DELED Exam 2023: ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಗೆ ಅರ್ಜಿ ಆಹ್ವಾನ! ವೇಳಾಪಟ್ಟಿ ಸೇರಿ ಸಂಪೂರ್ಣ ವಿವರ ಇಲ್ಲಿದೆ

DELED Exam 2023: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು, ರಾಜ್ಯದ ಸರ್ಕಾರಿ ಡಿ.ಇಲ್.ಇಡಿ ಸಂಸ್ಥೆಗಳು ಹಾಗೂ ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದು ಕೆಲಸ ಮಾಡುತ್ತಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಿಂದ ಪರೀಕ್ಷಾ ಅರ್ಜಿಗಳನ್ನು ಆಹ್ವಾನಿಸಿದೆ. ಡಿ.ಇಎಲ್.ಇಡಿ ಪರೀಕ್ಷೆಗೆ (DELED Exam 2023) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಯು ಜೂನ್- 2023 ರಂದು ಮಾಹೆಯಲ್ಲಿ ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಹೊಸ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪರೀಕ್ಷೆ ಬರೆಯಲು ಯಾರೆಲ್ಲಾ ಅರ್ಹರು?
ಪರೀಕ್ಷೆ ಬರೆಯಲು, ಸರ್ಕಾರಿ ಡಿ.ಇಎಲ್.ಇಡಿ ಸಂಸ್ಥೆಗಳ ಹಾಗೂ ಎನ್‌.ಸಿ.ಟಿ.ಇ ಯಿಂದ ಮಾನ್ಯತೆ ಪಡೆದಿರುವ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಡಿ.ಇಡಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಅರ್ಹರು.

ಹೊಸ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಎಷ್ಟು?
ಪ್ರಥಮ ಡಿ.ಇಎಲ್.ಇಡಿ ಶುಲ್ಕ ರೂ. 1132/- ಆಗಿದ್ದು, ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಗೆ ರೂ. 1170/- ಆಗಿದೆ.

ಲಿಖಿತ ಹಾಗೂ ಆಂತರಿಕ ಮತ್ತು ಪ್ರಯೋಗಿಕ ಪರೀಕ್ಷೆಗೆ ಸೇರಿ, ಪುನರಾವರ್ತಿತ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಎಷ್ಟು?
ಒಂದು ವಿಷಯಕ್ಕೆ ರೂ. 300/-, ಎರಡು ವಿಷಯಕ್ಕೆ ರೂ. 600/- ಇರಲಿದ್ದು, ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಕ್ಕೆ ರೂ. 1080/- ಶುಲ್ಕ ಇರಲಿದೆ.

ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಿಂದ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಅಪ್ಲೋಡ್ ಮಾಡಬೇಕು. ಅದಕ್ಕಾಗಿ ಮಂಡಲಿಯ ವೆಬ್‌ಸೈಟ್ https://kseab.karnataka.gov.in/ನಲ್ಲಿ Other Exam Portal/ DEIEd Examination ಗೆ ಭೇಟಿ ನೀಡಿ, ಅಪ್‌ಲೋಡ್‌ ಮಾಡಬಹುದು.

ಪ್ರಥಮ ಡಿ.ಇಎಲ್.ಇಡಿ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ :-

05-06-2023 – ಇಂಗ್ಲಿಷ್ ಸಂಹವನ ಕೌಶಲಗಳು.
07-06-2023 – ಶಿಕ್ಷಣ : ಮೂಲ ಪರಿಕಲ್ಪನೆಗಳ ಪರಿಚಯ.
09-06-2023 – ಕನ್ನಡ, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು.
12-06-2023 – ಗಣಿತ.
14-06-2023 – ಪರಿಸರ ಅಧ್ಯಯನ.
16-06-2023 – ಶೈಕ್ಷಣಿಕ ಮೌಲ್ಯಾಂಕನ ಮತ್ತು ಮೌಲ್ಯಮಾಪನ.

ದ್ವಿತೀಯ ಡಿ.ಇಎಲ್.ಇಡಿ ಪರೀಕ್ಷೆಯ ವೇಳಾಪಟ್ಟಿಯ ಮಾಹಿತಿ:-

06-06-2023 – ಕನ್ನಡ, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು.
08-06-2023 – ರೂಡಿಯಾಗಿ ಶಿಕ್ಷಣ.
13-06-2023 – ಕಲಿಕೆಯನ್ನು ಅನುಕೂಲಿಸುವುದು (ಹಿ.ಪ್ರಾ.ಶಾ) – ಇಂಗ್ಲಿಷ್.
15-06-2023 – ಐಚ್ಛಿಕ ವಿಷಯಗಳು ಯಾವುದಾದರು ಒಂದು- ವಿಜ್ಞಾನ, ಗಣಿತ, ಸಮಾಜ ವಿಜ್ಞಾನ.

ಇದನ್ನೂ ಓದಿ: Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುಎನ್ ವರದಿ!!

Leave A Reply

Your email address will not be published.