Coffee: ಇಲ್ನೋಡಿ ಹೊಸ ಸುದ್ದಿ, ಕಾಫಿ ಕುಡಿದರೆ ಕಪ್ಪಗಾಗ್ತೀವ ಇಲ್ವಾ? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!
Coffee: ಕಾಫಿ (Coffee), ಟೀ (Tea) ಪ್ರತಿಯೊಬ್ಬರ ಬೆಳಗ್ಗಿನ ಪಾನೀಯವಾಗಿದೆ. ಅದೆಷ್ಟೋ ಜನರು ಇವುಗಳಿಗೆ ಅಡಿಕ್ಟ್ ಆಗಿ ಬಿಟ್ಟಿರುತ್ತಾರೆ. ಕೆಲವರಿಗೆ ಬೆಳಿಗ್ಗೆ ಕಾಫಿ, ಟೀ ಕುಡಿಯದಿದ್ದರೆ ದಿನ ಮುಂದೆ ಸಾಗೋದೇ ಇಲ್ಲ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಫಿ ಬೆಳೆ ಬೆಳೆಯುತ್ತಾರೆ. ಹಾಗಾಗಿ ಅಲ್ಲಿನ ಜನರ ನೆಚ್ಚಿನ ಪಾನೀಯ ಕಾಫಿಯೇ ಆಗಿದೆ.
ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಕೆಲವರು ಕಾಫಿ ಸೇವನೆ ದೇಹಕ್ಕೆ ಉತ್ತಮವಲ್ಲ ಎಂದು ವಾದಿಸಿದರೆ, ಮತ್ತೆ ಕೆಲವರು ಕಾಫಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವಾದಿಸುತ್ತಾರೆ. ಕಾಫಿಯಿಂದ ಒಳಿತು (coffee benefits), ಕೆಡುಕು (coffee side effects) ಎರಡೂ ಇದೆ. ಕಾಫಿ ಉನ್ನತ ಮಟ್ಟದ ಉತ್ಕರ್ಷಣ ನಿರೋಧಕಗಳು ಮತ್ತು ಪ್ರಯೋಜನಕಾರಿ ಪೋಷಕಾಂಶಗಳನ್ನೂ ಹೊಂದಿದೆ. ಆದರೆ, ಈ ಕಾಫಿ ಸೇವನೆಯಿಂದ ಕಪ್ಪಾಗ್ತಾರೆ ಎಂದು ಹೇಳಲಾಗುತ್ತಿದೆ. ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಇದರ ಮಾಹಿತಿ ಇಲ್ಲಿದೆ.
ನಮ್ಮ ದೇಹದ ಮೆಲನಿನ್ ಬಣ್ಣವು ತಳಿಶಾಸ್ತ್ರವನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ನಮ್ಮ ಚರ್ಮಕ್ಕೆ ಬಣ್ಣ ಬರೋದು. ಕಾಫಿ ಕುಡಿಯುವುದರಿಂದ ಮೈಬಣ್ಣದ ಮೇಲೆ ಪರಿಣಾಮ ಬೀರುವುದಿಲ್ಲ. ಚರ್ಮದ ಬಣ್ಣ ಬದಲಾಗುವುದಿಲ್ಲ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಆದರೆ, ಸರಿಯಾದ ಪ್ರಮಾಣದಲ್ಲಿ ಕಾಫಿ ಕುಡಿದರೆ ದೇಹದಲ್ಲಿರುವ ಕೊಳೆ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.
ಕಾಫಿಯಲ್ಲಿ ಕೆಫೀನ್ ಇದ್ದು ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಕಪ್ಪು ಆಗ್ತೀರ ಕುಡಿಬೇಡಿ ಎಂದು ಹಿರಿಯರು ಸುಳ್ಳು ಹೇಳುತ್ತಾರೆ. ಆದರೆ ಕಾಫಿ ಕುಡಿದರೆ ಮೈಬಣ್ಣ ಕಪ್ಪಾಗಲ್ಲ.
ಇದನ್ನೂ ಓದಿ: Bank Customers: ಈ ಬ್ಯಾಂಕ್‌ನ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಎರಡು ಹೊಸ ಯೋಜನೆ ಪರಿಚಯಿಸಿದ ದೊಡ್ಡ ಬ್ಯಾಂಕ್!!!