Home Breaking Entertainment News Kannada KD Film: ರಶ್ಮಿಕಾ ಮಂದಣ್ಣಗೆ ಸ್ಪರ್ಧೆ ಕೊಡಲು ಇನ್ನೊಬ್ಲು ಕೊಡಗತಿ ರೆಡಿ, ಕೆಡಿ ಚಿತ್ರದ ಈ...

KD Film: ರಶ್ಮಿಕಾ ಮಂದಣ್ಣಗೆ ಸ್ಪರ್ಧೆ ಕೊಡಲು ಇನ್ನೊಬ್ಲು ಕೊಡಗತಿ ರೆಡಿ, ಕೆಡಿ ಚಿತ್ರದ ಈ ನಾಣಯ್ಯ!

KD Film
Image source: Etv bharat

Hindu neighbor gifts plot of land

Hindu neighbour gifts land to Muslim journalist

KD Film: ಕನ್ನಡ ಚಿತ್ರರಂಗ (kannada film industry) ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ (South film industry) ಕ್ರೇಜ್​ ಹುಟ್ಟಿಸಿರುವ ಚಿತ್ರ ‘ಕೆಡಿ’ (KD Film). ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ಹಾಗೂ ಜೋಗಿ ಪ್ರೇಮ್ (Jogi Prem) ನಿರ್ದೇಶನದ ಕೆಡಿ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹೀಗೆ ಬಹು ಭಾಷೆಯಲ್ಲಿ ಕೆಡಿ ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್​ (KD title) ಮತ್ತು ಟೀಸರ್​ನಲ್ಲಿ (KD Film teaser) ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಇದೀಗ ಚಿತ್ರದ ನಾಯಕಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದು, ಪೋಸ್ಟರ್ ರಿಲೀಸ್ ಮೂಲಕ ನಾಯಕಿಯ ಲುಕ್ ರಿವೀಲ್ ಮಾಡಿದ್ದಾರೆ.

ಕೆಡಿ ಸಿನಿಮಾ ಶೂಟಿಂಗ್ ಅಡ್ಡಕ್ಕೆ ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಾಲಿಟ್ಟಿದ್ದು, ಸಿನಿಮಾದ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ. ಕೆಲವು ವರ್ಷಗಳು ಕಳೆದ ನಂತರ ಇದೀಗ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ (sandalwood film industry) ಪಾದಾರ್ಪಣೆ ಮಾಡುತ್ತಿದ್ದಾರೆ. ಕೆಡಿ ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಪಾತ್ರದ ಪರಿಚಯವಾಗಿದ್ದು, ನಟಿಯ ಲುಕ್ ಹೊಸ ವರ್ಷದ ಯುಗಾದಿಯಂದು ರಿವೀಲ್ ಆಗಿದೆ. Kd ಚಲನಚಿತ್ರದಲ್ಲಿ ಶಿಲ್ಪಾಶೆಟ್ಟಿಯ ರೆಟ್ರೋ ಲುಕ್ (retro style) ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.

ಸದ್ಯ ಸಿನಿಮಾಗೆ ನಾಯಕಿಯ ಆಯ್ಕೆಯೂ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿತ್ತು. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ನಾಯಕಿಯಾಗಿ ಮಾಲಾಶ್ರಿ ಮಗಳು ಆಯ್ಕೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಈ ಎಲ್ಲಾ ಗೊಂದಲ, ಕುತೂಹಲಗಳಿಗೆ ತೆರೆ ಎಳೆದಿದ್ದು, ರೀಷ್ಮಾ ನಾಣಯ್ಯ (Reeshma Nanaiah) ನಾಯಕಿ ಎಂದು ಘೋಷಿಸಿದ್ದಾರೆ. ಈ ಹಿಂದೆ ಜೋಗಿ ಪ್ರೇಮ್ ನಿರ್ದೇಶನದ ‘ಏಕ್‌ ಲವ್ ಯಾ’ ಚಿತ್ರದಲ್ಲಿ ರೀಷ್ಮಾ ನಟಿಸಿದ್ದರು. ಇದೀಗ ಮತ್ತೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಡಿಕೇರಿ ಮೂಲದ ರೀಷ್ಮಾ ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದಾರೆ. ಮೊದಲ ಚಿತ್ರದಲ್ಲೇ ಆಕೆಯ ನಟನೆ ಗಮನ ಸೆಳೆದಿತ್ತು. ಹಾಗಾಗಿ ‘KD’ ಚಿತ್ರಕ್ಕೂ ಆಕೆನೇ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.

1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಧ್ರುವ ಸರ್ಜಾ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ನಟಿಸ್ತಿದ್ದಾರೆ ಎಂದು ಹೇಳಲಾಗಿದೆ. ಸಿನಿಮಾದಲ್ಲಿ ರವಿಚಂದ್ರನ್‌, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ , ಸಂಜಯ್ ದತ್ (Sanjay Dutt), ಹೀಗೆ ಸ್ಟಾರ್‌ಗಳ ತಾರಾಗಣವಿದೆ.

ಇದನ್ನೂ ಓದಿ: Abhi Cinema : ತಮ್ಮ ಮೊದಲ ಸಿನಿಮಾ ಅಭಿಗೆ ರಮ್ಯಾಗೆ ಪವರ್ ಸ್ಟಾರ್ ಪುನೀತ್ ಜೇಬಿಂದ ತೆಗೆದು ಕೊಟ್ಟ ಸಂಭಾವನೆ ವೈರಲ್!