2nd Puc AnswerSheet: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಡೌನ್ ಲೋಡ್ ಮಾಡ್ಕೋಬೇಕಾ, ಇಲ್ಲಿದೆ ಕಂಪ್ಲೀಟ್ ಮಾಹಿತಿ!
2nd puc answer sheet : 2023 ನೇ ಸಾಲಿನ ದ್ವಿತೀಯ ಪಿಯುಸಿ (Second Puc) ಪರೀಕ್ಷೆ ಮುಗಿದು, ಫಲಿತಾಂಶ ಕೂಡ ಪ್ರಕಟವಾಗಿದೆ. ಸದ್ಯ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ (Answer sheet) ಸ್ಕ್ಯಾನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ (2nd puc answer sheet) ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಸಲು
ಅವಕಾಶ ನೀಡಲಾಗಿತ್ತು. ಅದಕ್ಕಾಗಿ 27/04/2023ರ ವರೆಗೆ ಸಮಯ ನಿಗದಿಯಾಗಿತ್ತು. ಸದ್ಯ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
“ಡೌನ್ ಲೋಡ್ ಮಾಡಲು ಸ್ಕ್ಯಾನ್ ಪ್ರತಿ ಅಪ್ ಲೋಡ್ ಮಾಡಿಕೊಡಲು 29/04/2023 ರಿಂದ ಅವಕಾಶ ನೀಡಲಾಗಿದೆ. ಆಗಿಲ್ಲದಿದ್ದರೆ, 2ನೇ ಹಂತದಲ್ಲಿ ಸ್ಕ್ಯಾನ್ ಪ್ರತಿ ಆಪ್ ಲೋಡ್ ಮಾಡಿದಾಗ ವಿದ್ಯಾರ್ಥಿಗಳು ಸ್ಕ್ಯಾನ್ ಪತಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಈ ದಿನಗೂಲಿ ನೌಕರ! ಅಂದಾಜಲ್ಲಿ ಹಾಕಿದ ಟೀಮಿಗೆ ಸಿಕ್ತು 2ಕೋಟಿ!