Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುಎನ್ ವರದಿ!!
Indian Population: ದಕ್ಷಿಣ ಭಾರತದ ಜನಸಂಖ್ಯೆಯ (Indian Population) ಕುರಿತು ಬೆಚ್ಚಿಬೀಳಿಸುವ ಮಾಹಿತಿಯನ್ನು ಯುಎನ್ ವರದಿ ಬಹಿರಂಗಪಡಿಸಿದೆ. ಹೌದು, ಭಾರತದ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆಯ (population) ಬೆಳವಣಿಗೆ ಕಡಿಮೆಯಾಗುತ್ತಿದೆ ಎಂದು ವರದಿ ತಿಳಿಸಿದೆ.
ದಕ್ಷಿಣದಲ್ಲಿ ಜನಸಂಖ್ಯೆ ಕಡಿಮೆಯಾದರೂ ಇಲ್ಲಿಗೆ ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಹಾಗಾಗಿ ಕಡಿಮೆ ಇದ್ದ ಜನಸಂಖ್ಯೆ ಸಮನಾಗುತ್ತದೆ. ಅದರಿಂದಾಗಿ ಈ ರಾಜ್ಯಗಳಲ್ಲಿ ಜನಸಂಖ್ಯಾ ಲಾಭಾಂಶ ಮುಂದುವರೆಯುತ್ತಿದೆ ಎಂದು ಯುಎನ್ ವರದಿ ಹೇಳಿದೆ.
ಭಾರತವು ಚೀನಾವನ್ನು (China) ಹಿಂದಿಕ್ಕಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಆದರೆ ದೇಶದ ಒಟ್ಟಾರೆ ಫಲವತ್ತತೆ ದರವು ಈ ಮೊದಲು 2.1 ಇದ್ದು, ಇದೀಗ 2 ಕ್ಕೆ ಕುಸಿತ ಕಂಡಿದೆ. ಚೀನಾದಲ್ಲಿ ಈ ದರ 1.2 ರಷ್ಟು ಮುಂದುವರೆದಿದೆ.
ಕೇರಳ (Kerala) ಮತ್ತು ತಮಿಳುನಾಡಿನಲ್ಲಿ, ರಾಜ್ಯ ಸರ್ಕಾರಗಳು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದು, ಆಗ ಫಲವತ್ತತೆ ಕುಸಿಯಿತು. ಈ ರಾಜ್ಯಗಳಲ್ಲಿ ಜನನ ಪ್ರಮಾಣವು ಕಡಿಮೆಯಾಗಿದೆ. ಮಾನವ ಬಂಡವಾಳದಲ್ಲಿ ಕಡಿಮೆ ಹೂಡಿಕೆ ಮಾಡಿದ ರಾಜ್ಯಗಳು ಕಠಿಣ ಕ್ರಮಗಳ ಹೊರತಾಗಿಯೂ ಫಲವತ್ತತೆಯಲ್ಲಿ ಕುಸಿತವನ್ನು ಕಂಡಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ (India) ಯುವ ಮತ್ತು ವಯಸ್ಸಾದವರ ಜನಸಂಖ್ಯೆಯ ಲಾಭಾಂಶವು ಒಟ್ಟು ಜನಸಂಖ್ಯೆಯ ಅನುಪಾತದಂತೆ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ. 2064 ರ ಸುಮಾರಿಗೆ ಭಾರತದ ಜನಸಂಖ್ಯೆಯು ಅಧಿಕವಾಗಿ ನಂತರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಯುಎನ್ ಅಂದಾಜಿಸಿದೆ.
ಈ ಬಗ್ಗೆ ಮಾತನಾಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, “ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಮಾತ್ರವಲ್ಲ, ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ದೇಶಗಳು ತಮ್ಮ ಜನಸಂಖ್ಯೆಯ ಶಿಕ್ಷಣ ಮತ್ತು ಕಾರ್ಮಿಕ ಬಲದಲ್ಲಿ ಭಾಗವಹಿಸಲು ಜನರಿಗೆ ಅನುವು ಮಾಡಿಕೊಡಲು ಅವಕಾಶ ಕೊಡಬೇಕು” ಎಂದು ಹೇಳಿದರು.
ಇದನ್ನೂ ಓದಿ: Film Industry: ಸಿನಿರಂಗದ ಇಬ್ಬರು ಯುವ ನಟರಿಗೆ ಬ್ಯಾನ್ ಕರೆ ; ಕಾರಣ ಏನು ಗೊತ್ತಾ?