Boiled Rice in Ration Card: ರೇಷನ್ ಕಾರ್ಡ್ ದಾರರಿಗೆ ಶೀಘ್ರವೇ ರೇಷನ್ ಜೊತೆ ಕುಚ್ಚಲಕ್ಕಿ ವಿತರಣೆ!
Boiled Rice In Ration-Card: ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಬಂಪರ್ ಸಿಹಿ ಸುದ್ದಿ (Good News For Ration Card Holders)ನೀಡಿದ್ದು, ಅತೀ ಶೀಘ್ರದಲ್ಲಿ ಪಡಿತರ ವಿತರಣೆಯ ಜೊತೆಗೆ ರೇಷನ್ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಕೇಂದ್ರ ಸರ್ಕಾರ (Central Government) ಪಡಿತರ ವಿತರಣೆಗೆ(Ration Card) ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಇದರ ನಡುವೆ, ಅತೀ ಶೀಘ್ರದಲ್ಲಿ ಪಡಿತರದ ಜೊತೆಗೆ ಕುಚ್ಚಲಕ್ಕಿ (Boiled Rice In Ration-Card)ವಿತರಣೆ ಮಾಡುವ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರಕಾರದಿಂದ ಕರಾವಳಿಯಲ್ಲಿ ಕುಚ್ಚಲಕ್ಕಿಗೆ ಪೂರಕವಾದ ಭತ್ತದ ತಳಿಗಳಾದ ಎಂಒ4, ಅಭಿಲಾಷಾ, ಜ್ಯೋತಿ, 1001 ತಳಿಗಳ ಪಟ್ಟಿ ಮಾಡಿ ಅನುಮೋದನೆ ಪಡೆದು ಹೆಚ್ಚುವರಿಯಾಗಿ 500 ರೂ. ಸಬ್ಸಿಡಿ ಒದಗಿಸಿ ಭತ್ತ ಖರೀದಿ ಮಾಡಲು ನಿರ್ಣಯ ಕೈಗೊಂಡಿರುವ ಬಗ್ಗೆ ಇದೆ ವೇಳೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಪಡಿತರದ ಜತೆಗೆ ಕುಚ್ಚಲಕ್ಕಿ ನೀಡಲು ಸರ್ಕಾರ ಸಿದ್ಧವಿದ್ದು, ಕುಚ್ಚಲಕ್ಕಿ ವಿತರಣೆಗಾಗಿ ಈಗಾಗಲೇ ಅನುಮೋದನೆ ಸಿಕ್ಕಿದ್ದು, ತಾಂತ್ರಿಕ ಕಾರಣಗಳಿಂದ ಯೋಜನೆ ದೊರೆಯಲು ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಿಸಿ ಪಡಿತರ ವಿತರಣೆ ಮಾಡಲಾಗುವ ಕುರಿತು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಆಹಾರ ಸೇವನೆಗೆ ಕುಚ್ಚಲಕ್ಕಿ ಹೆಚ್ಚು ಬಳಕೆ ಮಾಡುವುದರಿಂದ ಸರಕಾರದ ಈ ನಿರ್ಣಯ ಜನರಿಗೆ ಖುಷಿ ಮೂಡಿಸುವುದು ಸುಳ್ಳಲ್ಲ.
ಇದನ್ನು ಓದಿ: BMTC, KSRTC ಬಸ್ ಸೇವೆ 9 ದಿನಗಳ ಕಾಲ ವ್ಯತ್ಯಯ ಸಾಧ್ಯತೆ!