Narendra Modi – Mallikarjuna Kharge: ಮೋದಿ ವಿರುದ್ಧ ಖರ್ಗೆ ಸರ್ಪದ ಹೇಳಿಕೆ: ಬಿಜೆಪಿಗೆ ಮತ್ತಷ್ಟು ಲಾಭ ಆಗಲಿದೆ – ಸಚಿವ ಸುಧಾಕರ್‌ !

Narendra Modi – Mallikarjuna Kharge: ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮೂರು ಪಕ್ಷದ ನಾಯಕರು ಸ್ಥಳೀಯರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆಯೇ ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪಗಳು ಜೋರಾಗಿದೆ.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದರು. ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯಿಂದ ಬಿಜೆಪಿಯಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಕುರಿತು ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಯಿಂದ ಬಿಜೆಪಿಗೆ ಲಾಭ ಆಗಲಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಖರ್ಗೆ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಶೇಕಾಡ 2 ರಿಂದ 3 ಮತ ಹೆಚ್ಚಳವಾಗಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ರೀತಿ ಭಾಷೆ ಬಳಸೋದು ಸರಿ ಅಲ್ಲ. 130 ಕೋಟಿ ಭಾರತೀಯರನ್ನು ಅವರು ಅಪಮಾನ ಮಾಡಿದ್ದಾರೆ. ಮೋದಿಯವರು ವಿಶ್ವ ನಾಯಕರು. ಇದು ಖರ್ಗೆಯವರ ರಾಜಕೀಯ ದಿವಾಳಿತನ ವ್ಯಕ್ತಿತ್ವ ತೋರ್ಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆಯವರ (Narendra Modi – Mallikarjuna Kharge)  ಕಡೆಯಿಂದ ನಾನು ಇದನ್ನು ನೀರಿಕ್ಷೆ ಮಾಡಿರಲಿಲ್ಲ. ವೈಯಕ್ತಿಕ ನಿಂದನೆಗಳು ಮಾಡಬಾರದು. ವಿಷಯಾಧಾರಿತ ಆರೋಗ್ಯಕರ ಟೀಕೆಗಳು ಇರಬೇಕು. ಈ ರೀತಿ ಹೇಳಿಕೆಗಳಿಂದ ಅವರ ಸ್ಥಾನಮಾನ ಗೌರವಕ್ಕೆ ಧಕ್ಕೆಯಾಗಲಿದೆ. ಕರ್ನಾಟಕದ ಜನ ಈ ಮಾತಿನಿಂದ ಬಹಳಷ್ಟು ನೋವು ಅನುಭವಿಸಿದ್ದಾರೆ. ಹೀಗಾಗಿ ಅವರಿಗೆ ನಷ್ಟ ಬಿಜೆಪಿಗೆ ಲಾಭ ಆಗಲಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ.

 

ಇದನ್ನು ಓದಿ: Freddie Mercury: ಅಬ್ಬಬ್ಬಾ, ಬರೋಬ್ಬರಿ 18 ಲಕ್ಷಕ್ಕೆ ಹರಾಜಾಯ್ತು ಈತನ ಚಡ್ಡಿ.! ಏನೀ ಚಡ್ಡಿಯ ಮರ್ಮ ? 

Leave A Reply

Your email address will not be published.