Kiccha Sudeep: ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಸ್ಥಗಿತ: ಇವತ್ತಿನಿಂದ ಕಾಂಗ್ರೆಸ್ ಪರ ಕ್ಯಾಂಪೇನ್ ?! ಏನ್ ನೋವಾಯ್ತು ಬಿಜೆಪಿಯಲ್ಲಿ ?!
Kiccha Sudeep Compaign : ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರೆ ಅಂತ ಹೇಳಿದ ಮಾತು ಜೀವ ಪಡೆದುಕೊಳ್ಳುತ್ತಾ ಎಂಬ ದೊಡ್ಡ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿದೆ.
ನಟ ಸುದೀಪ್ (Kiccha Sudeep Compaign) ಅವರು ಬಿಜೆಪಿ ಪರ ಪ್ರಚಾರ ಮಾಡುವುದನ್ನು ಇದ್ದಕ್ಕಿದ್ದಂತೆ ಕೈ ಬಿಟ್ಟಿದ್ದಾರೆ! ಹೌದು, ಈಗಾಗಲೇ ಸುದೀಪ್ ಅವರು ಬಿಜೆಪಿ (BJP ) ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಕಿಚ್ಚ ಕಮಲದ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
ಸುದೀಪ್ ಕೊಟ್ಟ ಮಾತನ್ನು ಎಂದಿಗೂ ತಪ್ಪೋ ಮಾತಿಲ್ಲ. ಹಾಗಿದ್ದಲ್ಲಿ ದಿಢೀರನೆ ಪ್ರಚಾರ ನಿಲ್ಲಿಸಿದ್ದೆಕೆ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಈಗ ಬಿಜೆಪಿ ಪಕ್ಷವೇ ಉತ್ತರ ನೀಡಬೇಕಿದೆ.
ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದ ಸುದೀಪ್ ಬಿಜೆಪಿ ಪಕ್ಷದ ಬಲ ಗೈ ಇದ್ದಂತೆ ಇದ್ದರು. ಅಲ್ಲದೆ, ಅವರಿಗೆ ಕಾಂಗ್ರೆಸ್‌ನಿಂದ ಪ್ರಚಾರಕ್ಕೂ ಸಹ ಆಹ್ವಾನ ಬಂದಿತ್ತು. ಆದರೂ ಸಹ ಕಿಚ್ಚ ಬಿಜೆಪಿ ಪರ ನಿಂತು ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಬಿಜೆಪಿ ಪರ ಪ್ರಚಾರ ಮಾಡಿದರು. ಇದರಿಂದಾಗಿ ಎಲ್ಲಾ ಕಡೆ ಬಿಜೆಪಿ ಹವಾ ಇತ್ತು .
ಆದ್ರೆ ತನ್ನ ಮಾವನವರಾದ ಸಿಎಂ ಬೊಮ್ಮಾಯಿಯವರಿಗೆ ಕೊಟ್ಟ ಮಾತನ್ನು ತಪ್ಪಿ, ಕಿಚ್ಚ ಇಂದು ನವಲಗುಂದ ಗದಗ ಹೋಗದೆ ಯಾಕೆ ವಾಪಾಸ್ ಆದ್ರೂ! ಎನ್ನುವುದು ಅರ್ಥವಾಗುತ್ತಿಲ್ಲ. ಭಾರತೀಯ ಜನತಾ ಪಾರ್ಟಿ ಎಲ್ಲಿ ಎಡವಿತು ಎಂಬ ಪ್ರಶ್ನೆಗೆ ಉತ್ತರವೇ ಸಚಿವ ಸುಧಾಕರ್ ಆಗಿದ್ದಾರೆ.
ಹೌದು, ನಿಗದಿ ಪ್ರಕಾರ ಸುದೀಪ್ ಇಂದು ಹುಬ್ಬಳ್ಳಿ, ರೋಣದಲ್ಲೂ ರೋಡ್ ಶೋ ಮಾಡಬೇಕಿತ್ತು. ಆದರೆ ಪ್ರಚಾರದ ಜವಬ್ದಾರಿ ವಹಿಸಿದ್ದ ಸಚಿವರ ಮೇಲೆ ಕಿಚ್ಚನ ಅಸಮಧಾನ ತೋರಿದ್ದಾರೆ ಎನ್ನಲಾಗುತ್ತಿದೆ.
ರೋಡ್ ಶೋ ವೇಳೆ ಸರಿಯಾದ ವ್ಯವಸ್ಥೆ ಮಾಡದ ಕಾರಣ, ಅಲ್ಲದೆ ಸರಿಯಾದ ಸೆಕ್ಯೂರಿಟಿ ವ್ಯವಸ್ಥೆ. ಪ್ರಚಾರದ ಗಾಡಿಯಲ್ಲಿ ಜನರ ಗುಂಪು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಪ್ರಚಾರ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿರೋ ಬಗ್ಗೆ ಮಾಹಿತಿ ಇದೆ.
ಮಾಹಿತಿಗಳ ಪ್ರಕಾರ ಕಿಚ್ಚನ ಪ್ರಚಾರದ ಹೊಣೆ ಸಚಿವ ಸುಧಾಕರ್‌ಗೆ ಸಿಎಂ ವಹಿಸಿದ್ದರು. ಅದರೆ ಪ್ರಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡದ ಕಾರಣ ಸುಧಾಕರ್ ಮೇಲೆ ಬೇಸರ ವ್ಯಕ್ಯಪಡಿಸಿದ್ದರು. ಇದರಿಂದಾಗಿ ನಿನ್ನೆಯ ಪ್ರಚಾರ ಕಾರ್ಯ ನಿಲ್ಲಿಸಿ ಬೆಂಗಳೂರಿಗೆ ನಿನ್ನೆಯೇ ನಟ ಕಿಚ್ಚ ಸುದೀಪ್ ವಾಪಸ್ಸಾಗಿದಾರೆ ಎಂಬ ಮಾಹಿತಿ ಇದೆ.
ನಿಗದಿ ಪ್ರಕಾರ ಸುದೀಪ್ ಇಂದು ಹುಬ್ಬಳ್ಳಿ, ರೋಣದಲ್ಲೂ ರೋಡ್ ಶೋ ಮಾಡಬೇಕಿತ್ತು. ಸದ್ಯ ಕಿಚ್ಚ ರೋಡ್ ಶೋ ಮೊಟಕು ಗೊಳಿಸಿದಕ್ಕೆ ಬಿಜೆಪಿಗೆ ಟೆನ್ಸನ್ ಶುರುವಾಗಿದೆ.
ಇದನ್ನೂ ಓದಿ:Phone Usage Rules: ಹೆಡ್ ಫೋನ್ ಇಲ್ಲದೆ ವೀಡಿಯೋ ನೋಡಿದ್ರೋ, 5000 ರೂ. ದಂಡ ಫಿಕ್ಸ್, ನಾಳೆಯಿಂದಲೇ ಹೊಸ ನಿಯಮ !