Ujwala Yojana: ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗಲಿದೆ ಭರ್ಜರಿ ಸಬ್ಸಿಡಿ!

Ujwala Yojana : ಹಣದುಬ್ಬರ ಸಮಸ್ಯೆಯಿಂದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಳ್ಳುವಲ್ಲಿ ಬಹಳ ಕಷ್ಟಕರ ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮೇ 1ರಿಂದ ಉಜ್ವಲ ಯೋಜನೆಗಳಿಗೆ ಅಡುಗೆ ಅನಿಲ ಸಿಲಿಂಡರ್ 200 ರೂ. ಸಬ್ಸಿಡಿ ಜಾರಿ  ಮಾಡಲಾಗಿದೆ.

ಹೌದು, ಇಂದಿನಿಂದ ಹೊಸ ಅಡುಗೆ ಅನಿಲ ಬೆಲೆ ದರ ಬದಲಾಗಲಿದೆ . ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Ujwala Yojana) ಫಲಾನುಭವಿಗಳಾಗಿರುವವರಿಗೆ ವಾರ್ಷಿಕ 12 ಸಿಲಿಂಡರ್‌ಗಳು ಸಿಗಲಿದ್ದು, ಅದರಲ್ಲಿ ತಲಾ 200 ರೂ. ಸಬ್ಸಿಡಿ ಸಿಗಲಿದೆ ಎಂದು ತಿಳಿಸಲಾಗಿದೆ.

ಸಾರ್ವಜನಿಕ ವಲಯದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಬ್ಸಿಡಿಯನ್ನು ಜಾರಿ ಮಾಡಿದ್ದು, ಉಳಿದವು ಕೂಡ ದರವನ್ನು ಜಾರಿಗೊಳಿಸುತ್ತಿದೆ.

ಅದಲ್ಲದೆ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆಯನ್ನು 171 ರೂ. 50 ಪೈಸೆ ಇಳಿಸಲಾಗಿದ್ದು, ಬಹುತೇಕ ಕಾರ್ಖಾನೆಗಳು ಮತ್ತು ಹೋಟೆಲ್ ಸಮೂಹಕ್ಕೆ ಇದರಿಂದ ಉಪಯೋಗವಾಗುತ್ತದೆ. ಹಾಗೂ 19 ಕೆಜಿ ಸಿಲಿಂಡರ್‌ಗಳು ಪ್ರಸ್ತುತ ಈಗ 2000ಕ್ಕಿಂತ ಕೆಳಗೆ ಇಳಿದಿದೆ. ಪ್ರಸ್ತುತ ದರ 1856.50 ರೂ.ಗೆ ನಿಗದಿಯಾಗಿದೆ.

ಸದ್ಯ ಈ ಬದಲಾವಣೆಯಿಂದ ಸುಮಾರು 9.59 ಕೋಟಿ ಜನರಿಗೆ ಈ ಸವಲತ್ತುಗಳ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: ಇಷ್ಟು ದಿನ ಕಷ್ಟ ಪಟ್ಟಿದ್ದು ಸಾಕು, ಈ ತಿಂಗಳಿಂದ ಯಾವೆಲ್ಲಾ ರಾಶಿಯವರಿಗೆ ಕಾದಿದೆ ಅದೃಷ್ಟ?

Leave A Reply

Your email address will not be published.