Traffic Rules: ರಸ್ತೆಯಲ್ಲಿ ಈ ಚಿಹ್ನೆ ಕಂಡರೆ ವಾಹನ ನಿಲ್ಲಿಸಬೇಡಿ!

Traffic Rules: ಸರ್ಕಾರ ಅದೆಷ್ಟೇ ರೂಲ್ಸ್ ಮಾಡಿದರು ಕೂಡ ಅದನ್ನು ಗಾಳಿಗೆ ತೂರಿ ರೂಲ್ಸ್ ಬ್ರೇಕ್ ಮಾಡುವವರೇ ಹೆಚ್ಚು. ಅದರಲ್ಲೂ ಕೂಡ ವಾಹನ ಚಾಲನೆ ಮಾಡುವಾಗ ನಿಯಮಗಳನ್ನು ಪಾಲಿಸದೇ ಅಪಾಯಕ್ಕೆ ಆಹ್ವಾನ ಮಾಡಿಕೊಡುವ ಅನೇಕ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿನಂತೆ ಅತಿ ವೇಗದಲ್ಲಿ ವಾಹನ ಚಾಲನೆ ಮಾಡಿ ಸಾವಿನ ದವಡೆಗೆ ಸಿಲುಕಿದ ಅದೆಷ್ಟೋ ಘಟನೆಗಳನ್ನು ಕೇಳಿರಬಹುದು. ಇದರ ಜೊತೆಗೆ ಸರ್ಕಾರ ಅನೇಕ ಕಡೆ ಟ್ರಾಫಿಕ್ ನಿಯಮಗಳನ್ನ (Traffic Rules)ಪಾಲಿಸಲು ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಬೋರ್ಡ್ಗಳನ್ನು ಹಾಕಿರುವುದನ್ನು ನೋಡಿರುತ್ತೀರಿ! ಇದರ ಅರ್ಥವೇನು ಗೊತ್ತಾ?

ರಸ್ತೆಯಲ್ಲಿ ಹಾಕಿರುವ ಚಿಹ್ನೆಗಳು ಪ್ರತಿ ರಸ್ತೆ ಬಳಕೆದಾರರು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಚಿತ್ರದ ಮೂಲಕ ನಿರೂಪಣೆ ಮಾಡಿರಲಾಗುತ್ತದೆ. ಸಾಮಾನ್ಯವಾಗಿ, ವಾಹನ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿ ರಸ್ತೆ ಸುರಕ್ಷತೆ ಚಿಹ್ನೆಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ, ಸವಾರರು ಸಾರ್ವಜನಿಕರು ಇಲ್ಲವೇ ವಾಹನ ಸವಾರರು ಈ ಮಾಹಿತಿ ತಿಳಿದಿರಬೇಕಾಗಿರುವುದು ಅವಶ್ಯಕ.

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟ್ಟರ್‌ನಲ್ಲಿ ಚಿಹ್ನೆಯೊಂದರ ಕುರಿತು ಪೋಸ್ಟ್ ಹಾಕಿ ಅದರ ಕುರಿತು ಅರಿವು ಮೂಡಿಸುವ ಪ್ರಯತಕ್ಕೆ ಕೈ ಹಾಕಿದೆ. ಸಾಮಾನ್ಯವಾಗಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ವೇಗದ ಮಿತಿ, ರಸ್ತೆ ಕಿರಿದಾಗುವ ಮುನ್ನೆಚ್ಚರಿಕೆ ಹೀಗೆ ಅನೇಕ ಫಲಕಗಳು ರಸ್ತೆಯ ಮೇಲೆ ಕಾಣಿಸುತ್ತವೆ. ಇವುಗಳ ಬಗ್ಗೆ ತಿಳಿದಿರುವುದು ಸಹಜ. ಆದರೆ ಕೆಲವೊಂದಷ್ಟು ಚಿಹ್ನೆಗಳ ಕುರಿತು ಎಲ್ಲರಿಗೂ ತಿಳಿದಿರುವುದಿಲ್ಲ.

ನೀಲಿ ಬಣ್ಣದ ಬೋರ್ಡ್‌ ಮೇಲೆ ಮೇಲ್ಮುಖವಾಗಿ ಸೂಚಿಸುವ ಬಾಣದ ಗುರುತನ್ನು ಒಳಗೊಂಡಿರುವ ಚಿಹ್ನೆಯ ಫೋಟೋ ಹಂಚಿಕೊಂಡಿರುವ NHAI ಇದರ ಕುರಿತು ಮಾಹಿತಿ ನೀಡಿದೆ. ಈ ಚಿಹ್ನೆಯ ಅರ್ಥವೇನು ಎಂದು ಗಮನಿಸಿದರೆ, “ಕಂಪಲ್ಸರಿ ಅಹೆಡ್” ಅಂದರೆ ನೇರವಾಗಿ ಮುಂದುವರಿಯಬೇಕು ಇಲ್ಲವೇ ಒಂದು ನೇರ ದಿಕ್ಕಿನಲ್ಲಿ ಹೋಗಬೇಕು ಎಂಬುದನ್ನು ಸೂಚಿಸುತ್ತದೆ. ಈ ಫಲಕಗಳು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಕಲಾಗುತ್ತದೆ.

ಹೆಚ್ಚು ವೇಗವಾಗಿ ಚಲಿಸಬಹುದಾದ ಹೆದ್ದಾರಿಗಳ ರಸ್ತೆಗಳಲ್ಲಿ ಈ ಚಿಹ್ನೆ ಹೊಂದಿರುವ ಬೋರ್ಡ್‌ಗಳನ್ನು ನೋಡಬಹುದು.ಒಂದು ವೇಳೆ ಈ ರೀತಿಯ ರಸ್ತೆಗಳಲ್ಲಿ ಯಾವುದಾದರು ವಾಹನ ರಸ್ತೆಯನ್ನು ನಿರ್ಬಂಧಿಸಿ ನಿಲ್ಲಿಸಿದಲ್ಲಿ ಇಲ್ಲವೇ ತಿರುಗಲು ಪ್ರಯತ್ನಿಸಿದರೆ ಅದು ಹಿಂಬದಿ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಈ ಚಿಹ್ನೆಯ ಬಗ್ಗೆ ತಿಳಿಯದವರು ವಾಹನ ನಿಲ್ಲಿಸಿದರೆ, ಹಿಂಬದಿಯವರು ತಕ್ಷಣ ವಾಹನವನ್ನು ನಿಲ್ಲಿಸಲಾಗದೇ ಗಂಭಿರ ಅಪಘಾತಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಹೆದ್ದಾರಿಗಳಲ್ಲಿ ಈ ಬೋರ್ಡ್‌ಗಳನ್ನು ಕಂಡರೆ ವಾಹನಗಳನ್ನು ನಿಲ್ಲಿಸಬಾರದು. ಈ ರೀತಿಯ ಸಿಗ್ನಲ್ ಇರುವ ಜಾಗದಲ್ಲಿ ಮಾತ್ರ ವಾಹನಗಳು ಮುಂದೆ ಸಾಗಬೇಕಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಈ ಬೋರ್ಡ್ ಇರುವಲ್ಲಿ ವಾಹನವನ್ನು ನಿಲ್ಲಿಸಬಾರದು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ವಾಹನಗಳನ್ನು ನಿಲ್ಲಿಸುವವರಿಗೆ ದಂಡ ವಿಧಿಸಲಾಗುತ್ತದೆ.

 

ಇದನ್ನು ಓದಿ: Chandra Grahan 2023:ಈ ವರ್ಷದ ಚಂದ್ರಗ್ರಹಣ ಯಾವಾಗ ನಡೆಯುತ್ತೆ? ಸಂಪೂರ್ಣ ಮಾಹಿತಿ , ಹಲವು ವೈಶಿಷ್ಟ್ಯಗಳ ವಿವರ ಇಲ್ಲಿದೆ! 

Leave A Reply

Your email address will not be published.