Samantha: ಸಮಂತಾ ಹತ್ತನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ವೈರಲ್!!!

Samantha: ಸೌತ್ ಸ್ಟಾರ್ ಸಮಂತಾ ರುತ್​ಪ್ರಭು(Samantha Ruth Prabhu) ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವುದು ಸಾಮಾನ್ಯವಾಗಿಬಿಟ್ಟಿದೆ. ಟಾಲಿವುಡ್​ನಲ್ಲಿ (Tollywood) ಅವರು ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದು, ಸಿನಿಮಾ ಮತ್ತು ವೆಬ್​ ಸಿರೀಸ್​ ಲೋಕದಲ್ಲಿ ಕೂಡ ತನ್ನ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ನಟಿ ಸಮಂತಾ ಎಸೆಸೆಲ್ಸಿ ಪರೀಕ್ಷೆಯ ಅಂಕಗಳು ಎಲ್ಲೆಡೆ ಹರಿದಾಡುತ್ತಿದ್ದು, ಅಭಿಮಾನಿಗಳಂತೂ ನಟಿಯ ಮಾರ್ಕ್ಸ್ ನೋಡಿ ಮೆಚ್ಚುಗೆಯ ಸುರಿಮಳೆಗೈದು ನಟಿಯ ನಟನೆಗೆ ಮಾತ್ರವಲ್ಲ ಬುದ್ಧಿವಂತಿಕೆಗೆ ಕೂಡ ಫುಲ್ ಮಾರ್ಕ್ಸ್ ಕೊಟ್ಟುಬಿಟ್ಟಿದ್ದಾರೆ.

ಸಿನೆಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ ಸಮಂತಾ (Samantha)ಅವರ ಶಾಕುಂತಲಂ ಸಿನಿಮಾ(Shaakuntalam Movie) ರಿಲೀಸ್ ಆಗುವ ಮೊದಲು ಭಾರೀ ನಿರೀಕ್ಷೆ ಹುಟ್ಟು ಹಾಕಿತ್ತು ಆದರೆ, ಅದೇಕೋ ಶಾಕುಂತಲಂ ಸಿನಿಮಾ ರಿಲೀಸ್ ಆದ ಬಳಿಕ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿಬಿಟ್ಟು ಸಮಂತಾ ಅವರ ನೋವಿನ ನಡುವೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ನಟಿಯ ಕಾಲೆಳೆಯುವ ಪ್ರಯತ್ನ ಮಾಡಿ ಜರಿಯುವ ಪ್ರಯತ್ನ ಮಾಡಿದವರು ಕೂಡ ಇದ್ದಾರೆ. ಯಾರೇನೇ ಅಂದರೂ ಕೂಡ ತನಗೆ ಟಾಂಗ್ ಕೊಟ್ಟವರಿಗೆ ಸರಿಯಾದ ಉತ್ತರ ನೀಡಿದ್ದು ಗೊತ್ತಿರುವಂತದ್ದೇ. ತನ್ನ ವೈಯಕ್ತಿಕ ಜೀವನದಲ್ಲಿ ಅದೆಷ್ಟೇ ಅಡೆತಡೆ ಬಂದರೂ ಸಮರ್ಥವಾಗಿ ಎದುರಿಸಿ ಮುನ್ನುಗ್ಗುತ್ತಿರುವ ಸ್ಯಾಮ್ ತಮ್ಮ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕ (Samantha Ruth Prabhu 10th Marks)ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಸಮಂತಾ ನಟನೆಯಲ್ಲಿ ಸೈ ಎನಿಸಿಕೊಂಡಿರುವುದು ಗೊತ್ತೇ ಇದೆ. ಆದರೆ, ಓದಿನ ವಿಚಾರದಲ್ಲಿ ಕೂಡ ಮುಂಚೂಣಿಯಲ್ಲಿದ್ದ ಎಸೆಸೆಲ್ಸಿ, ಪಿಯುಸಿ ನಂತರ ಪದವಿ ಪಡೆದಾಗ ಕೂಡ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಸಮಂತಾ ಅವರು ಚೆನ್ನೈನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದು 2001-2002ರ ಸಾಲಿನ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ನಡೆದ ಪರೀಕ್ಷೆಯಲ್ಲಿ (Samantha 10th Marks Card) ಇಂಗ್ಲಿಷ್​ನಲ್ಲಿ 100ಕ್ಕೆ 90 ಅಂಕ ಗಳಿಸಿದರೆ, ಗಣಿತದಲ್ಲಿ 100ಕ್ಕೆ 100 ಮಾರ್ಕ್ಸ್​ ಪಡೆಯುವ ಮೂಲಕ ಶಿಕ್ಷಕರ ಪಾಲಿನ ನೆಚ್ಚಿನ ವಿದ್ಯಾರ್ಥಿಯಾಗಿದ್ದರಂತೆ. ಅಷ್ಟೆ ಅಲ್ಲದೇ, ಸಮಂತಾ ಚೆನ್ನಾಗಿ ಪರೀಕ್ಷೆ ಬರೆದಿದ್ದಾಳೆ. ಈಕೆ ನಮ್ಮ ಶಾಲೆಯ ಆಸ್ತಿ’ ಎಂದು ರಿಪೋರ್ಟ್​ ಕಾರ್ಡ್​​ನಲ್ಲಿ ಶಿಕ್ಷಕರು ಉಲ್ಲೇಖ ಮಾಡಿದ್ದಾರೆ. ಇದನ್ನು ಕಂಡು ಸ್ಯಾಮ್ ಅಭಿಮಾನಿಗಳು ‘ಎಲ್ಲ ವಿದ್ಯಾರ್ಥಿಗಳಿಗೆ ಸಮಂತಾ ಸ್ಫೂರ್ತಿ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದರ ನಡುವೆ ಈ ಹಿಂದೆ ಒಮ್ಮೆ ಕಾರ್ಯಕ್ರಮ ಒಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಸಂದರ್ಭ ತಾನೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದೆ. ಎಲ್ಲಿಯವರೆಗೂ ಅಂದರೆ ವ್ಯಾಸಂಗ ಮುಗಿಯುವವರೆಗೆ..ಆ ಬಳಿಕ ಮುಂದೇನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. ಆ ನಡುವೆ ಖಿನ್ನತೆಗೆ ಕೂಡ ಒಳಗಾಗಿದ್ದೆ. ಹೀಗಾಗಿ ನೀವು ಮೊದಲು ಕನಸು ಕಾಣುವುದನ್ನು ಆರಂಭಿಸಬೇಕು. ನಿಮ್ಮ ಗುರಿಯ ಬಗ್ಗೆ ನಿಮಗೆ ಸ್ಪಷ್ಟತೆಯಿರಬೇಕು. ಇಂದು ನಾನು ಎಲ್ಲಿದ್ದೇನೆ ಎಂಬುದನ್ನು ನೀವೆಲ್ಲ ನೋಡುತ್ತಿದ್ದೀರಿ! ನನಗೆ ಗುರಿ ತಲುಪಲು ಸಾಧ್ಯವಾಯಿತು ಎಂದ ಮೇಲೆ ನಿಮ್ಮಿಂದ ಕೂಡ ಸಾಧ್ಯ ಎನ್ನುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ಕೂಡ ಮಾಡಿದ್ದರು. ಇಂದು ಸ್ಯಾಮ್ ಮಾಡಿರುವ ಶಾಕುಂತಲಮ್ ಸಿನಿಮಾ ಸೋತಿರಬಹುದು ಆದರೆ, ಆಕೆ ಸೋತಿಲ್ಲ. ಗೆಲುವನ್ನು ಸೋಲನ್ನು ಸಮಾನ ಮನಸ್ಕತೆಯಿಂದ ಎದುರಿಸಿ ಮುನ್ನುಗ್ಗುವ ಹಠ ಛಲ ಅವರಲ್ಲಿ ಇನ್ನೂ ಕೂಡ ದೃಢವಾಗಿದೆ ಎಂದು ಅವರ ಅಭಿಮಾನಿಗಳು ಕೂಡ ಬಲವಾಗಿ ನಂಬಿದ್ದಾರೆ.

 

ಇದನ್ನು ಓದಿ: UPI Payment : UPI ಮೂಲಕ ಹಣ ಕಳುಹಿಸಲು ಹೊಸ ಮಿತಿ ನಿಗದಿ! ಯಾವ ಬ್ಯಾಂಕ್ ಗ್ರಾಹಕರಿಗೆ ಎಷ್ಟು ಮಿತಿ ಇದೆ?

Leave A Reply

Your email address will not be published.