UPSC Recruitment 2023: ಪದವಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ! 322 ಹುದ್ದೆಗಳಿಗೆ ಅರ್ಜಿ ಆಹ್ವಾನ! ಮಾಸಿಕ ವೇತನ ರೂ.1 ಲಕ್ಷಕ್ಕಿಂತಲೂ ಹೆಚ್ಚು!!!

UPSC Recruitment 2023: ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಇಂದಿನ ಕಾಲದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ದೊಡ್ದ ಸವಾಲಾಗಿ ಪರಿಣಮಿಸಿದೆ. ಪೈಪೋಟಿಯ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಒಂದು ನೌಕರಿ ಪಡೆಯೋದೆ ದೊಡ್ಡ ಹರಸಾಹಸ. ಇದೀಗ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಪದವೀಧರರಿಗೆ(UPSC Recruitment 2023) ಉದ್ಯೋಗ ಪಡೆಯಲು ಸುವರ್ಣ ಅವಕಾಶ ಕಲ್ಪಿಸಿದೆ. ಹೌದು!! ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಎಪಿಎಫ್‌ ಅಸಿಸ್ಟಂಟ್ ಕಮಾಂಡಂಟ್ (UPSC CAPF 2023)ಹುದ್ದೆಗಳ ಭರ್ತಿಗೆ ಅಧಿಸೂಚಿಸಿದ್ದು, 322 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಮಾಹಿತಿ, ವೇತನ, ಆಯ್ಕೆ ಪ್ರಕ್ರಿಯೆ ಮೊದಲಾದ ಮಾಹಿತಿ ತಿಳಿದಿರುವುದು ಅವಶ್ಯಕ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಯ ವಿವರ
ಸಂಸ್ಥೆಯ ಹೆಸರು – ಕೇಂದ್ರ ಲೋಕಸೇವಾ ಆಯೋಗ
ವೆಬ್‌ಸೈಟ್‌ ವಿಳಾಸ – https://www.upsc.gov.in/

ಸಶಸ್ತ್ರ ಪಡೆಗಳ ಹೆಸರು ಹುದ್ದೆಗಳ ಸಂಖ್ಯೆ
ಗಡಿ ಭದ್ರತಾ ಪಡೆ (BSF) – 86
ಕೇಂದ್ರ ಮೀಸಲು ಪೊಲೀಸ್ ಪಡೆ(CRPF) – 55
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) – 91
ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್ (ITBP) -60
ಸರ್ವೀಸ್ ಸೆಲೆಕ್ಷನ್ ಬೋರ್ಡ್‌ (SSB) -30

ಮೇಲೆ ತಿಳಿಸಿದ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಸಲ್ಲಿಸಲು 27-04-2023ಆರಂಭಿಕ ದಿನವಾಗಿದ್ದು,16-05-2023 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇದರ ಜೊತೆಗೆ, ಮೇ 17 ರಿಂದ 23, 2023ವರೆಗೆ ಅರ್ಜಿ ಹಿಂಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಯುಪಿಎಸ್‌ಸಿ ವೆಬ್ಸೈಟ್ ಹೀಗಿದೆ:
UPSC Official Website :https://www.upsc.gov.in

ಸಿಎಪಿಎಫ್‌ ಪಡೆಗಳ ಅಸಿಸ್ಟಂಟ್ ಕಮಾಂಡಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳಲ್ಲಿ ಯಾವುದೇ ಪದವಿ ಇಲ್ಲವೇ ಶೈಕ್ಷಣಿಕ ಅರ್ಹತೆ ಪಡೆದಿರಬೇಕಾಗುತ್ತದೆ. ಸಾಮಾನ್ಯ ಕೆಟಗರಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.200 ಅರ್ಜಿ ಶುಲ್ಕವಿದ್ದು,ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು. ಎಸ್‌ಸಿ , ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ದೊರೆಯಲಿದೆ. ಸಿಎಪಿಎಫ್‌ ಅಸಿಸ್ಟಂಟ್ ಕಮಾಂಡಂಟ್ ಹುದ್ದೆಗೆ ವೇತನ ಶ್ರೇಣಿ : Rs.56,100-1,77,500 ಆಗಿರಲಿದೆ.

ಈ ಹುದ್ದೆಗಳಿಗೆ ಪರೀಕ್ಷೆಯು 06-08-202ರಂದು ನಡೆಯಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 20 ವರ್ಷ ಆಗಿದ್ದು, ಗರಿಷ್ಠ ವಯೋಮಿತಿ 25 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಇದರ ಜೊತೆಗೆ ಅಭ್ಯರ್ಥಿಗಳಿಗೆ ವರ್ಗವಾರು ವಯೋಮಿತಿ ಸಡಿಲಿಕೆ ಇರಲಿದೆ. ಹೀಗಾಗಿ, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ: Mann Ki Baat 100: ಮನ್ ಕೀ ಬಾತ್ ಅನ್ನು ಮನಸಾರೆ ಹೊಗಳಿದ ಅಮೀರ್ ಖಾನ್ – ಇದು ವಿಶ್ವ ನಾಯಕರು ಮಾಡೋ ಕೆಲ್ಸ ಎಂದ ನಟ !

Leave A Reply

Your email address will not be published.