Home Breaking Entertainment News Kannada Kiran rathod: ಅಬ್ಬಬ್ಬಾ ! ಈ ನಟಿ ಯಾರ್ಗೆ ಬೇಕಿದ್ರೂ ಫೋಟೋ ಕಳಿಸ್ತಾಳೆ, ವಿಡಿಯೋ...

Kiran rathod: ಅಬ್ಬಬ್ಬಾ ! ಈ ನಟಿ ಯಾರ್ಗೆ ಬೇಕಿದ್ರೂ ಫೋಟೋ ಕಳಿಸ್ತಾಳೆ, ವಿಡಿಯೋ ಕಾಲ್‌, ಡಿನ್ನರ್ಗೂ ಓಕೆ ಅಂತಾಳೆ. ಆಕೆ ಮಾಡೋ ಚಾರ್ಜ್ ಮಾತ್ರ ಇಷ್ಟೆ?!?!

Kiran Rathod
Image source- rspnetwork.in, IMDb

Hindu neighbor gifts plot of land

Hindu neighbour gifts land to Muslim journalist

Kiran rathod: ಸೆಲೆಬ್ರಿಟಿಗಳನ್ನು ನೇರಾ ನೇರವಾಗಿ ಮಾತನಾಡಿಸೋದು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅವರೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡರೆ ಸಾಕು ಅದನ್ನ ಹಿಡಿದು ಸಂಭ್ರಮಿಸೋ ಅಭಿಮಾನಿಗಳಿಗೆ ಇಂತಾ ಚಾನ್ಸ್ ಸಿಕ್ಕಿದ್ರೆ ಬಿಡ್ತಾರಾ ಹೇಳಿ? ಅಂತೆಯೇ ಸಾಕಷ್ಟು ಜನ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯನ್ನು ಭೇಟಿ ಮಾಡಬೇಕು, ಅವರೊಟ್ಟಿಗೆ ಫೋನ್‌ನಲ್ಲಿ ಮಾತನಾಡಬೇಕು ಎನ್ನುವ ಆಸೆ ಇದ್ದೇ ಇರುತ್ತೆ. ಅಂದಹಾಗೆ ಇಲ್ಲೊಬ್ಬಳು ನಟಿ ತನ ಅಭಿಮಾನಿಗಳಿಗೆ ಅಂತದ್ದೊಂದು ಸುವರ್ಣಾವಕಾಶ ನೀಡಿದ್ದು, ಈ ಮ್ಯಾಟರ್ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ಮಿಂಚಿದ ಜೈಪುರ ಮೂಲದ ನಟಿ ಕಿರಣ್ ರಾಥೋಡ್ (Kiran rathod) ತಮ್ಮ ಅಭಿಮಾನಿಗಳಿಗಾಗಿ ಸುವರ್ಣಾವಕಾಶ ನೀಡಿದ್ದಾರೆ. ಹಣ ಪಾವತಿಸಿ ಆಕೆ ಜೊತೆ ಫೋನ್‌ನಲ್ಲಿ ಮಾತನಾಡಬಹುದು, ಭೇಟಿ ಮಾಡಬಹುದು, ಇನ್ನು ಹೆಚ್ಚು ಹಣ ಇದ್ದರೆ ಡಿನ್ನರ್‌ ಪಾರ್ಟಿಗೂ ಹೋಗಬಹುದಂತೆ. ಅಭಿನಯಕ್ಕಿಂತ ಜಾಸ್ತಿ ಗ್ಲಾಮರ್ ಡಾಲ್ ಆಗಿ ಕಾಣಿಸಿಕೊಂಡಿರೋ 41 ವರ್ಷ ವಯಸ್ಸಿನ ಈ ಚೆಲುವೆಗೆ ಇತ್ತೀಚೆಗೆ ಸಿನಿಮಾ ಅವಕಾಶಗಳು ಕಮ್ಮಿ ಆಗಿದ್ದು, ಸದ್ಯ ಸೋಶಿಯಲ್ ಮೀಡಿಯಾದತ್ತ ಮುಖ ಮಾಡಿರುವ ಈಕೆ ತನ್ನ ಫ್ಯಾನ್ಸ್ ಗಳಿಗೆ ಇಂತಹ ಒಂದು ಗೋಲ್ಡನ್ ಆಫರ್ ನೀಡಿದ್ದಾಳೆ.

ಅಂದಹಾಗೆ ಈ ಚೆಲುವೆ ಇದೀಗ ಒಂದು ಆಂಡ್ರಾಯ್ಡ್ ಆಪ್‌ ಸಿದ್ಧಪಡಿಸಿದ್ದಾರೆ. ಈ ಆಪ್ ಸಹಾಯದಿಂದ ಅಭಿಮಾನಿಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ಈ ಆಪ್ ಡೌನ್‌ಲೋನ್ ಮಾಡಿಕೊಳ್ಳಲು 49 ರೂ. ಪಾವತಿಸಬೇಕು. ಆ ಆಪ್ ಮೂಲಕ 1000 ರೂ. ಕಳುಹಿಸಿದರೆ ಆಕೆ 2 ಗ್ಲಾಮರಸ್ ಫೋಟೊಗಳನ್ನು ಕಳುಹಿಸುತ್ತಾರಂತೆ. ಅದೇ ರೀತಿ ಆಕೆ ಜೊತೆ 5 ನಿಮಿಷ ಫೋನ್‌ನಲ್ಲಿ ಮಾತನಾಡಲು 10 ಸಾವಿರ ಕೊಡಬೇಕು. ಇನ್ನು ವಿಡಿಯೋ ಕಾಲ್‌ನಲ್ಲಿ 15 ನಿಮಿಷ ಮಾತನಾಡಲು 14 ಸಾವಿರ ರೂ, 25 ನಿಮಿಷ ಮಾತನಾಡಲು 25 ಸಾವಿರ ಪಾವತಿಸಬೇಕಂತೆ. ಇನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆಕೆ ಜತೆ ಡಿನ್ನರ್ ಪಾರ್ಟಿಗೆ ಹೋಗಬೇಕು ಅಂದ್ರೆ 1 ಲಕ್ಷದ 50 ಸಾವಿರ ರೂ. ನೀಡಬೇಕಂತೆ.

ಇನ್ನು ಕಳೆದ ಹಲವು ದಿನಗಳಿಂದ ಈ ಆಪ್ ಚಾಲ್ತಿಯಲ್ಲಿದೆ. ಈ ಆಪ್ ಪ್ಲೇಸ್ಟೋರ್, ಆಪಲ್ ಆಪ್‌ ಜೊತೆಗೆ ನಟಿಯ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿರುವ ಲಿಂಕ್ ಕ್ಲಿಕ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆರ್ಮ್ಸ್ ಪ್ರೈಂ ಮೀಡಿಯಾ ಸಂಸ್ಥೆ ಈ ಅಪ್ಲಿಕೇಶನ್‌ ಡೆವಲಪ್ ಮಾಡಿ ಕೊಟ್ಟಿದೆ.

ವಿಶೇಷ ಏನಂದ್ರೆ ಆಪ್ ಡೌನ್‌ಲೋಡ್ ಆಗುತ್ತಿದ್ದಂತೆ ನಟಿಯ ಹೆಚ್‌ಡಿ ಕ್ಲಾಲಿಟಿ ಫೋಟೊಗಳು, ವಿಡಿಯೋಗಳು ಕಾಣಿಸುತ್ತವೆ. ತಿಂಗಳ ಮಟ್ಟಿಗೆ ಫ್ರೀಯಾಗಿ ಇದನ್ನು ಬಳಸಬಹುದು ನಂತರಹ ಹಣ ಪಾವತಿಸಬೇಕು. ಈ ಆಪ್‌ನಲ್ಲಿ ನಟಿಯ ಜೊತೆ ಲೈವ್ ಇಂಟರಾಕ್ಷನ್, ವರ್ಚುವಲ್ ಗಿಫ್ಟ್‌ಗಳನ್ನು ಕಳುಹಿಸಬಹುದು. ವೀಡಿಯೋ ಕಾಲ್‌ಗೆ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇನ್ನು ಪರ್ಸನಲ್ ವಿಶಸ್‌ ಕೂಡ ಕೇಳಿ ಪಡೆಯಬಹುದಾಗಿದೆ. ಇನ್ನು ಪ್ರೀಮಿಯರ್ ಮೆಂಬರ್‌ಶಿಪ್‌ಗಾಗಿ ತಿಂಗಳಿಗೆ 7 ಸಾವಿರ, 3 ತಿಂಗಳಿಗೆ 18 ಸಾವಿರ, 6 ತಿಂಗಳಿಗೆ 33 ಸಾವಿರ ಹೀಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕು.

 

ಅಂದಹಾಗೆ ನೀವೂ ಕೂಡ ಈಕೆಯ ಫ್ಯಾನ್ ಆಗಿದ್ರೆ, ಎನ್ಸ್ಟಾದಲ್ಲಿ ಈಕೆಯ ಪೋಸ್ಟ್ ನೋಡಿ ಫಿದಾ ಆಗಿದ್ರೆ ಅಥವಾ ಇಂತಹ ವಿಚಾರಗಳಲ್ಲಿ ಆಸಕ್ತಿ ಉಳ್ಳವರಾಗಿದ್ರೆ ಕಿರಣ್ ರಾಥೋಡ್ ನೀಡಿರೋ ಈ ಸುಂದರ ಅವಕಾಶವನ್ನು ನಿಮ್ಮದಾಗಿಸಿಕೊಂಡು ನೇರವಾಗಿ ಈ ಗ್ಲಾಮರಸ್ ಡಾಲ್ ಅನ್ನು ಭೇಟಿಯಾಗೋ ಅವಕಾಶ ನಿಮ್ಮದಾಗಿಸಿಕೊಳ್ಳಿ.

ಇದನ್ನೂ ಓದಿ: Dehli metro: ಬಿಕಿನಿ ಹುಡುಗಿ, ಹುಡುಗನ ಹಸ್ತಮೈಥುನ ಬಳಿಕ ದೆಹಲಿ ಮೆಟ್ರೋದಲ್ಲಿ ನಡೆಯಿತು ಜೋಡಿಗಳ ಓರಲ್ ಸಂಭೋಗ! ವೈರಲ್ ಆಯ್ತು ವಿಡಿಯೋ