Mahalakshmi-Ravindar: ‘ನೀವು ಇಷ್ಟವಾಗುವುದಿಲ್ಲ’ ಎಂದ ರವೀಂದರ್, ಪತಿಯ ಪೋಸ್ಟ್’ಗೆ ಮಹಾಲಕ್ಷ್ಮಿ ಕೊಟ್ಳು ಖಾರದ ಕೌಂಟರ್ !

Mahalakshmi-Ravindar: ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi)ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುವ ಮಂದಿಯೇ ಹೆಚ್ಚು. ಹೀಗಾಗಿ, ಟ್ರೊಲ್ ಮಾಡುವ ಮಂದಿಗೆ ಕೌಂಟರ್ ನೀಡುವ ಪ್ರಯತ್ನಕ್ಕೆ ನಟಿ ಮಹಾಲಕ್ಷ್ಮಿ ಮುಂದಾಗಿದ್ದಾರೆ.

 

ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮಿ 2ನೇ ಮದುವೆ (Mahalakshmi-Ravindar)ಆದ ಬಳಿಕ ಭಾರೀ ಸುದ್ದಿಯಲ್ಲಿರುವ ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಫಾಲೋವರ್ಸ್ಗಳಿದ್ದಾರೆ. ಈ ಜೋಡಿ ಆಗಾಗ ತಮ್ಮ ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ಇತ್ತೀಚೆಗಷ್ಟೇ ರವೀಂದ್ರ ಅವರು ಪತ್ನಿ ಜೊತೆಗೆ ದೇವಸ್ಥಾನದ ಮುಂದೆ ನಿಂತಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು, ಇದಕ್ಕೆ ಟ್ರೊಲ್ ಮಾಡುವ ಮಂದಿಗೆ ಖಡಕ್ ಉತ್ತರ ನೀಡುವಂತೆ ಮಹಾಲಕ್ಷ್ಮಿ ಪತಿಯ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ.

ಕ್ರಿಸ್ಮಸ್ ಸಂದರ್ಭದಲ್ಲಿ ಪತ್ನಿಗೆ ಸ್ವೀಟ್ ಮೆಸೇಜ್ ಮಾಡಿದ್ದ ರವೀಂದ್ರರವರು ಮಹಾಲಕ್ಷ್ಮಿ ತನ್ನ ಜೀವನದ ಎಂಟನೇ ಅದ್ಭುತ ಎಂದು ಹೇಳಿ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ನಟಿ ಮಹಾಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದರು. ‘ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ನಾನು ನನ್ನ ಕೊನೆಯ ಉಸಿರು ಇರುವವರೆಗೂ ಪ್ರೀತಿಸುತ್ತೇನೆ. ನೀನಿಲ್ಲದೆ ನಾನು ಏನೂ ಅಲ್ಲ. ನೀನೇ ನನ್ನ ಸರ್ವಸ್ವ’ ಎಂದು ಪತಿಯ ಪೋಸ್ಟ್ ಗೆ ಹೇಳಿಕೊಂಡಿದ್ದರು.

ಈ ಸಮಯದಲ್ಲಿಯೂ ಹೆಚ್ಚಿನ ಮಂದಿ ಈ ಜೋಡಿಗೆ ಟ್ರೊಲ್ ಮಾಡಿದ್ದರು. ಈ ನಡುವೆ, ಮಹಾಲಕ್ಷ್ಮಿ ಹೆಚ್ಚಾಗಿ ಗಂಡನ ಫೋಟೋಗಳನ್ನೇ ಹಂಚಿಕೊಳ್ಳುವುದರಿಂದ ಮಗನ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ ಎಂದು ಕೂಡ ಟ್ರೋಲ್ ಗೊಳಗಾಗಿದ್ದರು. ಇದಾದ ಬಳಿಕ ನಟಿ ತಮ್ಮ ಮಗನ ಫೋಟೋ ವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಇತ್ತೀಚಿನ ಪೋಸ್ಟ್ ಒಂದರಲ್ಲಿ “ಅದೃಷ್ಟವು ಕೇವಲ ಧೈರ್ಯಶಾಲಿಗಳಿಗೆ ನೆರವಾಗುತ್ತದೆ. ಇದು ನನ್ನ ಪ್ರೀತಿ ಮತ್ತು ನನ್ನ ಜೀವನ, ಎಲ್ಲರೂ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಎಲ್ಲರಿಗೂ ಉತ್ತರ ನೀಡಬೇಡಿ ಎಂದು ನಾನು ನಿಮಗೆ ಸಲಹೆ ನೀಡುತ್ತೇನೆ. ಎಲ್ಲರಂತೆ ನಮ್ಮ ಜೀವನ ಸರಳ ಮತ್ತು ಸುಂದರವಾಗಿರುವುದರಿಂದ ನಮಗೆ ಸಂತೋಷವಿದೆ ಎಂದು ರವೀಂದ್ರನ್ ಬರೆದುಕೊಂಡಿದ್ದರು.

ಸದ್ಯ, ಪತಿ ರವೀಂದ್ರ ಅವರ ಪೋಸ್ಟ್ ಗೆ ಮಹಾಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದು, ಪತಿಯನ್ನು ಟ್ರೋಲ್ ಮಾಡುವವರಿಗೆ ಮಹಾಲಕ್ಷ್ಮಿ ಖಾರವಾಗಿ ಟಾಂಗ್ ನೀಡಿದ್ದಾರೆ.
‘ಲವ್ ಯೂ ಮೈ ಲೈಫ್ ಐ ಡೋಂಟ್ ವಾಂಟ್ ಎವೆರಿವನ್ ಐ ಜಸ್ಟ್ ನೀಡ್ ಯು’. ಅಂದರೆ ‘ ನೀನು ನನ್ನ ಜೀವ.. ನಿನ್ನನ್ನು ನಾನು ಪ್ರೀತಿಸುತ್ತೇನೆ. ನನಗೆ ಬೇಕಾಗಿರುವುದು ನೀನು ಹೊರತು ಬೇರೆಯವರಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಮೊದಲು ಮದುವೆಯ ಫೋಟೋಗಳಂತೂ ದೇಶಾದ್ಯಂತ ಸುದ್ದಿಯಾಗಿ, ರವೀಂದ್ರ ಅವರ ದೇಹ ಗಾತ್ರ, ಬಣ್ಣವನ್ನು ಮೆನ್ಶನ್ ಮಾಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಈಗಲೂ ನೆಟ್ಟಿಗರು ತಮಿಳು ಕಿರುತೆರೆಯ ಸೆಲೆಬ್ರಿಟಿ ಜೋಡಿಯ ಕಾಲೆಳೆಯುವುದನ್ನು ಬಿಟ್ಟಿಲ್ಲ. ಆದರೆ ಇದ್ಯಾವುದಕ್ಕೂ ಇಬ್ಬರೂ ಕ್ಯಾರೇ ಎನ್ನದೆ ಖುಷಿಯಲ್ಲಿ ಜೀವನ ನಡೆಸುತ್ತಿದ್ದಾರೆ.

 

ಇದನ್ನು ಓದಿ: Infosys Sudhamurthy: ನನ್ನಿಂದ ಗಂಡ ಉದ್ಯಮಿ ಆದಂತೆ, ಮಗಳಿಂದ ಅಳಿಯ ಪ್ರಧಾನಿ ಆದ ! ಬದುಕಿನ ಗುರುವಾರಗಳ ಕಥೆ ಹೇಳಿದ ಸುಧಾ ಮೂರ್ತಿ!

Leave A Reply

Your email address will not be published.