Martin Teaser deleted from YouTube: ಯ್ಯೂಟೂಬ್‌ನಿಂದ ‘ಮಾರ್ಟಿನ್’ ಟೀಸರ್ ಡಿಲೀಟ್! ರಷ್ಯಾ ಹ್ಯಾಕರ್ಸ್‌ಗಳದ್ದೇ ಕೈವಾಡ? ಧ್ರುವ ತಂಡಕ್ಕೆ ಸಿಕ್ಕಿದ್ದೆಷ್ಟು ಹೋಗಿದ್ದೆಷ್ಟು?

Martin movie teaser hack: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್‌ ಬಿಡುಗಡೆ ಆದಾಗಿನಿಂದ ಯ್ಯೂಟೂಬ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಆದ್ರೆ ಇದೀಗ ಆ ಸಿನಿಮಾ ಟೀಸರ್‌ ಅಲ್ಲಿ ಕಾಣಿಸ್ತಾನೆ ಇಲ್ಲ. ನಮ್ಮ ಚಿತ್ರದ ಟೀಸರ್ ಡಿಲೀಟ್ ಆಗಿದೆ ಎಂದಿದ್ದಾರೆ ಸಿನಿಮಾ ಡೈರೆಕ್ಟರ್.

 

ಹೌದು, ಮಾರ್ಟಿನ್ ಸಿನಿಮಾ ಟೀಸರ್ (Martin Movie Teaser Hack) ಸೂಪರ್ ಆಗಿದೆ. ಸೂಪರ್ ರೆಸ್ಪಾನ್ಸ್ ಪಡೆದು ಮುನ್ನುಗುತ್ತಲೇ ಇತ್ತು. ಚಿತ್ರದ ಟೀಸರ್ ಓಟಕ್ಕೆ ಜನ ಫಿದಾ ಆಗಿದ್ದರು. ಆ್ಯಕ್ಷನ್ ಪ್ರಿನ್ಸ್ ಅಬ್ಬರವನ್ನ ಈ ಮೂಲಕ (Martin All Comments Delete) ಮಿಲಿಯನ್‌ಗಟ್ಟಲೆ ಜನ ವೀಕ್ಷಿಸಿದ್ದರು. 80 ಸಾವಿರ ಕಾಮೆಂಟ್ಸ್‌ ಕೂಡ ಬಂದಿದ್ದವು. ಆದರೆ ಎಲ್ಲದಕ್ಕೂ ಓಡೋ ಕುದುರೆಗೆ ಕಾಲುಕಟ್ಟಿ ಹಾಕಿ ಕೆಳಗೆ ಕೆಡವಿದಂಗೆ ಆಗಿದೆ. ಇದ್ದ ಎಲ್ಲ ಕಾಮೆಂಟ್ಸ್ (Movie Teaser Hack) ಮಾಯವಾಗಿವೆ. 83.5 ಮಿಲಿಯನ್ ವೀವರ್ಸ್ ಮುಂದೆ ಹೋಗ್ತಾನೆ ಇಲ್ಲ. 10.5 ಲೈಕ್ಸ್ ಗಾಯಬ್ ಆಗಿವೆ. ಯಾಕೆ ಹಿಂಗೆ?

ಧ್ರುವ ಸರ್ಜಾ ಆಕ್ಷನ್ ಲುಕ್ ಕೊಟ್ಟಿರೋ ಸಿನಿಮಾ ‘ಮಾರ್ಟಿನ್’ ಟೀಸರ್‌ಗೆ ಮೆಚ್ಚುಗೆ ಸಿಕ್ಕಿತ್ತು. ಯೂಟ್ಯೂನ್‌ನಲ್ಲೂ ಟೀಸರ್‌ಗೆ ಭರ್ಜರಿ ವೀವ್ಸ್ ಸಿಕ್ಕಿತ್ತು. ಆದರೆ, ಮೂರು ದಿನಗಳ ಹಿಂದೆ, ಅಂದ್ರೆ ಶುಕ್ರವಾರ (ಏಪ್ರಿಲ್ 21) ‘ಮಾರ್ಟಿನ್’ ಟೀಸರ್ ಅನ್ನು ಲಹರಿ ಯೂಟ್ಯೂಬ್ ಚಾನೆಲ್‌ನಿಂದ ಡಿಲೀಟ್ ಆಗಿತ್ತು. ತಕ್ಷಣವೇ ಈ ವಿಷಯವನ್ನು ಅಭಿಮಾನಿಗಳು ಚಿತ್ರತಂಡದ ಗಮನಕ್ಕೆ ತಂದಿದ್ದರು. ‘ಮಾರ್ಟಿನ್’ ಟೀಸರ್ ಡಿಲೀಟ್ ಆದ ಬಳಿಕ ಲಹರಿ ಯೂಟ್ಯೂನ್ ಚಾನೆಲ್ ಹ್ಯಾಕ್ ಆಗಿದ್ದು ಸಿನಿಮಾ ತಂಡಕ್ಕೆ ಗೊತ್ತಾಗಿತ್ತು. “ಲಹರಿ ಯೂಟ್ಯೂಬ್ ಚಾನೆಲ್‌ನಲ್ಲಿರೋ ಎಲ್ಲಾ ಕಂಟೆಂಟ್ ಹಾಗೇ ಇತ್ತು. ಆದರೆ, ಮಾರ್ಟಿನ್ ಟೀಸರ್ ಅನ್ನು ಮಾತ್ರ ಡಿಲೀಟ್ ಮಾಡಲಾಗಿತ್ತು” ಎಂದು ಮಾರ್ಟಿನ್ ತಂಡದ ಸದಸ್ಯರೊಬ್ಬರು ಬಹಿರಂಗ ಪಡಿಸಿದ್ದಾರೆ.

ಟೀಸರ್ ರಿಲೀಸ್ ಆದಾಗಿನಿಂದಲೂ ದೇಶ-ವಿದೇಶ ಸೇರಿದಂತೆ ಪಕ್ಕದ ರಾಜ್ಯದಲ್ಲೂ ಮಾರ್ಟಿನ್ ಅಬ್ಬರಿಸಿತ್ತು. ಇದರಿಂದ ಇಡೀ ಸಿನಿಮಾ ತಂಡದ ಖುಷಿಗೆ ಪಾರವೇ ಇರಲಿಲ್ಲ. ಆದರೆ, ಅದ್ಯಾವುದೋ ದೇಶದಲ್ಲಿ ಕುಳಿತ ಆದ್ಯಾರೋ ಕನ್ನಡದ ಮಾರ್ಟಿನ್ ಮೇಲೆ ತಮ್ಮ ಹೊಟ್ಟೆ ಕಿಚ್ಚನ್ನ ಚಿತ್ರದ ಟೀಸರ್ ಡಿಲೀಟ್ ಮಾಡಿಕೊಳ್ಳೋದ್ರೂ ಮೂಲಕ ತೀರಿಸಿಕೊಂಡಂತಿದೆ ನೋಡಿ. ಇದಕ್ಕೆ ಕಾರಣ ಹ್ಯಾಕರ್ಸ್‌ ಅನ್ನೋದು ಅಷ್ಟೇ ಸತ್ಯ. ರಷ್ಯಾದಲ್ಲಿ ಕುಳಿತು ಅದ್ಯಾರೋ ಇಡೀ ಯುಟ್ಯೂಬ್ ಚಾನಲ್‌ ಅನ್ನ ಹ್ಯಾಕ್ ಮಾಡಿದ್ದಾರೆ ಅನ್ನೋದೇ ಈಗ ತಿಳಿದಿರೋ ಸತ್ಯ ಆಗಿದೆ. ಲಹರಿ ಸಂಸ್ಥೆ ಕೂಡ ಎಲ್ಲವನ್ನೂ ರೀಸ್ಟೋರ್ ಮಾಡುವಲ್ಲಿ ನಿರತವಾಗಿದೆ ಅನ್ನೋದೇ ಒಟ್ಟು ಸದ್ಯದ ಮಾಹಿತಿ ಅಂತ ಹೇಳಬಹುದು.

ಅಂದಹಾಗೆ ಮಾರ್ಟಿನ್’ ಟೀಸರ್ ರಿಕವರಿ ಆಗಿದ್ದರೂ, ಹೋಗಿದ್ದೆಲ್ಲ ಮರಳಿ ಬಂದಿಲ್ಲ. ಟೀಸರ್ ಡಿಲೀಟ್ ಆಗುವುದಕ್ಕೂ ಮುನ್ನ ಸುಮಾರು 78 ಸಾವಿರ ಕಮೆಂಟ್ ಇತ್ತು. ಅದರಲ್ಲಿ ಈಗ ಕೇವಲ 8 ಸಾವಿರದಷ್ಟು ಮಾತ್ರ ಮರಳಿ ಬಂದಿದೆ. ಅಲ್ಲದೆ 11 ಲಕ್ಷ ಲೈಕ್ಸ್‌ನಲ್ಲಿ 9.41 ಲಕ್ಷ ಅಷ್ಟೇ ರಿಕವರಿ ಆಗಿದೆ ಅನ್ನೋದು ಚಿತ್ರತಂಡದ ವಾದ. “ಕೆಜಿಎಫ್ ಹಾಗೂ RRR ಬಳಿಕ ಭಾರತೀಯ ಚಿತ್ರೋದ್ಯಮದ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ‘ಮಾರ್ಟಿನ್’. ಹೀಗಾಗಿ ಅದರ ಆಗಮನಕ್ಕೆ ಕಾಯುತ್ತಿರೋ ಸಿನಿಮಾ ಪ್ರೇಮಿಗಳು ಈ ಸಿನಿಮಾ ಗೆಲ್ಲಿಸೋಕಂತೂ ಪಣ ತೊಟ್ಟಿರೋದಂತೂ ನಿಜ.” ಎಂದು ಅಭಿಮಾನಿಗಳು ಪೋಸ್ಟರ್ ರಿಲೀಸ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

 

ಇದನ್ನು ಓದಿ: Geeta Shivraj Kumar: ನಾಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಲಿರುವ ಗೀತಾ ಶಿವರಾಜ್‌ ಕುಮಾರ್‌ 

Leave A Reply

Your email address will not be published.