Condom Vending Machine: ‘ ಅದು ‘ ನಿಮ್ಗೆ ಬೇಕಾ ? ಇನ್ಮುಂದೆ ಮನೆಗೇ ಅಥವಾ ನೀವಿರೋ ಹೊಟೇಲ್’ಗೇ ಬರತ್ತೆ !

Condom Vending Machine: ಲೈಂಗಿಕ ಕ್ರಿಯೆ ಒಂದು ಶಾರೀರಿಕ ಕ್ರಿಯೆಯಾಗಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹ ಬದಲಾವಣೆಗಳು ವರ್ಕ್ಔಟ್ ಮಾಡುವ ಸಂದರ್ಭದಲ್ಲಿ ಕೂಡ ದೊರೆಯುತ್ತದೆ. ಆದರೆ, ಲೈಂಗಿಕತೆಯ ಬಳಿಕ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಶೇಷ ಗಮನಹರಿಸಿದರೆ ಆರೋಗ್ಯಕರ (Healthy Life)ಹಾಗೂ ಖುಷಿಯ ಜೀವನ ನಡೆಸಬಹುದು.

 

ಜನರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಹಾಗೂ ವೈದ್ಯರು ಅನೇಕ ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡುವುದು ಸಾಮಾನ್ಯ. ಕೋರೋನಾ ಮಹಾಮಾರಿ ಕಾಣಿಸಿಕೊಂಡಾಗ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಲು ಸೂಚನೆ ನೀಡಿದ್ದು ನೆನಪಿರಬಹುದು. ಅದೇ ರೀತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡ ಬಳಿಕ ಲೈಂಗಿಕತೆಯ ಮೂಲಕ ಯಾವುದೇ ಲೈಂಗಿಕ ರೋಗಗಳು ಹರಡದ ರೀತಿಯಲ್ಲಿ ಯಾವುದೇ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಲು ಕಾಂಡೋಮ್‌ಗಳ ಬಳಕೆ ಮಾಡುವುದನ್ನು ಬೆಂಬಲಿಸುವುದನ್ನು ಗಮನಿಸಿರಬಹುದು.

ಹೀಗಿದ್ದರೂ ಮೆಡಿಕಲ್ ಶಾಪ್ ನಿಂದ ಕಾಂಡೋಮ್ ಕೊಂಡುಕೊಳ್ಳುವುದು ಎಂದು ಹೇಳಿದರೆ ಜನರಿಗೆ ಏನೋ ಒಂದು ಹಿಂಜರಿಕೆ , ಅವರು ಏನೆಂದು ಕೊಳ್ಳುತ್ತಾರೋ ಏನೋ ಎಂಬ ಕಸಿವಿಸಿಯಿಂದ ಕಾಂಡೋಮ್ ಬೇಕೆಂದು ಕೇಳುವಾಗ ನಾಚಿಕೆಯಲ್ಲಿ ಮುದುಡಿ ಹೋಗಿ ಕೊನೆಗೆ ಏನೇನೋ ಕಸರತ್ತು ಮಾಡಿ ಕಾಂಡೋಮ್ ಕೇಳುವುದಕ್ಕೆ ಮುಂದಾಗುತ್ತಾರೆ. ಹೇಗೋ ಕೇಳಿ ಮರಳಿ ಮನೆಗೆ ಬರುವವರೆಗೂ ನಾಚಿಕೆಯ ಮುದ್ದೆಯಾಗಿಯೇ ಉಳಿದುಬಿಡುತ್ತಾರೆ. ಆದರೆ, ಇನ್ನು ಮುಂದೆ, ಕಾಂಡೊಮ್ (Condom) ಕೊಂಡುಕೊಳ್ಳಲು ಪರದಾಡಬೇಕಾಗಿಲ್ಲ.

ಗುಜರಾತಿನ (Gujarat) ಇಬ್ಬರು ಮೆಕ್ಯಾನಿಕಲ್​ ಎಂಜಿನಿಯರ್​ ಗಳು ಈ ಗಂಭೀರ ಸಮಸ್ಯೆಯನ್ನು ಗಮನದಲ್ಲಿರಿಸಿ ಸೂರತ್‌ನಲ್ಲಿ ಈ ಯಂತ್ರವನ್ನು ಸ್ಥಾಪಿಸಿದ್ದಾರಂತೆ.ಕಾಂಡೋಮ್ ಮಾರಾಟ ಯಂತ್ರವನ್ನು(Condom Vending Machine) ಕಂಡುಹಿಡಿದಿದ್ದಾರೆ. ಸೂರತ್ ನಗರದ ದಾಭೋಲಿ ಚಾರ್ ರಸ್ತಾದಲ್ಲಿರುವ ಶ್ಯಾಮ್ ಮೆಡಿಕಲ್ ನಲ್ಲಿ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದ್ದು, ಇನ್ನೂ ಇದರ ಬಳಕೆ ಮಾಡುವುದು ಹೇಗಪ್ಪಾ! ಅಂತೀರಾ?

ಈ ವೆಂಡಿಂಗ್ ಮೆಷಿನ್ ಅನ್ನು ಬಳಸುವುದು ತುಂಬಾ ಸರಳ ಹಾಗೂ ಸುಲಭವಂತೆ! ಮೆಡಿಕಲ್ ಶಾಪ್ ಗೆ ತೆರಳಿ ಮೆಡಿಕಲ್ ಶಾಪ್ ನವರನ್ನು ಕೇಳದೆಯೇ ನೇರವಾಗಿ ಮೆಷಿನ್ ನಲ್ಲಿ ಗುಂಡಿ ಒತ್ತಿ ಕಾಂಡೊಮ್ ಪಡೆಯಬಹುದು. ಈ ಯಂತ್ರದಲ್ಲಿ ಕಾಂಡೋಮ್ ಬಾಕ್ಸ್ ಗಳ ಫೋಟೋಗಳಿದ್ದು, ಅವುಗಳ ಕೆಳಗೆ ಬಟನ್ ಅನ್ನು ನೀಡಲಾಗಿದ್ದು, ಅದನ್ನು ಒತ್ತಿದಾಗ ಕಾಂಡೋಮ್​​ಗಳು ಹೊರಬರುತ್ತವಂತೆ! ಅದನ್ನು ಪಾವತಿ ಮಾಡಲು ಯಂತ್ರದ ಪರದೆಯ ಮೇಲೆ QR ಕೋಡ್ ಕಾಣಿಸುತ್ತದೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಯಂತ್ರದಲ್ಲಿ ನಾಲ್ಕು ವಿಧದ ಕಾಂಡೋಮ್ ದೊರೆಯುತ್ತದಂತೆ. ಪಾವತಿ ಪೂರ್ಣಗೊಂಡ ಬಳಿಕ, ಕಾಂಡೋಮ್​​ ಯಂತ್ರದಿಂದ ಕಾಂಡೊಮ್ ಹೊರಗೆ ಬೀಳುತ್ತದಂತೆ. ಈ ರೀತಿ ಯಾರನ್ನು ಕೇಳದೆ ನೇರವಾಗಿ ಮೆಷಿನ್ ಮೂಲಕ ಕಾಂಡೊಮ್ ಪಡೆಯಬಹುದು.

ಇದನ್ನೂ ಓದಿ:Uttar Pradesh: ಛೀ! ಹಾಡಹಗಲೇ ಶಿಕ್ಷಕನೋರ್ವನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ! ಬೆಚ್ಚಿ ಬೀಳಿಸುತ್ತೆ ಈ ವೀಡಿಯೋ!!!

Leave A Reply

Your email address will not be published.