KSRTC free bus service: ಸುಡಾನ್‌ ನಿಂದ ಆಗಮಿಸಿದ ಭಾರತೀಯರು ಊರುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಉಚಿತ ಬಸ್‌ ಸೇವೆ!!

KSRTC free bus service:ಸುಡಾನ್‌ ಕದನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವಂತ ಸ್ಥಳಗಳಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡಲು ನೋಡಲ್ ಅಧಿಕಾರಿಯವರನ್ನು ನಿಯೋಜಿಸಲಾಗಿದೆ ಎಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ(KSRTC) ನಿಗಮ ಆದೇಶ ಹೊರಡಿಸಿದೆ.

 

ಸುಡಾನ್‌ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ಸು ಕರೆತರಲು ಭಾರತ ಸರ್ಕಾರದ ರಾಯಭಾರಿ ಕಚೇರಿಯೂ ಮಹತ್ವದ ಕ್ರಮಕೈಗೊಂಡಿದೆ. ಕರ್ನಾಟಕ ರಾಜ್ಯ ನಾಗರಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಅವರ ಸ್ವಂತ ಸ್ಥಳಗಳಿಗೆ ನಿಗಮದ ಬಸ್ಸುಗಳ ಮುಖಾಂತರ ಕಳುಹಿಸುವ ಸಲುವಾಗಿ ರಾಜೇಶ್‌ ಎಸ್‌ ಅವರು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿರುವುದಾಗಿ ತಿಳಿಸಿದೆ.

ಸುಡಾನ್‌ ಕದನದಲ್ಲಿ ಸಿಲುಕಿರುವ ಭಾರತೀಯರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಲ್ಲಿ, ಅವರ ಸ್ವಂತ ಊರುಗಳ ನಿವಾಸಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ(KSRTC free bus service) ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿ ಮಹತ್ವದ ಆದೇಶವನ್ನು ಹೊರಡಿಸಿದೆ.

ಈವರೆಗೆ ಸುಡಾನ್‌ನ ಮಿಲಿಟರಿ ಮತ್ತು ದೇಶದ ಪ್ರಮುಖ ಅರೆಸೇನಾ ಪಡೆಗಳ ನಡುವಿನ ಕಾಳಗದಲ್ಲಿ ಇಲ್ಲಿಯವರೆಗೂ ಸುಮಾರು 180 ನಾಗರಿಕರು ಮತ್ತು 1,800 ಕ್ಕೂ ಹೆಚ್ಚು ನಾಗರಿಕರು ಮತ್ತು ಯೋಧರು ಗಾಯಗೊಂಡಿದ್ದಾರೆ ಎಂದು ಸುಡಾನ್‌ನ ವಿಶ್ವಸಂಸ್ಥೆಯ ರಾಯಭಾರಿ ವೋಲ್ಕರ್ ಪರ್ಥೆಸ್ ವರದಿ ಮಾಡಿದೆ.

ಇದನ್ನೂ ಓದಿ: Film Industry: ಸಿನಿರಂಗದ ಇಬ್ಬರು ಯುವ ನಟರಿಗೆ ಬ್ಯಾನ್ ಕರೆ ; ಕಾರಣ‌ ಏನು ಗೊತ್ತಾ?

Leave A Reply

Your email address will not be published.