Monthly salary in country: ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಇರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
Monthly salary in country :ದೇಶದಲ್ಲಿ (india) ಸಾಕಷ್ಟು ಜನರು ಜೀವನೋಪಕ್ಕಾಗಿ ಉದ್ಯೋಗದಲ್ಲಿದ್ದಾರೆ. ದುಡಿದು ಸಿಗುವ ಸಂಬಳದಿಂದ ಜೀವನ ನಡೆಸುತ್ತಿದ್ದಾರೆ. ಇದೀಗ ನೌಕರರ ಮಾಸಿಕ ವೇತನಕ್ಕೆ (Monthly salary in country) ಸಂಬಂಧಿಸಿದಂತೆ ವಲ್ಡ್ ಆಫ್ ಸ್ಟ್ಯಾಸ್ಟಿಕ್ಸ್ ವರದಿ ಬಿಡುಗಡೆಯಾಗಿದೆ. ವರದಿ ಪ್ರಕಾರ, ಭಾರತದಲ್ಲಿ ನೌಕರರ ಸರಾಸರಿ ತಿಂಗಳ ವೇತನ ₹50,000ಕ್ಕಿಂತ ಕಡಿಮೆ ಇದೆ. ಹಾಗಿದ್ದರೆ ಜಾಸ್ತಿ ಸಂಬಳ (highest salary) ಎಲ್ಲಿದೆ?
ವಲ್ಡ್ ಆಫ್ ಸ್ಟ್ಯಾಸ್ಟಿಕ್ಸ್ ವಿಶ್ವದ ನೌಕರರ (workers) ಸಂಬಳದ ಪಟ್ಟಿಯನ್ನು ಬಹಿರಂಗಪಡಿಸಿದೆ. ವಿಶ್ವದಲ್ಲಿ ಅತಿ ಹೆಚ್ಚು ಸಂಬಳ (highest Monthly salary in country) ಲಭ್ಯವಿರುವ ದೇಶ ಎಂದರೆ ಸ್ವಿಜರ್ಲೆಂಡ್ (Switzerland). ಇಲ್ಲಿನ ಉದ್ಯೋಗಿಯ ಸರಾಸರಿ ವೇತನ 4 ಲಕ್ಷ ರೂ. ಇದೆ. ಭಾರತವು 65ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ನೌಕರರ ಸರಾಸರಿ ಮಾಸಿಕ ವೇತನ ವೇತನ 50,000 ರೂ.ಗಿಂತಲೂ ಕಡಿಮೆ ಇದೆ.
ವಿಶ್ವದ 10 ದೇಶಗಳು ಅಲ್ಲಿನ ನೌಕರರಿಗೆ ಹೆಚ್ಚಿನ ಸರಾಸರಿ ವೇತನವನ್ನು ನೀಡುತ್ತಿವೆ. ಸ್ವಿಜರ್ಲೆಂಡ್ ಲಕ್ಸೆಂಬರ್ಗ್, ಅಮೆರಿಕ (america), ಐಸ್‌ಲ್ಯಾಂಡ್, ಕತಾರ್, ಡೆನ್ಮಾರ್ಕ್, ಯುಎಇ ದೇಶಗಳಿವೆ.
23 ದೇಶಗಳಲ್ಲಿನ ನೌಕರರ ಸರಾಸರಿ ವೇತನ 1 ಲಕ್ಷ ರೂ.ಗಿಂತ ಕಡಿಮೆ ಇದೆ. ಟರ್ಕಿ, ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ಬಾಂಗ್ಲಾದೇಶ, ವೆನೆಜುವೆಲಾ, ನೈಜೀರಿಯಾ, ಈಜಿಪ್ಟ್ ಮತ್ತು ಪಾಕಿಸ್ತಾನದಂತಹ ದೇಶಗಳು ನೌಕರರ ಸರಾಸರಿ ವೇತನವನ್ನು ಭಾರತಕ್ಕಿಂತ ಕಡಿಮೆ ನೀಡುತ್ತವೆ.
ಯಾವ ದೇಶದಲ್ಲಿ ಎಷ್ಟು ವೇತನ ನೀಡಲಾಗುತ್ತದೆ?
ಸ್ವಿಜರ್ಲೆಂಡ್ ನಲ್ಲಿ 4,98,567 ರೂ, ಲಕ್ಸೆಂಬರ್ಗ್ ನಲ್ಲಿ 4,10,156 ರೂ., ಸಿಂಗಾಪುರದಲ್ಲಿ 4,08,030 ರೂ., ಅಮೆರಿಕದಲ್ಲಿ 3,47,181 ರೂ. ಐಸ್‌ಲ್ಯಾಂಡ್- 3,27,716 ರೂ., ಕತಾರ್ -3,25,671 ರೂ., ಡೆನ್ಮಾರ್ಕ್ – 2,89,358 ರೂ., ಯುಎಇ – 2,86,087 ರೂ.,
ಬ್ರಿಟನ್- 2,39,139 ರೂ., ಸ್ವೀಡನ್- 2,22,534 ರೂ.,
ಫ್ರಾನ್ಸ್- 2,07,894 ರೂ., ಜಪಾನ್- 1,98,489 ರೂ., ದಕ್ಷಿಣ ಕೊರಿಯಾ-1,83,441 ರೂ., ಸೌದಿ ಅರೇಬಿಯಾ- 1,63,731 ರೂ.
ಇಟಲಿ- 1,41,322 ರೂ., ದಕ್ಷಿಣ ಆಫ್ರಿಕಾ- 99,857 ರೂ.
ಚೀನಾ- 87,426 ರೂ., ರಷ್ಯಾ- 52,750 ರೂ., ಭಾರತ- 46,861 ರೂ., ಬಾಂಗ್ಲಾದೇಶ- 20,854 ರೂ. ಮತ್ತು ಪಾಕಿಸ್ತಾನದಲ್ಲಿ 11,858 ರೂ. ವೇತನ ಇದೆ.
ಇದನ್ನೂ ಓದಿ: ಧೂಮಪಾನವನ್ನು ಬಿಡುವುದು ಹೇಗೆ? ಇದು ತಜ್ಞರ ಸಲಹೆಗಳು