Home Jobs Court Jobs: 10th ಪಾಸಾದವರಿಗೆ ಸುವರ್ಣವಕಾಶ! ಕೋರ್ಟ್‌ನಲ್ಲಿ ಉದ್ಯೋಗವಕಾಶ! ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ!

Court Jobs: 10th ಪಾಸಾದವರಿಗೆ ಸುವರ್ಣವಕಾಶ! ಕೋರ್ಟ್‌ನಲ್ಲಿ ಉದ್ಯೋಗವಕಾಶ! ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ!

Peon Jobs in Court
Image source : Exams Daily

Hindu neighbor gifts plot of land

Hindu neighbour gifts land to Muslim journalist

Peon Jobs in Court: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಂದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು ವತಿಯಿಂದ ಜವಾನ ಹುದ್ದೆಗೆ (Peon Jobs in Court )ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಖಾಲಿ ಇರುವ 45 ಸೇವಕರ / ಜವಾನ ಹುದ್ದೆಗಳ ಭರ್ತಿಗೆ ಇದೀಗ ಮೈಸೂರು ಜಿಲ್ಲಾ ನ್ಯಾಯಾಲಯ ಘಟಕ ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಸೇವಕರು/ ಜವಾನ
ಹುದ್ದೆಗಳ ಸಂಖ್ಯೆ : 45
ವೇತನ ಶ್ರೇಣಿ : ರೂ.17000-28950.
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / ತತ್ಸಮಾನ ಪರೀಕ್ಷೆ ಉತ್ತೀರ್ಣ.

ಹುದ್ದೆಗಳ ವಿಂಗಡಣೆ
ಪರಿಶಿಷ್ಟ ಜಾತಿ : 7
ಪರಿಶಿಷ್ಟ ಪಂಗಡ: 4
ಪ್ರವರ್ಗ-1: 2
2A : 7
2B: 2
3A : 1
3B: 2
ಸಾಮಾನ್ಯ : 20
ಒಟ್ಟು : 45

ವಯಸ್ಸಿನ ಅರ್ಹತೆಗಳು:
ಕನಿಷ್ಠ 18 ವರ್ಷ ಆಗಿರಬೇಕು.
ಒಬಿಸಿ ಕೆಟಗರಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ.
ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ.

ನ್ಯಾಯಾಲಯ ಸೇವಕ ಹುದ್ದೆಗಳ ಆಯ್ಕೆ ವಿಧಾನ :
ಸೇವಕ (Peon) ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ 1:10 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಮುಖ್ಯವಾಗಿ ಕನ್ನಡ ಓದಲು ಹಾಗೂ ಬರೆಯಲು ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ 10 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.

ಉದ್ಯೋಗ ಸ್ಥಳ: ಮೈಸೂರು ನ್ಯಾಯಾಲಯಗಳು

ಅರ್ಜಿ ಸಲ್ಲಿಸಲು ವೇಳಾಪಟ್ಟಿ ಇಂತಿವೆ :
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-06-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-07-2023 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 08-07-2023

ಅರ್ಜಿ ಶುಲ್ಕ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ.200.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ.100.
ಶುಲ್ಕವನ್ನು ಅರ್ಜಿಯ ಕೊನೆ ಹಂತದಲ್ಲಿ ಆನ್‌ಲೈನ್‌ ಮೂಲಕವೇ ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು. ಅಥವಾ ಬ್ಯಾಂಕ್‌ ಚಲನ್ ಜೆನೆರೇಟ್‌ ಮಾಡಿಕೊಂಡು ಎಸ್‌ಬಿಐ ಶಾಖೆಗಳಲ್ಲಿ ಪಾವತಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

 

ಇದನ್ನು ಓದಿ: Mumbai News: ಮುಂಬೈನಲ್ಲಿ ಬಹುಮಹಡಿ ಕಟ್ಟಡ ಕುಸಿತ! ಘೋರ ದುರಂತದಲ್ಲಿ 15 ರಿಂದ 20 ಜನ ಸಿಲುಕಿರೋ ಶಂಕೆ!!