Weekend With Ramesh: ಈ ವಾರ ಸಾಧಕರ ಸೀಟನ್ನು ಅಲಂಕರಿಸಲು ಬರಲಿದ್ದಾರೆ ಈ ಗ್ರೇಟ್ ಅತಿಥಿಗಳು!

Weekend with Ramesh : ಕನ್ನಡದ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ ಶೋ ( Weekend With Ramesh Season 5 ) ಕೂಡ ಒಂದಾಗಿದ್ದು, ಈಗಾಗಲೇ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ,ಮನೆ ಮಾತಾದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್5 (Weekend With Ramesh) ಪ್ರಾರಂಭವಾಗಿದ್ದು 7ಅತಿಥಿಗಳು ಕೆಂಪು ಕುರ್ಚಿಯ ಮೇಲೆ ವಿರಾಜಮಾನರಾಗಿದ್ದಾರೆ. ಈ ವಾರದ ಅತಿಥಿ ಯಾರು ಗೊತ್ತಾ?

 

ಈಗಾಗಲೆ ಸಾಧಕರ ಕುರ್ಚಿಯಲ್ಲಿ ವಿರಾಜಮಾನರಾಗಿ ಎಲ್ಲರ ಗಮನ ಸೆಳೆದಿರುವ ನಟಿರಮ್ಯಾ, ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ (dattana) ಡಾಲಿ ಧನಂಜಯ್, ನಟರಾದ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಂಡು ತಮ್ಮ ಜೀವನದ ಏರಿಳಿತ, ಕಷ್ಟಗಳನ್ನು ಎದುರಿಸಿ ಸಾಧನೆಯ ಪಥದ ಬಗ್ಗೆ ಯಶೋಗಾಥೆಯನ್ನು ಹಂಚಿಕೊಂಡು ತಮ್ಮ ಸಾಧನೆಯ ಮೂಲಕ ಉಳಿದವರಿಗೂ ಸ್ಪೂರ್ತಿಯಾಗಿದ್ದಾರೆ. ವಾರದಿಂದ ವಾರಕ್ಕೆ ಹೊಸ ಹೊಸ ಅತಿಥಿಗಳ ಆಗಮನದಿಂದ ಕಾರ್ಯಕ್ರಮದ ಮೆರುಗು ಮತ್ತಷ್ಟು ಹೆಚ್ಚಾಗುತ್ತಿದೆ. ಈ ವಾರದ ಆತಿಥಿ ಯಾರು ಎನ್ನುವ ಕೌತುಕ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದೀಗ, ಈ ಕುತೂಹಲಕ್ಕೆ ತೆರೆಬಿದ್ದಿದ್ದು, ಸದ್ಯ ಜೀ ಕನ್ನಡ ವಾಹಿನಿ ಈ ವಾರ ಸಾಧಕರ ಕುರ್ಚಿ ಏರುವ ಅತಿಥಿಗಳು ಯಾರು ಎಂಬ ಮಾಹಿತಿ ರಿವೀಲ್ ಆಗಿದೆ. ಈ ವಾರ ಕೂಡ ಇಬ್ಬರೂ ಅತಿಥಿಗಳು ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದು, ಸದ್ಯ ಅತಿಥಿಗಳು ಯಾರು ಗೆಸ್ ಮಾಡಿ ಎಂದು ಝೀ ಪೋಸ್ಟ್ ನಲ್ಲಿ ಇಬ್ಬರು ಸಾಧಕರ ಬ್ಲರ್ ಫೋಟೋ ರಿಲೀಸ್ ಮಾಡಲಾಗಿದೆ.

ಈ ವಾರ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಳಪಾಕದಲ್ಲಿಯೂ ಸೈ ನಟನೆಗೂ ಜೈ ಎಂಬ ಸಿಹಿಕಹಿ ಚಂದ್ರು ಖ್ಯಾತ ನಟ, ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿದ್ದು, ತಮ್ಮ ಜೀವನದ ಸಿಹಿ ಕಹಿ ಘಟನೆಗಳನ್ನು ಹಂಚಿಕೊಳ್ಳಲಿದ್ದಾರೆ. ಮತ್ತೊಬ್ಬರು ಶಿಕ್ಷಣ ಕ್ಷೇತ್ರದ ಶಿರಮುಕುಟ ಅನೇಕ ವಿದ್ಯಾರ್ಥಿಗಳ ಪಾಲಿನ ಜ್ಞಾನದ ಬೆಳಕು ಡಾ. ಗುರುರಾಜ ಕರಜಗಿ ಜೀವನ ಮೌಲ್ಯಗಳ ಸಾರವನ್ನು ಜನರಿಗೆ ಅರ್ಥವಾಗುವಂತೆ ಸರಳವಾಗಿ ಸುಲಲಿತವಾಗಿ ಹೇಳುವ ಮೂಲಕ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಈ ವಾರದ ಸಾಧಕರ ಕೆಂಪು ಕುರ್ಚಿಯಲ್ಲಿ ಖ್ಯಾತ ಶಿಕ್ಷಣ ತಜ್ಞರಾಗಿರುವ ಮಹಾನ್ ವ್ಯಕ್ತಿ ಗುರುರಾಜ ಕರಜಗಿ ವಿರಾಜಿಸಲಿದ್ದಾರೆ. ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿರುವುದು ಮಾತ್ರವಲ್ಲದೇ ಅಕ್ಷರ ದಾಸೋಹ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಗಳು ಕಾರ್ಯಕ್ರಮದ ಶೋಭೆಯನ್ನು ದುಪ್ಪಟ್ಟು ಮಾಡುವುದರಲ್ಲಿ ಸಂಶಯವಿಲ್ಲ. ತಮ್ಮ ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಂದ ಹೆಚ್ಚು ಪರಿಚಿತರಾಗಿದ್ದಾರೆ. ಅಂತಾರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಗುರುರಾಜ ಕರ್ಜಗಿ ಅವರು ಉಳಿದವರಿಗೆ ಮಾದರಿಯಾಗಿದ್ದಾರೆ.

 

ಇದನ್ನು ಓದಿ: Karnataka Election 2023: ಬಿಜೆಪಿ ಪರ ಮೋದಿ ಪ್ರಚಾರ ; ಯಾವ ದಿನ ಎಲ್ಲೆಲ್ಲಿ ಸಮಾವೇಶ ನಡೆಯಲಿದೆ? ಮಾಹಿತಿ ಇಲ್ಲಿದೆ 

Leave A Reply

Your email address will not be published.