Home Karnataka State Politics Updates Smita rakesh: ವರುಣಾದದಲ್ಲಿ ಮಾವನ ಪರ ಪ್ರಚಾರಕ್ಕಿಳಿದ ಸಿದ್ದು ಸೊಸೆ! ಇವರೇ ನೋಡಿ ರಾಕೇಶ್ ಪತ್ನಿ!

Smita rakesh: ವರುಣಾದದಲ್ಲಿ ಮಾವನ ಪರ ಪ್ರಚಾರಕ್ಕಿಳಿದ ಸಿದ್ದು ಸೊಸೆ! ಇವರೇ ನೋಡಿ ರಾಕೇಶ್ ಪತ್ನಿ!

Smita rakesh
Image source- public TV

Hindu neighbor gifts plot of land

Hindu neighbour gifts land to Muslim journalist

Smita rakesh :ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣೆ ಕಾವು ರಂಗೇರುತ್ತಿದೆ. ಅಬ್ಬರದ ಪ್ರಚಾರವೂ ಸಾಗುತ್ತಿದೆ. ಈ ನಡುವೆ ಅಭ್ಯರ್ಥಿಗಳ ಪರವಾಗಿ ಅವರ ಕುಟುಂಬ ಸದಸ್ಯರು ಕೂಡ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಭ್ಯರ್ಥಿಗಳ ಹೆಂಡತಿಯರೇ ನೇರವಾಗಿ ಅಕಾಡಕ್ಕಿಳಿದಿದ್ದಾರೆ. ಅಂತೆಯೇ ಇದೀಗ ವರುಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಅವರ ಸೊಸೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಹೌದು, ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ (Varuna Constituency) ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯ (Siddaramaiah) ಕುಟುಂಬದಿಂದ ಮಹಿಳೆಯರು ಪ್ರಚಾರಕ್ಕಿಳಿದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ತಮ್ಮ ಸೊಸೆ, ರಾಕೇಶ್ ಅವರ ಪತ್ನಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಪರ ನಟಿ ರಮ್ಯಾ (Ramya) ಹಾಗೂ ನಟ ದುನಿಯಾ ವಿಜಯ್‌ (Duniya Vijay) ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಸೊಸೆಯೂ ತಮ್ಮ ಮಾವನ ಪರ ಮತ ಯಾಚನೆಗಿಳಿದಿರುವುದು ವರುಣಾದಲ್ಲಿ ಸಿದ್ದುಗೊಂದು ಮೆರುಗು ತಂದಿದೆ.

ಅಂದಹಾಗೆ ವರುಣಾ ಕ್ಷೇತ್ರದ ತಾಯೂರು ಗ್ರಾಮ ಪಂಚಾಯ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಸೊಸೆ ಸ್ಮಿತಾ ರಾಕೇಶ್‌ ಸಿದ್ದರಾಮಯ್ಯ (Smita Rakesh Siddaramaiah) ಅವರು, ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ. ಇದೇ ವೇಳೆ ಈ ಬಾರಿ ಅತಿಹೆಚ್ಚು ಮತಗಳಿಂದ ಮಾವನವರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ಯಾವ ಕ್ಷೇತ್ರದಲ್ಲಿ ತಾನು ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯನವರಿಗೆ ಗೊಂದಲವಾದಾಗ, ಸಿದ್ದು ತಮ್ಮ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಕೀಯ ವಿಚಾರವಾಗಿ ಹೆಂಡತಿ ಹಾಗೂ ಮಗನ ಸಲಹೆಯನ್ನು ಪಡೆದಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಮಗ ರಾಕೇಶನ ಪುತ್ರ, ತಮ್ಮ ಮೊಮ್ಮಗನನ್ನು ಪ್ರಾಚಾರದ ಕಾರ್ಯಕ್ಗಳಿಗೆಲ್ಲ ಕರೆತಂದಿದ್ದರು. ಇದೀಗ ಸೊಸೆಯೂ ಕೂಡ ತಮ್ಮ ಕ್ಷೇತ್ರದಾದ್ಯಂತ ಓಡಾಡುತ್ತಾ ಮತ ಬೇಟೆ ಶುರು ಮಾಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Jagadish shettar: ಈ ಬಾರಿ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಗೆದ್ದೇ ಗೆಲ್ಲುತ್ತಾರೆ; ರಕ್ತದಲ್ಲಿ ಪತ್ರ ಬರೆದ ಅಭಿಮಾನಿ? ಏನಿದೆ ಗೊತ್ತಾ?