Survey of India Recruitment 2023: ಕೇಂದ್ರ ಸರ್ಕಾರದ ಹುದ್ದೆಗೆ ಅರ್ಜಿ ಆಹ್ವಾನ ; ತಿಂಗಳಿಗೆ 63 ಸಾವಿರ ಸಂಬಳ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Survey of India Recruitment 2023: ಇಂದಿನ ದಿನದಲ್ಲಿ ಕೆಲಸ (Job) ಸಿಗೋದು ತುಂಬಾನೆ ಕಷ್ಟ. ಸಿಕ್ಕಿದರೂ ನಾವು ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರದಿಂದ (central government) ಡ್ರೈವಿಂಗ್ ಕೆಲಸಕ್ಕೆ (driving job) ಅರ್ಜಿ ಆಹ್ವಾನಿಸಲಾಗಿದೆ.

ಸರ್ವೇ ಆಫ್ ಇಂಡಿಯಾ (Survey of India Recruitment 2023) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ:
ಸಂಸ್ಥೆ: ಸರ್ವೇ ಆಫ್ ಇಂಡಿಯಾ
ಹುದ್ದೆ: ಮೋಟಾರ್ ಡ್ರೈವರ್ & ಮೆಕ್ಯಾನಿಕ್
ಒಟ್ಟು ಹುದ್ದೆ: 21

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24/04/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/5/2023

ವಿದ್ಯಾರ್ಹತೆ: 10ನೇ ತರಗತಿ ಹಾಗೂ ಅಧಿಕೃತ ಡ್ರೈವಿಂಗ್ ಲೈಸೆನ್ಸ್​ ಹೊಂದಿರಬೇಕು.
ಮಾಸಿಕ ವೇತನ: ₹ 19,900-63,200
ಉದ್ಯೋಗದ ಸ್ಥಳ: ಅಭ್ಯರ್ಥಿಗಳಿಗೆ ಭಾರತದ ವಿವಿಧ ಸ್ಥಳಗಳಲ್ಲಿ ಉದ್ಯೋಗವಕಾಶ ಸಿಗಲಿದೆ.

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ
ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ ಇರಲಿದ್ದು,
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಆಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಪ್ರಾಕ್ಟಿಕಲ್ ಟೆಸ್ಟ್ , ಸ್ಕಿಲ್ ಟೆಸ್ಟ್​,
ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳೊಂದಿಗೆ
ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ವಿಳಾಸ: ನಿರ್ದೇಶಕರು
ಕರ್ನಾಟಕ ಜಿಯೋ-ಸ್ಪೇಷಿಯಲ್ ಡೇಟಾ ಸೆಂಟರ್ ಸರ್ವೆ ಆಫ್ ಇಂಡಿಯಾ
ಅಂಚೆ ಪೆಟ್ಟಿಗೆ ಸಂಖ್ಯೆ-3403
ಸರ್ಜಾಪುರ ರಸ್ತೆ
ಕೋರಮಂಗಲ-II ಬ್ಲಾಕ್
ಬೆಂಗಳೂರು-560034

 

ಇದನ್ನು ಓದಿ: V.Somanna: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ವಿ ಸೋಮಣ್ಣ ಅವರಿಗೆ ಹೇಳಿದ್ಯಾರು? ಮಾಹಿತಿ ಬಹಿರಂಗಪಡಿಸಿದ ಸೋಮಣ್ಣ! 

Leave A Reply

Your email address will not be published.