Amazon Prime subscription : ಇನ್ನು ಮುಂದೆ ದುಬಾರಿಯಾಗಲಿದೆ ಅಮೆಜಾನ್ ಪ್ರೈಮ್! ಬಳಕೆದಾರರೇ ಇತ್ತ ಗಮನಿಸಿ, ಈ ಸುದ್ದಿ ಓದಿ!!!
Amazon Prime subscription : ಒಟಿಟಿ ಫ್ಲಾಟ್ಫಾರ್ಮ್ಗಳಿಗೆ ಹೋಲಿಸಿದರೆ, ಅತಿ ಕಡಿಮೆ ಬೆಲೆಯಲ್ಲಿ ಈ ಅಮೆಜಾನ್ ಪ್ರೈಮ್ ಸಿಗುತ್ತಿದೆ. ಆದರೆ ಈಗ ಈ ಚಂದಾದಾರಿಕೆಯನ್ನು (Amazon prime subscription) ಹೆಚ್ಚಿಸಲು ಅಮೆಜಾನ್ ಕಂಪನಿ ಮುಂದಾಗಿದೆ. ಅಮೆಜಾನ್ ತನ್ನ ಪ್ರೈಮ್ ಮೆಂಬರ್ ಶಿಪ್ ಬೆಲೆಯನ್ನು ಬದಲಾಯಿಸುತ್ತಲೇ ಇರುತ್ತದೆ. ಈಗ ಮತ್ತೆ ತನ್ನ ಯೋಜನೆಗಳನ್ನು ಬದಲಾಯಿಸಿದೆ.
ಪ್ರಸ್ತುತ ಆನ್ಲೈನ್ ಶಾಪಿಂಗ್ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದ ಅತ್ಯಂತ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಆಪ್ ಅಮೆಜಾನ್ ಪ್ರೈಮ್ ತನ್ನ ಸದಸ್ಯತ್ವದ ವೆಚ್ಚ ಹೆಚ್ಚಳಕ್ಕೆ ಮುಂದಾಗಿದೆ.
ಸದ್ಯ ಪ್ರೈಮ್ ಮೆಂಬರ್ ಶಿಪ್ ಇರುವ ಬಳಕೆದಾರರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವೆಬ್ ಸಿರೀಸ್, ಮ್ಯೂಸಿಕ್, ಹೀಗೆ ಮನರಂಜನಾ ಪ್ಲಾಟ್ಫಾರ್ಮ್ ಗಳಿಗೆ ಕೂಡಾ ಅಕ್ಸೆಸ್ ಪಡೆಯಬಹುದಾಗಿದೆ. ಮುಖ್ಯವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರುವ ಜನರು ಪ್ರೈಮ್ ಶಿಪ್ಪಿಂಗ್ ಪ್ರಯೋಜನ ಪಡೆಯುತ್ತಾರೆ. ಇದರ ಮೂಲಕ ಹೆಚ್ಚುವರಿ ಹಣ ಪಾವತಿಸದೇ ನೀವು ಆರ್ಡರ್ ಮಾಡಿರುವ ವಸ್ತುಗಳನ್ನು ವೇಗವಾಗಿ ವಿತರಣೆ ಮಾಡಲಾಗುತ್ತದೆ. ಅದಲ್ಲದೆ ಜನರು ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ಡೀಲ್‌ಗಳು, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್ ಮತ್ತು ಅಮೆಜಾನ್ ಫ್ಯಾಮಿಲಿಗೆ ಕೂಡಾ ಅಕ್ಸೆಸ್ ಪಡೆಯಬಹುದಾಗಿದೆ.
Amazon ತನ್ನ ಪ್ರೈಮ್ ಮೆಂಬರ್ ಶಿಪ್ ಬೆಲೆಯನ್ನು ಬದಲಾಯಿಸಿದ್ದು, ಇದೀಗ ಹೊಸ ದರಗಳನ್ನು ಘೋಷಿಸಿದೆ. ಹಳೆಯ ದರಗಳೊಂದಿಗೆ ಹೊಸ ರದವನ್ನು ಹೋಲಿಸಿ ನೋಡಿದರೆ ಹೊಸ ದರದಲ್ಲಿ ಭಾರೀ ಏರಿಕೆಯಾಗಿರುವುದನ್ನು ಗಮನಿಸಬಹುದು.
ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ ಒಂದು ತಿಂಗಳಿಗೆ 299 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಡಿಸೆಂಬರ್ 2021 ರಲ್ಲಿ ಈ ಬೆಲೆಯನ್ನು 179 ರೂಪಾಯಿಗೆ ನಿಗದಿ ಪಡಿಸಲಾಗಿತ್ತು. ಇದರೊಂದಿಗೆ ಕಂಪನಿಯು Amazon Prime subscription ಬೆಲೆಯನ್ನು 120 ರೂ. ಹೆಚ್ಚಿಸಿದೆ.
ಇನ್ನು ಮುಂದೆ ಮೂರು ತಿಂಗಳ Amazon Prime ಮೆಂಬರ್ ಶಿಪ್ ಗಾಗಿ 599 ರೂ. ಪಾವತಿಸಬೇಕಾಗುತ್ತದೆ. ಮೊದಲು ಈ ಪ್ಲಾನ್ ಗೆ ಪಾವತಿಸಬೇಕಾಗಿದ್ದು ಕೇವಲ 459 ರೂಪಾಯಿ. ಅಂದರೆ ಈ ಬೆಲೆಯಲ್ಲಿ 140 ರಷ್ಟು ಹೆಚ್ಚಳವಾಗಿದೆ.
ಖುಷಿಯಸಂಗತಿಯೆಂದರೆ ದೀರ್ಘಾವಧಿಯ ಯೋಜನೆಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಾರ್ಷಿಕ Amazon Prime ಸದಸ್ಯತ್ವದ ಬೆಲೆ 1,499 ರೂ, ಆಗಿದ್ದರೆ, ವಾರ್ಷಿಕ ಪ್ರೈಮ್ ಲೈಟ್ ಬೆಲೆ 999 ರೂಪಾಯಿ ಎಂದು ಅಧಿಕೃತ ಸೈಟ್‌ನಲ್ಲಿ ತಿಳಿಸಲಾಗಿದೆ .
ಸದ್ಯ ಹೊಸ ಪರಿಷ್ಕೃತ ಬೆಲೆ ಯಾವಾಗಿನಿಂದ ಜಾರಿ ಬರಲಿದೆ ಎಂಬುದು ಕಂಪನಿ ಇನ್ನು ಸ್ಪಷ್ಟಪಡಿಸಿಲ್ಲ. ಆದರೆ ಈ ಬದಲಾವಣೆಗಳನ್ನು ಮಾಡಲು ಕಂಪನಿ ಮುಂದಾಗಿದೆ ಎಂಬುದು ಸ್ಪಷ್ಟವಾಗಿದೆ. ಇನ್ನು ಈಗಾಗಲೇ ಸದಸ್ಯತ್ವ ಯೋಜನೆಯ ಹೊಂದಿರುವವರು ತಮ್ಮ ಸದಸ್ಯತ್ವವನ್ನು ಅದರ ಅವಧಿ ಮುಗಿಯುವವರೆಗೂ ಹಿಂದಿನ ದರದಲ್ಲಿಯೇ ಮುಂದುವರೆಸಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Sleep Deprivation : ಪುರುಷರೇ ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವಾದರೆ ಇಂತಹ ಸಮಸ್ಯೆ ಖಂಡಿತಾ ಕಾಡುತ್ತೆ!