India’s Richest Swami : ಭಾರತದ ಅತ್ಯಂತ ಶ್ರೀಮಂತ ಧರ್ಮ ಗುರುಗಳು ಇವ್ರು, ಟನ್ ಲೆಕ್ಕದಲ್ಲಿ ತೂಕಕ್ಕೆ ಹಾಕುವ ಮಟ್ಟಕ್ಕೆ ಇದೆ ಸಂಪತ್ತು !
India’s Richest Swami: ದೇಶದಲ್ಲಿ (India) ಹಲವು ಧಾರ್ಮಿಕ ಗುರುಗಳು ಅಥವಾ ಬಾಬಾಗಳಿದ್ದಾರೆ. ಕೆಲವರು ಸಮಾಜಕ್ಕೆ ಒಳಿತು ಮಾಡಿದರೆ, ಇನ್ನೂ ಕೆಲವರು ಅತ್ಯಾಚಾರದಂತಹ (Rape) ಹೀನ ಕೃತ್ಯವೆಸಗಿ ಜೈಲು ಪಾಲಾಗುತ್ತಾರೆ. ಸದ್ಯ ದೇಶದಲ್ಲಿನ ಧಾರ್ಮಿಕ ಗುರುಗಳ ಆಸ್ತಿ ಮೌಲ್ಯ ಎಷ್ಟು? ಯಾರು ಹೆಚ್ಚು ಶ್ರೀಮಂತರು? (India’s Richest Swami) ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಜಗ್ಗಿ ವಾಸುದೇವ್: ಜಗ್ಗಿ ವಾಸುದೇವ್ (Sadhguru) ಅವರು ಭಾರತದ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ (Isha Foundation) ಸಂಸ್ಥಾಪಕರು ಮತ್ತು ಮುಖ್ಯಸ್ಥರು ಆಗಿದ್ದಾರೆ. Sadhguru ಪರಿಸರ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಆಧ್ಯಾತ್ಮಿಕ ಗುರು, ಯೋಗ ಗುರು, ಸದ್ಗುರು ಎಂದು ಖ್ಯಾತಿಯಾಗಿರುವ ಜಗ್ಗಿ ವಾಸುದೇವ್ (Sadhuguru Jaggi Vasudev) ಅವರ ಒಟ್ಟು ಸಂಪತ್ತು 18 ಕೋಟಿ ರೂಪಾಯಿ ಆಗಿದೆ.
ನಿತ್ಯಾನಂದ: ಬಿಡದಿ ಧ್ಯಾನಪೀಠದ ಮೂಲಕ ದಿಢೀರ್ ಹೆಸರುಗಳಿಸಿದ್ದ ನಿತ್ಯಾನಂದ (Nithyananda) ಭಾರತದ ಅತ್ಯಂತ ಶ್ರೀಮಂತ ಧರ್ಮ ಗುರುಗಳಲ್ಲಿ ಒಬ್ಬರು. ಸದ್ಯ ದೇಶ ತೊರೆದು ಈಕ್ವೆಡಾರ್ ಬಳಿ ದ್ವೀಪವನ್ನು ಖರೀದಿಸಿದ್ದು, ಇದರ ಹೆಸರು ಕೈಲಾಸ್ ಎಂದಾಗಿದೆ. ನಿತ್ಯಾನಂದ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ? ಒಟ್ಟು ಆಸ್ತಿ 10 ಸಾವಿರ ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಪ್ರಪಂಚದಾದ್ಯಂತ ಹಲವು ಗುರುಕುಲಗಳು, ಆಶ್ರಮಗಳು ಮತ್ತು ದೇವಾಲಯಗಳನ್ನು ನಿತ್ಯಾನಂದ ನಡೆಸುತ್ತಿದ್ದಾರೆ. ಈ ಹಿಂದೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಇತ್ತು ಎಂದು ಹೇಳಲಾಗಿದೆ.
ಶ್ರೀ ಮಾತಾ ಅಮೃತಾನಂದಮಯಿ ದೇವಿ: ಪ್ರಪಂಚದಾದ್ಯಂತ ಅಮ್ಮ ಎಂದು ಕರೆಯಲ್ಪಡುವ ಶ್ರೀ ಮಾತಾ ಅಮೃತಾನಂದಮಯಿ ದೇವಿ (Amma) (Mata Amritanandamayi) ಅವರು ಶಿಕ್ಷಣತಜ್ಞ, ಮಾನವತಾವಾದಿ ಮತ್ತು ಆಧ್ಯಾತ್ಮಿಕ ನಾಯಕಿ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಇವರು ಹಲವಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೃತಾನಂದಮಯಿ ದೇವಿ ಅವರ ಒಟ್ಟು ಆಸ್ತಿ 1500 ಕೋಟಿ ರೂಪಾಯಿ ಇದೆ.
ಶ್ರೀ ಶ್ರೀ ರವಿ ಶಂಕರ್: ಬೆಂಗಳೂರಿನ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರ ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕರಾದ ಶ್ರೀ ಶ್ರೀ ರವಿ ಶಂಕರ್ (Sri Sri Ravi Shankar) ಗುರೂಜಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂಸೆಯಿಂದ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಇವರು 150 ದೇಶಗಳಲ್ಲಿ 30 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಶ್ರೀ ಶ್ರೀ ರವಿಶಂಕರ್ ಅವರ ಆಸ್ತಿ ಮೌಲ್ಯ 1000 ಕೋಟಿಗೂ ಹೆಚ್ಚಿದೆ ಎನ್ನಲಾಗಿದೆ.
ಅಸಾರಾಂ ಬಾಪು: ಅಸಾರಾಂ ಬಾಪುವಿಗೆ (Asaram Bapu) ಅತ್ಯಾಚಾರ ಹಾಗೂ ಅನೈಸರ್ಗಿಕ ಲೈಂಗಿಕತೆಗಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈತ ದೇಶಾದ್ಯಂತ 350ಕ್ಕೂ ಹೆಚ್ಚು ಆಶ್ರಮಗಳನ್ನು ಹೊಂದಿದ್ದು, ಇವರ ಒಟ್ಟು ಸಂಪತ್ತು 350 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಯೋಗಗುರು ಬಾಬಾ ರಾಮದೇವ್ (Yoga Guru Ramdev): ಇವರು ಕೂಡ ಅತಿ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಧರ್ಮ ಗುರುಗಳಲ್ಲಿ ಒಬ್ಬರು. ಇವರು 1995 ರಲ್ಲಿ ದಿವ್ಯ ಯೋಗ ಮಂದಿರ ಸಂಸ್ಥೆಯನ್ನು ಸ್ಥಾಪಿಸಿದರು. ಹಾಗೇ ಪತಂಜಲಿ (Patanjali) ಆಯುರ್ವೇದ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇವರ ಆಸ್ತಿ ಮೌಲ್ಯ ಸುಮಾರು 1600 ಕೋಟಿ ರೂಪಾಯಿ ಇದೆ.