Naga Chaitanya: ನಟಿ ಶೋಭಿತಾ ಜೊತೆ ಡೇಟಿಂಗ್‌! ಸಮಂತಾ ಮಾಜಿ ಪತಿ ಕೊಟ್ರು ಕೊನೆಗೂ ಕ್ಲಾರಿಟಿ!!

Share the Article

Naga Chaitanya: ಟಾಲಿವುಡ್ ಸ್ಟಾರ್ (Tollywood) ನಾಗಚೈತನ್ಯ ಹಾಗೂ ಸಮಂತಾ (Samantha) ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ದೂರಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸಮಂತಾಳಿಗೆ ಡಿವೋರ್ಸ್(divorce) ನೀಡಿದ ಬಳಿಕ ನಾಗಾಚೈತನ್ಯ (Naga chaitanya) ನಟಿ ಶೋಭಿತಾ ಧೂಳಿಪಾಲ (Sobhita Dhulipala) ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ನಾಗಚೈತನ್ಯ ಹಾಗೂ ಶೋಭಿತಾ ಸೋಷಿಯಲ್ಸ್ ಗಳ ಕಣ್ಣಿಗೆ ಬಿದ್ದಿದ್ದರು. ಹೌದು, ಲಂಡನ್ ನ ಹೋಟೆಲ್ ನಲ್ಲಿ ಇವರಿಬ್ಬರೂ ಜೊತೆಯಾಗಿ ಇರುವ ಫೋಟೋ ವೈರಲ್ (photo viral) ಆಗಿತ್ತು. ಆ ನಂತರ ಇವರ ಸುದ್ದಿ ಸದ್ದು ಜೋರಾಗಿತ್ತು. ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇದೀಗ ಸಮಂತಾ ಮಾಜಿ ಪತಿ ನಾಗಚೈತನ್ಯ ಶೋಭಿತಾ ಜೊತೆ ಡೇಟಿಂಗ್‌ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.

ಇನ್ನು ಸಮಂತಾ ಕೂಡ ನಾಗಚೈತನ್ಯ ಹಾಗೂ ಶೋಭಿತಾಳ ವದಂತಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಲ್ಲದೆ, ನಾಗ್ ಜೊತೆಗಿನ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದರು ಆದರೆ, ಕಾರಣ ಏನು ಎಂಬುದನ್ನು ತಿಳಿಸಿರಲಿಲ್ಲ. ಯಾವುದಕ್ಕೂ ಪ್ರತಿಕ್ರಿಯೆ ನೀಡದ ನಾಗ ಚೈತನ್ಯ ಇದೀಗ ಮಾಜಿ ಪತಿ ಸಮಂತಾ ಜೊತೆಗಿನ ಸಂಬಂಧ, ವಿಚ್ಚೇದನ ಹಾಗೂ ಶೋಭಿತಾ ಬಗೆಗಿನ ಡೇಟಿಂಗ್ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಚೈತನ್ಯ ಸಮಂತಾಗೆ ನೀಡಿದ ವಿಚ್ಛೇದನದ ಬಗ್ಗೆ ಹೇಳಿದ್ದು, “ನನ್ನ ಜೀವನದಲ್ಲಿ ನನಗೆ ಯಾವುದೇ ಪಶ್ವಾತ್ತಾಪವಿಲ್ಲ. ಎಲ್ಲವೂ ಪಾಠ ಅಷ್ಟೇ” ಎಂದು ನಾಗಚೈತನ್ಯ ಹೇಳಿದ್ದಾರೆ. ಈ ವೇಳೆ ಶೋಭಿತಾ ಧೂಲಿಪಾಲಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಚೈತನ್ಯ, “ಆ ಬಗ್ಗೆ ನನಗೇನೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಕಳೆದ ಆರು ತಿಂಗಳಿನಿಂದ ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಶೋಭಿತಾ ಹಾಗೂ ನಾಗಚೈತನ್ಯ ಇಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಇತ್ತ ಮಾಜಿ ಪತ್ನಿ ಸಮಂತಾ ಎಲ್ಲದರ ಚಿಂತೆ ಬಿಟ್ಟು ಸಿನಿಮಾದತ್ತ ಗಮನಹರಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ನಟಿ ಶೋಭಿತಾ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ಪೊನ್ಶಿಯಿನ್ ಸೆಲ್ವನ್ 2’ (ponniyin selvan 2) ಚಿತ್ರದಲ್ಲಿ ನಟಿ‌ಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿ ಗಾಜುಗಳಿಗೆ ಹಾನಿ!

Leave A Reply