Weekend With Ramesh: ಈ ಸಾರಿಯ ‘ ವೀಕೆಂಡ್ ವಿತ್ ರಮೇಶ್’ ಎಪಿಸೋಡಿಗೆ ಬಂದಿದೆ ದಾಖಲೆಯ TVR – ಅದ್ರ ಗೆಸ್ಟ್ ಯಾರು ಗೊತ್ತಾ ?

Weekend With Ramesh: ಕನ್ನಡದ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ಶೋ ( Weekend With Ramesh) ಕೂಡ ಒಂದಾಗಿದ್ದು, ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ,ಮನೆ ಮಾತಾದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್5 (Weekend With Ramesh Season 5) ಎಪಿಸೋಡ್ ನಲ್ಲಿ ದಾಖಲೆಯ TVR ಗಳಿಸಿದೆ. ಯಾರ ಎಪಿಸೋಡ್ ಇಷ್ಟು ಟಿವಿ ಆರ್ ಗಳಿಸಿದ್ದು ಗೊತ್ತಾ?

 

ವಾರದಿಂದ ವಾರಕ್ಕೆ ಹೊಸ ಹೊಸ ಅತಿಥಿಗಳ ಆಗಮನದಿಂದ ಝೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಾಗುತ್ತಿದೆ. ಈ ವಾರದ ಅತಿಥಿ ಯಾರು ಎಂದು ಜನರು ಕಾತುರದಿಂದ ಎದುರು ನೋಡುವಷ್ಟರ ಮಟ್ಟಿಗೆ ಈ ಶೋ ಫೇಮಸ್ ಆಗಿದೆ.

ಈಗಾಗಲೇ ಅನೇಕ ಮಂದಿ ಸಾಧಕರು ಈ ಕೆಂಪು ಕುರ್ಚಿಯ ಮೇಲೆ ಆಸೀನರಾಗಿ ತಮ್ಮ ಸಾಧನೆಯ ಪುಟಗಳನ್ನು ತಿರುವಿ ಹಾಕಿ ಎಲ್ಲರ ಮುಂದಿಟ್ಟಿದ್ದಾರೆ. ಇದರಲ್ಲಿ ನಟ ರಾಕ್ಷಸ ಎಂದೇ ಖ್ಯಾತಿ ಪಡೆದ ನಟ ಧನಂಜಯ್( Dali Dhananjay)ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಷೋನ ಎಪಿಸೋಡ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಶನಿವಾರ ಮತ್ತು ಭಾನುವಾರ ಎರಡು ದಿನ ಪ್ರಸಾರವಾದ ಎಪಿಸೋಡ್ ನಲ್ಲಿ ಡಾಲಿ ಧನಂಜಯ್ ಹೆಚ್ಚು ಭಾವುಕರಾಗಿದ್ದರು. ತನ್ನ ಜೀವನದ ಕಥೆಯನ್ನು ಹೇಳುತ್ತಾ ಅಕ್ಕ ರಾಣಿ ಅವರನ್ನು ಕಾರ್ಯಕ್ರಮಕ್ಕೆ ಬಂದಾಗ ಮಾತೇ ಬಾರದೆ ಆಕೆಯನ್ನು ಜಗತ್ತಿಗೆ ತೋರಿಸಲು ಇಷ್ಟವಿರಲಿಲ್ಲ ಎಂದು ಹೇಳಿ ಕಣ್ಣಿರು ಮಿಡಿಯುತ್ತಿದ್ದುದನ್ನು ನೋಡಿ ಪ್ರೇಕ್ಷಕರ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದು ಸುಳ್ಳಲ್ಲ.

ಕನ್ನಡಿಗರ ಮನ ಗೆದ್ದಿದ್ದ ಡಾಲಿ ಧನಂಜಯ್ ಅವರ ಎಪಿಸೋಡ್‌ಗೆ ಬಂದ ಟಿವಿಆರ್ ಎಷ್ಟಾಗಿರಬಹುದು ಎನ್ನುವ ಕಕೌತುಕ ಹೆಚ್ಚಿನವರನ್ನು ಕಾಡದಿರದು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಈ ವೀಕೆಂಡ್ ವಿತ್ ರಮೇಶ್ ಸಂಚಿಕೆಯಲ್ಲಿ ಅತೀ ಹೆಚ್ಚು ಟಿವಿಆರ್ ಪಡೆದ ಎಪಿಸೋಡ್ ಧನಂಜಯ್ ಅವರದ್ದು ಎಂಬ ವಿಚಾರ ಹೊರಬಿದ್ದಿದೆ. ಡಾಲಿ ಧನಂಜಯ್ ಅವರ ಎಪಿಸೋಡ್ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಈ ಎಪಿಸೋಡ್ ಗಳಲ್ಲಿ 6.2 ಟಿವಿಆರ್ ಗಳಿಸಿದೆ ಎಂಬ ವಿಚಾರ ಬಯಲಾಗಿದ್ದು, ‘ಕನ್ನಡಿಗರ ಮನೆ ಮಗ ನಮ್ಮ ಡಾಲಿ ಧನಂಜಯ್ ಅವರು ಜನರ ಮೇಲಿಟ್ಟಿರುವಂತಹ ಪ್ರೀತಿ ಎಂದಿಗೂ ಕಡಿಮೆಯಾಗದು ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಂಚಲನ ಮೂಡಿಸುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Weekend With Ramesh
Image source:Pipanews. com

 

ಇದನ್ನು ಓದಿ: Actor Challenging Star Darshan: ಡಿ ಬಾಸ್ ದರ್ಶನ್ ತೂಗುದೀಪ ಬಿಜೆಪಿ ಪರ ಭರ್ಜರಿ ರೋಡ್ ಶೋ: ಇಂದು ಈ ಕ್ಷೇತ್ರಗಳಲ್ಲಿ ‘ಚಾಲೆಂಜಿಂಗ್ ಸ್ಟಾರ್’ ಪ್ರಚಾರ !

Leave A Reply

Your email address will not be published.