಾ ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದು, ಆಂಜಿಯೋ ಚಿಕಿತ್ಸೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಮಿಳಿನ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಮನೋಬಾಲಾ ಇಲ್ಲದೆ ಅದು ಪೂರ್ಣವಾಗುತ್ತಿರಲಿಲ್ಲ. ಅಷ್ಟೋಂದು ಖ್ಯಾತಿ ಇವರದ್ದು. ತಮಿಳು ಹಾಸ್ಯ ನಟ ಮನೋಬಾಲ ಅವರು, 45 ವರ್ಷಗಳಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ದಿಗ್ಗಜ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಡಬ್ಬಿಂಗ್ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೂ ಪರಿಚಿತರಾಗಿದ್ದರು. ಅವರ ಕಾಮಿಡಿ ಟೈಮಿಂಗ್‌ನಿಂದ ಎಲ್ಲರ ಪ್ರೀತಿ ಗಳಿಸಿದ್ದರು.

ಆಗಾಯ ಗಂಗೈ, ಪಿಳ್ಳೈ ನಿಲ, ಉರ್ಕಾವಲನ್, ಎನ್ ಪುರುಷನ ಮನಮ್ ಆಧನ್ ಸೇರಿದಂತೆ 24 ಚಿತ್ರಗಳನ್ನು ನಿರ್ದೇಶಿಸಿರುವ ಅವರು ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಹ ನಿರ್ದೇಶಕನಾಗಿ 1970ರಿಂದ ಸಿನಿ ಜರ್ನಿ ಆರಂಭಿಸಿದ್ದಾರೆ.

ಇನ್ನೊಂದು ಇಂಟ್ರಸ್ಟಿಂಗ್‌ ವಿಚಾರ ಅಂದ್ರೆ, ಮನೋಬಾಲ ಅವರು ʼಡಿಸೆಂಬರ್ 31ʼ ಎನ್ನುವ ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದರು. ಡಾ.ವಿಷ್ಣುವರ್ಧನ್ ನಟನೆಯ ಈ ಸಿನಿಮಾ 1988ರ ಡಿ.31 ರಂದು ಬಿಡುಗಡೆಯಾಗಿತ್ತು.

ಮನೋಬಾಲಾ ಅವರ ಸಾವಿನಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಮನೋಬಾಲಾ ನಿಧನಕ್ಕೆ ಕಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

 

https://twitter.com/Gautham_Karthik/status/1653673946292822016?ref_src=twsrc%5Etfw%7Ctwcamp%5Etweetembed%7Ctwterm%5E1653673946292822016%7Ctwgr%5E58e1db6e7c4f9f8eaed5a272fa0773b19a51f6ee%7Ctwcon%5Es1_c10&ref_url=https%3A%2F%2Fwww.vijayavani.net%2Fpopular-tamil-actormanobala-dies-at-69

 

ಇದನ್ನು ಓದು: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಶಾಕ್ ನೀಡಿದ ಸೆನ್ಸಾರ್‌ ಮಂಡಳಿ! ಬಿತ್ತು 10 ದೃಶ್ಯಗಳಿಗೆ ಕತ್ತರಿ!

Leave A Reply

Your email address will not be published.