Bengaluru: ನೀರಿಗಾಗಿ ನೀರೆಯರ ಕಾದಾಟ, ಪ್ರಾಣ ಹೋಗುವವರೆಗೆ!!

Women fight for water: ನೀರಿಗಾಗಿ ಮಹಿಳೆಯರ ನಡುವೆ ಜಗಳ ನಡೆದಿದ್ದು, ಈ ಜಗಳದಿಂದ ನೊಂದು ಸರಸ್ವತಿ (35) ಎಂಬಾಕೆ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಘಟನೆಯು ಏಪ್ರಿಲ್ 21 ರಂದು ನಡೆದಿದೆ ಎನ್ನಲಾಗಿದೆ. ಮೃತ ಸರಸ್ವತಿ ಹಾಗೂ ಆಕೆಯ ಪತಿ ಇಲ್ಲಿನ ಯಲಹಂಕ ಠಾಣಾ ವ್ಯಾಪ್ತಿಯಲ್ಲಿನ ಸರ್ಕಾರಿ ವಸತಿ ಸಮುಚ್ಚಯದ ಮನೆಯಲ್ಲಿ ವಾಸವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ನಾಗರಾಜ್ ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದಾರೆ.

ಸರಸ್ವತಿಯ ಪಕ್ಕದ ಮನೆಯವರಾದ ಶ್ರೀನಿವಾಸ್ ಹಾಗೂ ಭವಾನಿ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರು ಬಳಸುವ ನೀರಿನ ಸಂಪ್ ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರು. ಇದರಿಂದಾಗಿ ನೀರಿನ(Women fight for water) ಅಭಾವ ಉಂಟಾಗುತ್ತಿತ್ತು. ಹಾಗಾಗಿ ಸರಸ್ವತಿ ಹಾಗೂ ಭವಾನಿ ಮಧ್ಯೆ ಜಗಳ ಉಂಟಾಗಿತ್ತು. ಕೊನೆಗೆ ಎರಡೂ ಮನೆಯವರು ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಬುದ್ದಿವಾದ ಹೇಳಿ‌ ಕಳಿಸಿದ್ದರು.

ಆದರೆ, ಏಪ್ರಿಲ್ 21 ರಂದು ಸರಸ್ವತಿ ಪತಿ ನಾಗರಾಜ್ ಮನೆಯಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ಧಾರವಾಡಕ್ಕೆ ಹೋಗಿದ್ದರು. ಈ ವೇಳೆ ಸರಸ್ವತಿ ಹಾಗೂ ಅಕ್ಕಪಕ್ಕದ ಮನೆಯವರ ಮಧ್ಯೆ ನೀರಿನ ವಿಚಾರವಾಗಿ ಜಗಳ ಶುರುವಾಗಿದ್ದು, ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ಬೈದು, ವಿಪರೀತ ಮಾನಸಿಕ ಹಿಂಸೆ ನೀಡಿ, ಹಲ್ಲೆ ಮಾಡಿದ್ದಾರೆ ಎಂಬ ಹೇಳಲಾಗಿದ್ದು, ಇದರಿಂದ ಮನನೊಂದ ಸರಸ್ವತಿ ಗಂಡನಿಗೆ ಕರೆ ಮಾಡಿ “ನನ್ನಿಂದ ನೀರಿನ ಜಗಳ ಇನ್ನು ಸಹಿಸಲು ಸಾಧ್ಯವಿಲ್ಲ, ನೀನು ಬೇರೆ ಕಡೆ ಮನೆ ಮಾಡುತ್ತಿಲ್ಲ, ನಾನು ಸಾಯುತ್ತಿದ್ದೇನೆ” ಎಂದಿದ್ದಾಳೆ.

ಪತ್ನಿಯ ಮಾತಿಗೆ ಭಯಭೀತನಾದ ನಾಗರಾಜ್ ತಕ್ಷಣವೇ ಪಕ್ಕದ ಮನೆಯವರಿಗೆ ತಿಳಿಸಿ, ಆಕೆಯನ್ನು ಉಳಿಸುವಂತೆ ಹೇಳಿದ್ದರು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಸರಸ್ವತಿ ಸಾವಿನ ಕದ ತಟ್ಟಿದ್ದಳು. ಕುತ್ತಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಪತ್ನಿಯನ್ನು ಕಳೆದುಕೊಂಡ ನಾಗರಾಜ್ ದುಃಖಿತನಾಗಿದ್ದು, ಸದ್ಯ ಪತ್ನಿಯ ಸಾವಿಗೆ ಕಾರಣಕರ್ತ ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾಳ ವಿರುದ್ಧ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: Coffee: ಇಲ್ನೋಡಿ ಹೊಸ ಸುದ್ದಿ, ಕಾಫಿ ಕುಡಿದರೆ ಕಪ್ಪಗಾಗ್ತೀವ ಇಲ್ವಾ? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ!

Leave A Reply

Your email address will not be published.