Arjun Tendulkar: ಮೂಗಿನೊಳಗೆ ಬೆರಳಿಟ್ಟು ಆಮೇಲೆ ಬಾಯಿಗೆ ಹಾಕಿ ಉಪ್ಪು ನೋಡಿದ : ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್ !

Arjun Tendulkar: ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಲಿಟಲ್‌ ಮಾಸ್ಟರ್‌ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ( Sachin Tendulkar) ಅವರ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಈಗಾಗಲೇ IPL 2023 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ತಮ್ಮ ಮೊದಲ ಪಂದ್ಯದ ಪಾದಾರ್ಪಣೆ ಮಾಡಿದ್ದಾರೆ.

 

ಇತ್ತೀಚೆಗೆಯಷ್ಟೇ ಅರ್ಜುನ್ ತೆಂಡೂಲ್ಕರ್ ಮಾಡಿದ್ದ ಬೌಲಿಂಗ್ ಮತ್ತು ಬಾರಿಸಿದ ಸಿಕ್ಸ್ ಭಾರೀ ಸದ್ದು ಮಾಡಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಪಾಯಕಾರಿ ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಒಂದು ಎಸೆತದಲ್ಲಿ ಆಕಾಶದ ಎತ್ತರಕ್ಕೆ ಸಿಕ್ಸರ್ ಬಾರಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು ಅದೇ ಪಂದ್ಯದಲ್ಲಿ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ಪ್ರಚಂಡ ಸಿಕ್ಸರ್ ಬಾರಿಸಿದ್ದರು. ಈ ಮೂಲಕ ಸಚಿನ್ ಅವರ ಮಗ ಎಂದು ಪ್ರಪಂಚವೇ ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ಬೌಲಿಂಗ್ ಮತ್ತು ಬಾರಿಸಿದ ಸಿಕ್ಸರ್ ಮೂಲಕ ಸಾಬೀತು ಮಾಡಿದ್ದರು.

ಆದರೆ ಇದೀಗ ಅವರ ಅಸಹ್ಯ ವಿಡಿಯೋ ಒಂದು ವೈರಲ್ ಆಗಿದ್ದು, ನೋಡುಗರಿಗೆ ಕೂಡ ಕೊಂಚ ಅಸಹ್ಯ ಮೂಡಿಸಿದೆ. ಹೌದು, ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಅರ್ಜುನ್ ತೆಂಡೂಲ್ಕರ್ ಅವರು ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಬೆರಳು ಇಟ್ಟುಕೊಳ್ಳುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸದ್ಯ ಈ ವಿಡಿಯೋ ಚಾಣಕ್ಯ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿರುವ ದೃಶ್ಯವನ್ನು ಕಂಡು ಅಭಿಮಾನಿಗಳು ಯರ್ರಾ ಬಿರ್ರಿ ಕಮೆಂಟ್ ಗಳನ್ನು ಮಾಡಿದ್ದು, ಅದರಲ್ಲೂ ಕೆಲವರು ವ್ಯಂಗ್ಯವಾಡಿದ್ದಾರೆ.

 

 

ಇದನ್ನು ಓದಿ: Bride market: ಹುಡುಗೀರೇ ಗಮನಿಸಿ, ಈ ಮಾರ್ಕೆಟ್ ನಲ್ಲಿ ಮದ್ವೆಗೆ ಸಿಗ್ತಾರೆ ಹುಡುಗ್ರು…. ! ಸಕತ್ ಚೀಪ್….ಸಕತ್ ಫಾಸ್ಟ್…!

 

Leave A Reply

Your email address will not be published.