National Pension System Scheme: ಕೇಂದ್ರ ಸರ್ಕಾರದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆ : ಕೇವಲ 100 ರೂಪಾಯಿ ಉಳಿತಾಯ ಮಾಡಿ ಪಡೆಯಬಹುದು 27 ಲಕ್ಷ ರೂ.ಗಿಂತ ಹೆಚ್ಚು ಲಾಭ!
National Pension System Scheme: ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಸಹಾಯ ಮಾಡಲೆಂದೆ ಸರ್ಕಾರ ಹಲವು ಯೋಜನೆಗಳನ್ನು (National Pension System Scheme) ಜಾರಿಗೊಳಿಸುತ್ತಲೇ ಬಂದಿದೆ.
ಅದರಂತೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನ ಜಾರಿಗೊಳಿಸಿದ್ದು, ಅವುಗಳಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕೂಡ ಒಂದು. ಸಣ್ಣ ಮೊತ್ತದೊಂದಿಗೆ ದೊಡ್ಡ ಆದಾಯವನ್ನ ಪಡೆಯಲು ಬಯಸುವವರಿಗೆ ಈ ಯೋಜನೆ ಉಪಯುಕ್ತವಾಗಿದೆ. ಹೌದು. ಈ ಯೋಜನೆಯಲ್ಲಿ 100 ರೂಪಾಯಿ ಉಳಿತಾಯ ಮಾಡಿ, 27 ಲಕ್ಷ ರೂ.ಗಿಂತ ಹೆಚ್ಚು ಹಣವನ್ನ ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸೇರುವುದರಿಂದ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು. ಹಾಗೆಯೇ ತೆರಿಗೆ ಪ್ರಯೋಜನಗಳು ಮತ್ತು ಆದಾಯಗಳು ದೊರೆಯುತ್ತದೆ. ಈ ಯೋಜನೆಯಡಿ ಪಿಂಚಣಿಯನ್ನ 60 ವರ್ಷ ವಯಸ್ಸಿನಿಂದ ಪಡೆಯಬಹುದು. ಅಲ್ಲಿಯವರೆಗೆ, ಪ್ರತಿ ತಿಂಗಳು ಹಣವನ್ನ ಹೂಡಿಕೆ ಮಾಡಬೇಕು. ಪಿಂಚಣಿಯು ಹೂಡಿಕೆ ಮಾಡಿರುವ ಹಣದ ಮೇಲೆ ಅವಲಂಬಿತವಾಗಿರುತ್ತದೆ.
ಈ ಯೋಜನೆಯಿಂದ ಹಿಂದೆ ಸರಿಯಲು ಬಯಸಿದ್ರೆ, ಪಿಂಚಣಿ ನಿಧಿ ನಿಯಂತ್ರಕ PFRDA ಗಳ ನಿಯಮಗಳ ಪ್ರಕಾರ, ವರ್ಷಾಶನವನ್ನ ನಿಯಮಿತವಾಗಿ ಪಡೆಯಲು ದಾಖಲೆಗಳನ್ನ ಅಪ್ ಲೋಡ್ ಮಾಡಬೇಕು. ಹಿಂಪಡೆಯುವ ಫಾರ್ಮ್ ಅಥವಾ ನಿರ್ಗಮನ ಫಾರ್ಮ್, ಗುರುತಿನ ಪುರಾವೆ, ವಿಳಾಸ ಪುರಾವೆ, ಬ್ಯಾಂಕ್ ಖಾತೆ ಪುರಾವೆ, ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನ ಅಪ್ಲೋಡ್ ಮಾಡಬೇಕು. ಒಟ್ಟಾರೆ ಈ ಯೋಜನೆ ಕಡಿಮೆ ಹಣದ ಮೂಲಕ ಹೆಚ್ಚಿನ ಲಾಭ ಪಡೆಯಲು ಬಯಸುವವರಿಗೆ ಉಪಯುಕ್ತವಾಗಿದೆ.
ಇದನ್ನೂ ಓದಿ:2nd Puc AnswerSheet: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಡೌನ್ ಲೋಡ್ ಮಾಡ್ಕೋಬೇಕಾ, ಇಲ್ಲಿದೆ ಕಂಪ್ಲೀಟ್ ಮಾಹಿತಿ!