Kadaba: ಬೈಕ್ ಸ್ಕಿಡ್ ಸವಾರ ಸ್ಥಳದಲ್ಲೇ ಮೃತ್ಯು

Share the Article

Kadaba : ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ(Kadaba) – ಪಂಜ – ರಸ್ತೆಯ ಕಲ್ಲಂತಡ್ಕ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ಸವಾರನನ್ನು ದಾವಣಗೆರೆ ಮೂಲದ ಪ್ರಸ್ತುತ ಕೋಡಿಂಬಾಳದಲ್ಲಿ ವಾಸವಿರುವ ಮಂಜು ಎಂದು ಗುರುತಿಸಲಾಗಿದೆ.

ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಮಂಜು ಬೈಕಿನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

Leave A Reply