Career Tips: ಕಲಾ ವಿಭಾಗದ ವಿದ್ಯಾರ್ಥಿಗಳು ಈ ಕೋರ್ಸ್ಗಳನ್ನು ಮಾಡಿದರೆ ಕೈ ತುಂಬಾ ಸಂಬಳ ಗ್ಯಾರಂಟಿ!

Career Tips For Students: ಇಂದಿನ ಕಾಲದಲ್ಲಿ ಶಿಕ್ಷಣ(education) ಅತ್ಯಗತ್ಯವಾಗಿದ್ದು,ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಭವಿಷ್ಯದ ಏಳಿಗೆಗೆ ಪೂರಕವಾಗಿ ವಿದ್ಯಾರ್ಹತೆ ಮಕ್ಕಳ ಏಳಿಗೆಗೆ ಮಹತ್ತರ ಪಾತ್ರ ವಹಿಸುತ್ತದೆ. ಪಿಯುಸಿ (Second PUC)ಮುಗಿಯುತ್ತಿದ್ದಂತೆ ಮುಂದೇನು? ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ (Career Tips For Students)ಪೋಷಕರಿಗೆ(Parents) ಕಾಡುವುದು ಸಹಜ. ಮುಂದೆ ಯಾವ ವೃತ್ತಿ ಆಯ್ಕೆ (Career Options) ಮಾಡಿಕೊಳ್ಳಬೇಕು ಎಂಬ ಗೊಂದಲ ಮನೆ ಮಾಡುತ್ತದೆ.ಅದರಲ್ಲಿಯೂ ಕಲಾ ವಿದ್ಯಾರ್ಥಿಗಳಿಗೆ (Arts Students) ಇತರ ಕ್ಷೇತ್ರಗಳಿಗಿಂತ ಹೆಚ್ಚು ವಿಪುಲ ಅವಕಾಶಗಳಿವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಶಿಕ್ಷಣ(Education) ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಜ್ಞಾನ ಆಯ್ದುಕೊಂಡವರು ಮೆಡಿಕಲ್, ಇಂಜಿನಿಯರಿಂಗ್ ಹೀಗೆ ಬೇರೆ ಬೇರೆ ಕೋರ್ಸ್ಗಳಿಗೆ ತೊಡಗುವುದು ಸಹಜ. ಪಿಯುಸಿಯಲ್ಲಿ ವಿಜ್ಞಾನ (Science), ವಾಣಿಜ್ಯ (Commerce), ಕಲಾ (Arts) ವಿಭಾಗಗಳಲ್ಲಿ ಆರಿಸಿಕೊಂಡು ಪಿಯುಸಿ ಬಳಿಕ ಯಾವ ಕೋರ್ಸ್ ಮಾಡುವುದು ಎಂಬ ಗೊಂದಲ ಹೆಚ್ಚಿನವರಿಗೆ ಕಾಡುತ್ತದೆ. ಕೆಲವೊಮ್ಮೆ ಪೋಷಕರ ಒತ್ತಡಕ್ಕೆ ವಿದ್ಯಾರ್ಥಿಗಳು ತಮಗಿಷ್ಟಲ್ಲದ ವಿಷಯ ಆರಿಸಿಕೊಂಡು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಕೂಡ ಇದ್ದು, ಇಲ್ಲಿ ವಿದ್ಯಾರ್ಥಿ ತೆಗೆದುಕೊಳ್ಳುವ ನಿರ್ಧಾರ ಅವರ ಭವಿಷ್ಯವನ್ನು(Future) ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಹಾಗಿದ್ರೆ, ಪಿಯುಸಿಯಲ್ಲಿ ಆರ್ಟ್ಸ್ ತೆಗೆದುಕೊಂಡಿದ್ದರೆ ಮುಂದೆ ಯಾವ ಕೋರ್ಸ್ ಮಾಡಬಹುದು?

BBA LLB ಕೋರ್ಸ್
ಆರ್ಟ್ಸ್ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್(BBA) ಜೊತೆಗೆ LLB ಕೋರ್ಸ್ ಅನ್ನು ಮಾಡಲು ಅವಕಾಶವಿದೆ. ಕೋರ್ಸ್ ಮುಗಿದ ಬಳಿಕ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸಬಹುದು.

ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಶನ್
ಕಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ, ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಶನ್ ಕೋರ್ಸ್ ಅನ್ನು ಮಾಡಲು ಅವಕಾಶವಿದೆ. ಇದರ ಜೊತೆಗೆ B.P.Ed ಒಳಗೊಂಡಂತೆ ಅನೇಕ ಕೋರ್ಸ್‌ಗಳಿವೆ.

BCA
ಕಲಾ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (BCA) ಅನ್ನು ವ್ಯಾಸಂಗ ಮಾಡುವ ಮೂಲಕ ಅನೇಕ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಇದಲ್ಲದೆ, 3D ಅನಿಮೇಷನ್ ಕೋರ್ಸ್ ಕೂಡ ಮಾಡಬಹುದು. ಕಲಾ ವಿದ್ಯಾರ್ಥಿಗಳು 3D ಅನಿಮೇಷನ್ ಜೊತೆಗೆ ಪೇಟಿಂಗ್ ಕೋರ್ಸ್‌ಗಳನ್ನು ಮಾಡುವ ಮೂಲಕ ವೃತ್ತಿಜೀವನವನ್ನು . ಮುನ್ನಡೆಸಬಹುದು.

ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್
ಕಲಾ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕೋರ್ಸ್ ಕೂಡ ಮಾಡಬಹುದು. ವ್ಯಾಸಂಗ ಮುಗಿದ ಬಳಿಕ ಅನೇಕ ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಇದಲ್ಲದೆ, ವಿದ್ಯಾರ್ಥಿಗಳು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ವೃತ್ತಿಜೀವನವನ್ನು ಕೂಡ ಮುಂದುವರಿಸಬಹುದು.

ಬ್ಯಾಚುಲರ್ ಆಫ್ ಫೈನ್ ಆರ್ಟ್‌
ಬ್ಯಾಚುಲರ್ ಆಫ್ ಫೈನ್ ಆರ್ಟ್ ಕೋರ್ಸ್ ಮಾಡಿದ ಮೇಲೆ ವಿದ್ಯಾರ್ಥಿಗಳು ವೃತ್ತಿಜೀವನವನ್ನು ಆರಂಭಿಸಬಹುದು. ಫೈನ್ ಆರ್ಟ್ಸ್ ವರ್ಣಚಿತ್ರವನ್ನು ಮಾಡುವ ಕುರಿತ ಕೋರ್ಸ್ ಆಗಿದ್ದು, ಕೋರ್ಸ್ ಮುಗಿದ ಬಳಿಕ ವೃತ್ತಿ ಜೀವನ ಆರಂಭಿಸಬಹುದು.

ಈ ಕೋರ್ಸ್ಗಳಲ್ಲದೆ ಇನ್ನುಳಿದ ಬಿಎ ಕೋರ್ಸ್‌ಗಳ ಪಟ್ಟಿ
ಬಿಎ ಫೈನಾನ್ಸ್‌.
ಬಿಎ ಹ್ಯುಮಾನಿಟೀಸ್ ಕೋರ್ಸ್‌ಗಳು.
ಬಿಎ ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ.
ಬಿಎ ಸ್ಥಳೀಯ ಭಾಷೆಗಳು.
ಬಿಎ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ.
ಬಿಎ ಹಿಂದಿ.
ಬಿಎ ಮ್ಯೂಸಿಕ್.
ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ.
ಬಿಎ ಇನ್ ಲಿಟೆರೇಚರ್.
ಬಿಎ ಫಾರಿನ್ ಲಾಂಗ್ವೇಜೆಸ್.
ಬಿಎ ಥಿಯೇಟರ್.
ಬಿಎ ಇನ್‌ ಯೋಗ ಅಂಡ ನ್ಯಾಚುರೋಪಥಿ.

 

ಇದನ್ನು ಓದಿ: Capital Punishment: ಭಾರತೀಯನಿಗೆ ಸಿಂಗಾಪುರದಲ್ಲಿ ಗಲ್ಲು ಶಿಕ್ಷೆ ; ಈತನ ಕೊನೆಯ ಆಸೆ ಏನು ಗೊತ್ತಾ?

Leave A Reply

Your email address will not be published.