Bhumika Chawla: 44 ರ ನಟಿ 14 ರ ಹುಡುಗನ ಜತೆ ರೊಮ್ಯಾನ್ಸ್ – ಈ ಪ್ಯಾರ್ ಗೆ ಏನಾಗೈತೆ ?!

Bhumika Chawla: ಬಹುಭಾಷಾ ನಟಿಯಾಗಿ ತೆರೆ ಮೇಲೆ ಮಿಂಚಿದ್ದ ನಟಿ ಭೂಮಿಕಾ ಚಾವ್ಲಾ (Bhumika Chawla) ಸದ್ಯ ತನ್ನ ಹೇಳಿಕೆಯ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಭೂಮಿಕಾ ಚಾವ್ಲಾ ಬಾಲಿವುಡ್​​ (Bollywood) ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ ನಟಿ ಬಳಿಕ ತೆಲುಗು, ತಮಿಳು ಸಿನಿಮಾರಂಗದಲ್ಲಿ ನಟಿಸಿ ಬಹುಭಾಷಾ ನಟಿಯಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ ನಾಯಕಿಯಾಗಿ ತೆರೆ ಮೇಲೆ ಮಿಂಚಿದ್ದ ನಟಿ ಇಂದು ಅತ್ತಿಗೆ ಪಾತ್ರ, ಸೈಡ್​ ರೋಲ್​​ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ, ಭೂಮಿಕಾ ಚಾವ್ಲಾ ಇಂದಿನ ನಾಯಕ ಮತ್ತು ನಾಯಕಿಯರ ನಡುವಿನ ವಯಸ್ಸಿನ ಅಂತರದ ಬಗ್ಗೆ ಮಾತನಾಡಿದ್ದಾರೆ.

 

ಇತ್ತೀಚೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿರುವ ಭೂಮಿಕಾ , ಇದೆ ಸಿನಿಮಾದಲ್ಲಿ ಹತ್ತಿಪ್ಪತ್ತು ವರ್ಷ ಚಿಕ್ಕ ವಯಸ್ಸಿನ ಕಿಸೀ ಕಾ ಭಾಯಿ ಕಿಸೀ ಕೀ ಜಾನ್​ನಲ್ಲಿ ನಟ ಸಲ್ಮಾನ್​ ಖಾನ್​ ಮತ್ತು ನಟಿಯ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ (age gap)ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಹೀರೋ ಮತ್ತು ಹಿರೋಯಿನ್ ನಡುವೆ ವಯಸ್ಸಿನ ಅಂತರ ಇರುವುದು ಇದೆ ಮೊದಲಲ್ಲ!ಅದು ಬೇರೆ ಮಾತು!

ಸಾಮಾನ್ಯವಾಗಿ ಬಾಲಿವುಡ್​ನ ಸ್ಟಾರ್ ನಟರು ವಯಸ್ಸು 50ಕಳೆದರೂ ಕೂಡ 20ರ ನಟಿಯ ಜೊತೆ ರೊಮ್ಯಾನ್ಸ್ ಮಾಡುವುದು ಕಾಮನ್. ಆದರೆ, ಹೀರೋಯಿನ್ ಗಳ ಕಥೆ ಹೀಗಲ್ಲ. 30ರ ಆಸುಪಾಸಿಗೆ ಬಂದಂತೆ ಹೀರೋಯಿನ್ ಗಳ ಡಿ ಮ್ಯಾಂಡ್ ಕಡಿಮೆ ಆದಂತೆ! ಹೀರೋಯಿನ್ ಗಳ ವಯಸ್ಸು 35 ಆಯಿತು ಎಂದಿಟ್ಟುಕೊಳ್ಳಿ! ಮತ್ತೆ ಅಮ್ಮ, ಅಕ್ಕನ ರೋಲ್ ಫಿಕ್ಸ್ ಅಂತಾನೆ ಲೆಕ್ಕ! ಈ ಸಾಲಿಗೆ ಸೇರ್ಪಡೆ ಆಗಿರುವ ನಟಿ ಭೂಮಿಕಾ ಚಾವ್ಲಾ ಸಿನಿಜಗತ್ತಿನ ಈ ನಡೆಯನ್ನು ಖಂಡಿಸಿದ್ದಾರೆ.

ನಟಿಯರಿಗೆ ಒಂದು ವಯಸ್ಸು ದಾಟುತ್ತಿದ್ದಂತೆಯೇ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ನಟರಿಗೆ ಹಾಗಲ್ಲ ಎನ್ನುವುದು ಭೂಮಿಕಾ ಅವರ ಮಾತು. ಸಿನಿಮಾವಾಗಲಿ ಇಲ್ಲವೇ ನಿಜ ಜೀವನದ್ದಲ್ಲಾಗಲಿ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಯುವಕರ ಜೊತೆ ರೊಮ್ಯಾನ್ಸ್(Romance) ಮಾಡುವುದನ್ನು ಬೇಗ ಖಂಡಿಸುತ್ತಾರೆ. ಆದರೆ ಇದು ನನಗೆ ಇಷ್ಟವಾಗುವುದಿಲ್ಲವೆಂದು ಹೇಳಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಮಾತ್ರ ತನಗಿಂತ ಅದೆಷ್ಟೋ ಚಿಕ್ಕ ವಯಸ್ಸಿನ ಹೀರೋಯಿನ್ ಜೊತೆ ರೊಮ್ಯಾನ್ಸ್ ಮಾಡಬಹುದು. ಹೀಗಾದ ಮೇಲೆ, ನಾನು ಕೂಡಾ ಕಿಡ್ ಜೊತೆ ರೊಮ್ಯಾನ್ಸ್ ಮಾಡಬಹುದು ಎಂದು ಹಾಸ್ಯ ಮಾಡಿದ್ದಾರೆ. ಸದ್ಯ, ನಟಿ ನೀಡಿರುವ ಹೇಳಿಕೆ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದ್ದು, ಅರೇ ನಟಿಗೆ ಏನಾಯಿತು? ಇಷ್ಟು ದೊಡ್ಡವರಾಗಿ ಹೀಗ್ಯಾಕೆ ಹೇಳಿದ್ರು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲ ಅಭಿಮಾನಿಗಳು ನಟಿ ಪರ ಬ್ಯಾಟಿಂಗ್ ಮಾಡಿ ನಟಿ ಹೇಳಿದ್ದರಲ್ಲಿ ತಪ್ಪೇನಿದೆ? ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Baby Born with Two Penis: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಫೋಟೋ ವೈರಲ್!‌

Leave A Reply

Your email address will not be published.